ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂ ಅಯೋಧ್ಯೆ ಶಾಖಾ ಮಠ ಭೂಮಿಪೂಜೆ 19ರಂದು

KannadaprabhaNewsNetwork | Published : May 12, 2025 12:01 AM
Follow Us

ಸಾರಾಂಶ

ದಕ್ಷಿಣದ ಅಯೋಧ್ಯೆ ಎಂದು ಖ್ಯಾತಿ ಹೊಂದಿರುವ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ಅಯೋಧ್ಯೆ ಶಾಖಾ ಮಠಕ್ಕೆ 19ರಂದು ಭೂಮಿ ಪೂಜೆ ನಡೆಯಲಿದೆ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಜಗದ್ಗುರು ಪೀಠದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿದಕ್ಷಿಣದ ಅಯೋಧ್ಯೆ ಎಂದು ಖ್ಯಾತಿ ಹೊಂದಿರುವ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ಅಯೋಧ್ಯೆ ಶಾಖಾ ಮಠಕ್ಕೆ 19ರಂದು ಭೂಮಿ ಪೂಜೆ ನಡೆಯಲಿದೆ ಎಂದು ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಜಗದ್ಗುರು ಪೀಠದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ನಿರ್ಮಾತೃ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ 9 ಕಡೆ ಶಾಖಾ ಮಠಗಳ ನಿರ್ಮಾಣ ನಡೆಯುತ್ತಿದ್ದು, ಈಗಾಗಲೇ ಉಡುಪಿ, ಹೊನ್ನಾವರ, ಭಟ್ಕಳ, ಕರಿಕಲ್, ದೇವಭೂಮಿ ಹರಿದ್ವಾರದಲ್ಲಿ ಶಾಖಾ ಮಠ ಹೊಂದಿದೆ. ಅಯೋದ್ಯೆ ಶಾಖಾ ಮಠಕ್ಕೆ ಜಾಗ ಖರೀದಿ ಮಾಡಿದ್ದು ಈ ಜಾಗದಲ್ಲಿ 19ರಂದು ಬೆಳಗ್ಗೆ 6ಗಂಟೆಯಿಂದ ಧಾರ್ಮಿಕ ವಿಧಿ ವಿಧಾನಗಳು,10 ಗಂಟೆಗೆ ಶಾಖಾ ಮಠದ ಶಿಲಾನ್ಯಾಸ, ಭೂಮಿ ಪೂಜೆ ನಡೆಯಲಿದೆ ಎಂದರು.

35 ಸಾವಿರ ಚದರ ಅಡಿಯ 4 ಮಹಡಿಯ ಕಟ್ಟಡದಲ್ಲಿ ರಾಮ ಮಂದಿರ, 700 ಜನರಿಗೆ ಬೇಕಾಗುವ ಧ್ಯಾನ ಮಂದಿರ, 40 ಕೊಠಡಿ ಹೊಂದಿದಂತೆ ಮಂದಿರ ಅಯೋದ್ಯೆ ಯ ಅಂಕ್ವಾರ ಭರತ್ ಕುಂಡ ರಸ್ತೆ ಯಲ್ಲಿ ನಿರ್ಮಾಣವಾಗಲಿದೆ.ಈ ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ, ರಾಜ್ಯ ಮಟ್ಟದ ನೇತಾರರು ಭಾಗವಹಿಸಲಿದ್ದಾರೆ.ಜುನಾ ಆಖಾಡದ ಆಚಾರ್ಯ ಮಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್, ಅಂತಾರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್, ರಾಣೋಪಾಲಿ ಅಯೋಧ್ಯೆಯ ಶ್ರೀ ಮಹಂತ್ ಡಾ. ಸ್ವಾಮಿ ಭರತ್ ದಾಸ್ ಜೀ ಮಹಾರಾಜ್, ಹರಿದ್ವಾರದ ಜುನಾ ಆಖಾಡದ ಶ್ರೀ ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್, ಅಯೋಧ್ಯೆ ದಿಗಂಬರ ಆಖಾಡದ ಮಹಂತ್ ಸುರೇಶ್ ದಾಸ್ ಜೀ ಮಹಾರಾಜ್, ಅಯೋಧ್ಯ ಚೋಟಿ ಚಾವಣಿಯ ಶ್ರೀ ಮಹಂತ್ ಕಮಲನಯನ್ ದಾಸ್ ಜೀ ಮಹಾರಾಜ್, ಬಡಾಭಕ್ತಮಹಲ್ ಅಯೋಧ್ಯಾ ಧಾಮ್ ನ ಶ್ರೀ ಮಹಂತ್ ಅವಧೇಶ್ ದಾಸ್ ಜೀ ಮಹಾರಾಜ್, ಅಯೋಧ್ಯಾ ಧಾಮ ರಾಮವಲ್ಲಭ ಕುಂಜದ ಶ್ರೀ ಮಹಂತ್ ರಾಜಕುಮಾರ್ ದಾಸ್ ಜೀ ಮಹಾರಾಜ್, ಹನುಮಾನ್ ಗಡಿಯ ಶ್ರೀ ಮಹಂತ್ ಸಂಜಯ್ ದಾಸ್ ಜೀ ಮಹಾರಾಜ್, ಶ್ರೀ ಮಹಂತ್ ರಾಜೂದಾಸ್ ಜೀ ಮಹಾರಾಜ್ ಮತ್ತಿತರರು ಉಪಸ್ಥಿತರಿರುವರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ರಾಷ್ಟೀಯ ಸ್ವಯಂಸೇವಕ ಸಂಘದ ಸಹ ಕಾರ್ಯವಾಹ ಮುಕುಂದ, ಅಯೋಧ್ಯೆ ರಾಮ ಜನ್ಮ ಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ, ಸಚಿವರಾದ ಮಾಂಕಾಳ್ ಎಸ್.ವೈದ್ಯ, ಮಧು ಬಂಗಾರಪ್ಪ, ಅಯೋಧ್ಯೆ ನಗರ ಶಾಸಕ ವೇದ ಪ್ರಕಾಶ್ ಗುಪ್ತ, ಅಯೋದ್ಯೆ ಸಂಸದ ಅವಧೇಶ್ ಪ್ರಸಾದ್, ಮಾಜಿ ಸಂಸದ ಲಲ್ಲೂ ಸಿಂಹ, ಅಯೋದ್ಯೆ ಗೋಸಾಹಿ ಗಂಜಿ ಶಾಸಕ ಅಭಯ್ ಸಿಂಹ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಂಗಳೂರು ಸಂಸದ ಬೃಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹರಿದ್ವಾರ ಶಾಸಕ ಮದನ್ ಕೌಶಿಕ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಸಿರ್ಸಿ ಶಾಸಕ ಭೀಮಣ್ಣ, ಅಯೋದ್ಯೆ ಜಿ. ಪ. ಅಧ್ಯಕ್ಷೆ ರೋಲಿ ಸಿಂಹ, ಅಯೋದ್ಯಾ ಧಾಮ್ ಮೇಯರ್ ಮಹಂತ್ ಗಿರೀಶ್ಪತಿ, ಅಯೋಧ್ಯೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಸಿಂಹ, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಅಯೋಧ್ಯೆ ಜಿ. ಪಂ. ಸದಸ್ಯ ದೇವತಾ ಪ್ರಸಾದ್ ಪಟೇಲ್, ಅಯೋದ್ಯೆ ಬ್ಲಾಕ್ ಪ್ರಮುಖ್ ಶಿವೇಂದ್ರ ಸಿಂಹ, ಅಯೋದ್ಯೆ ಅಂಕ್ವಾರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಮೌರ್ಯ, ಅಯೋದ್ಯೆ ಬಿಜೆಪಿ ವರಿಷ್ಠ ರಾಮಜನಮ್ ವರ್ಮ, ಮೋಹಸಿಂಪುರ್ ಅಮಿತ್ ಕುಮಾರ್ ಸಿಂಹ, ಅಯೋಧ್ಯೆ ದ್ವಾರಿಕಾ ಪ್ರಸಾದ್ ದುಬ್ ಮೊದಲಾದವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿ, ಭಟ್ಕಳ, ಉತ್ತರ ಕನ್ನಡ ಸೇರಿದಂತೆ ರಾಜ್ಯದಿಂದ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿದರು.

...................ಭಗವಂತನ ಅನುಸಂಧಾನಕ್ಕೆ ಅನುಕೂಲವಾರಣಾಸಿ,ನೈಮಿಷಾರಣ್ಯ ಮೊದಲಾದ ಪುಣ್ಯಸ್ಥಳಗಳಿಗೆ ಹತ್ತಿರದ ಸ್ಥಳವಾದ ಅಯೋಧ್ಯೆಯಲ್ಲಿ ಭಗವಂತನ ಅನುಸಂಧಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಖಾ ಮಠ ನಿರ್ಮಾಣಗೊಳ್ಳುತ್ತಿದೆ. ಇದು ಅಯೋಧ್ಯೆಯ ದೇಗುಲದಿಂದ 8 ಕಿಮೀ. ಹಾಗೂ ವಿಮಾನ ನಿಲ್ದಾಣದಿಂದ 6 ಕಿಮೀ ದೂರದಲ್ಲಿ ನಿರ್ಮಾಣಗೊಳ್ಳುತ್ತದೆ.-ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ.