ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಇದೇ ಸಂದರ್ಭದಲ್ಲಿ ತಿಪ್ಪೇಸ್ವಾಮಿಯವರ ಪುತ್ರ ಕೆ.ಟಿ.ಕುಮಾರಸ್ವಾಮಿಯವರಿಗೆ ರಾಜಕೀಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳಿದ್ದು, ತಾವು ಮತ್ತೊಮ್ಮೆ ಬಿಜೆಪಿ ಸೇರ್ಪಡೆಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ವಾಲ್ಮೀಕಿ ಸಮುದಾಯಕ್ಕೆ ದಿ.ತಿಪ್ಪೇಸ್ವಾಮಿಯವರು ಮಾಡಿರುವ ಸೇವೆ ಸ್ಮರಣೀಯ. ಅವರು ಇಡೀ ಬದುಕನ್ನು ಸಾರ್ವಜನಿಕರ ಸೇವೆಗಾಗಿ ಮೀಸಲಿಟ್ಟವರು. ಅವರ ಪುತ್ರರಾಗಿ ನೀವು ಸಹ ರಾಜಕೀಯ ಕ್ಷೇತ್ರದಲ್ಲಿ ಅವರಂತೆಯೇ ಮೇಲ್ಪಂಕ್ತಿಯ ಯುವನಾಯಕರಾಗಿ ಹೊರಹೊಮ್ಮಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸಿ ಬಿಜೆಪಿ ಗೆಲುವಿನಲ್ಲಿ ತಮ್ಮ ಪಾತ್ರ ಹೆಚ್ಚಾಗಿರಬೇಕು ಎಂದರು.ರಾಜ್ಯದ ಸಚಿವರಾಗಿ ಸೇವೆ ನಿರ್ವಹಿಸಿದ ಸಂದರ್ಭದಲ್ಲಿ ನಾನು ಸಹ ತಿಪ್ಪೇಸ್ವಾಮಿಯವರ ಜೊತೆಯಲ್ಲಿ ಸಚಿವರಾಗಿ ಸೇವೆ ಮಾಡಿದ್ದೇನೆ. ಸದಾಕಾಲ ಜನರ ಸೇವೆಯ ಬಗ್ಗೆ ಅವರು ಮಾತನಾಡುತ್ತಿದ್ದರು. ನಮ್ಮ ಅವರ ಒಡನಾಟ ಅತ್ಯಂತ ಸ್ನೇಹಮಯಿಯಾಗಿತ್ತು ಎಂದು ಸ್ಮರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಬಿಜೆಪಿ ಹಿರಿಯ ಮುಖಂಡ ಪಿ.ರಾಮಕೃಷ್ಣರೆಡ್ಡಿ, ಬಿಜೆಪಿ ಮುಖಂಡ, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ರಂಗಸ್ವಾಮಿ, ಬಂಡೆರಂಗಪ್ಪ, ವೆಂಕಟಪ್ಪ, ಬಿ.ಎಸ್.ಶಿವಪುತ್ರಪ್ಪ, ಚಿದಾನಂದ, ವೀರೇಶ್, ಕೆಂಪಮಂಜ ಉಪಸ್ಥಿತರಿದ್ದರು.