ಕನ್ನಡ ಭಾಷೆ ಉಳಿವಿಗೆ ಕರವೇ ಎಂತಹ ತ್ಯಾಗಕ್ಕೂ ಬದ್ಧ: ಗುರುಮೂರ್ತಿ

KannadaprabhaNewsNetwork |  
Published : Nov 09, 2025, 02:30 AM IST
6ಕೆಎಂಎನ್ ಡಿ26 | Kannada Prabha

ಸಾರಾಂಶ

ಕರವೇ ಕಾರ್ಯಕರ್ತರು ನಿತ್ಯ ಕನ್ನಡಾಂಭೆಯನ್ನು ಪೂಜಿಸುವ ಭಕ್ತರು. ಇಂತಹ ಕೆಲಸ ವರ್ಷಪೂರ್ತಿ ನಡೆಯಬೇಕಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಕನ್ನಡಿಗರೆ ವಲಸಿಗರಾಗುವಂತಾಗಿದ್ದು, ಈ ಸಣ್ಣ ಹಳ್ಳಿಗಾಡಿಗೂ ವ್ಯಾಪಿಸುತ್ತಿದೆ. ಇಂತಹ ಸಮಸ್ಯೆ ಉಲ್ಭಣಿಸುವ ಮುನ್ನ ಎಚ್ಚೆತ್ತು ಕನ್ನಡಿಗರ ಬಿಹಾರಿಗಳಂತೆ ಶ್ರಮಿಕ ಕೆಲಸಕ್ಕೆ ಮುಂದಾಗಬೇಕಿದೆ.

ಕಿಕ್ಕೇರಿ:

ಪ್ರಾಚೀನ ಇತಿಹಾಸವಿರುವ ಕನ್ನಡ ಭಾಷೆ ಕನಿಷ್ಠ ಮಟ್ಟದಲ್ಲಿಯಾದರೂ ಉಳಿಯಲು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಹೋರಾಟ ಸಹಕಾರಿಯಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ತಿಳಿಸಿದರು.

ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಕರವೇ ಕಾರ್ಯಕರ್ತರು ಗುರುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆ ಎನ್ನುವುದು ಮನೆ, ಮನದ ಮಾತನಾಡಿದಾಗ ಮಾತ್ರ ನಾಡು, ನುಡಿ ಎಲ್ಲವೂ ಗಟ್ಟಯಾಗಲಿದೆ ಎಂದರು.

ಕರವೇ ಕಾರ್ಯಕರ್ತರು ನಿತ್ಯ ಕನ್ನಡಾಂಭೆಯನ್ನು ಪೂಜಿಸುವ ಭಕ್ತರು. ಇಂತಹ ಕೆಲಸ ವರ್ಷಪೂರ್ತಿ ನಡೆಯಬೇಕಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಕನ್ನಡಿಗರೆ ವಲಸಿಗರಾಗುವಂತಾಗಿದ್ದು, ಈ ಸಣ್ಣ ಹಳ್ಳಿಗಾಡಿಗೂ ವ್ಯಾಪಿಸುತ್ತಿದೆ. ಇಂತಹ ಸಮಸ್ಯೆ ಉಲ್ಭಣಿಸುವ ಮುನ್ನ ಎಚ್ಚೆತ್ತು ಕನ್ನಡಿಗರ ಬಿಹಾರಿಗಳಂತೆ ಶ್ರಮಿಕ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.

ಕರವೇ ಹೋಬಳಿ ಅಧ್ಯಕ್ಷ ಸೊಳ್ಳೇಪುರ ಸುರೇಶ್ ಮಾತನಾಡಿ, ಕನ್ನಡ ಉಳಿಸಲು ಸರ್ಕಾರ, ಸಂಘ ಸಂಸ್ಥೆ, ಜನಪ್ರತಿನಿಧಿಗಳು ಮುಂದಾಗಬೇಕು. ಕನ್ನಡದ ಅಸ್ಮಿತೆ ಕಾಪಾಡಲು ಗಡಿಯಿಂದ ಒಳನಾಡಿನವರೆಗೆ ನಾವು ಹೋರಾಡಬೇಕು ಎಂದರು.

ಕನ್ನಡಿಗರು ಸ್ವಾಭಿಮಾನ ಮರೆಯದಿರಿ. ಅಂಗಡಿ, ಕಚೇರಿಗಳಲ್ಲಿ ಮೊದಲು ಕನ್ನಡದಲ್ಲಿ ನಾಮಫಲಕವಾಗಲಿ. ಬೀದಿಗಿಳಿದು ಕನ್ನಡ ನಾಡು, ನುಡಿಗಾಗಿ ಹೋರಾಡುವ ತಮಗೆ ಬೇಕಿರುವುದು ನಮ್ಮ ನಾಡಿನ ಹಕ್ಕು. ಕಾವೇರಿ ನಮ್ಮದು ಎನ್ನುವ ಸಮಸ್ಯೆಗಳ ಪರಿಹಾರ ಎಂದು ನುಡಿದರು.

ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸಹನಾ, ಮಮತಾ, ಅನಿಲ್ ಅವರಿಗೆ ಗೌರವ ಪುರಸ್ಕಾರ ಮಾಡಲಾಯಿತು. ಕರವೇ ಹೋಬಳಿ ಅಧ್ಯಕ್ಷ ಸೊಳ್ಳೇಪುರ ಸುರೇಶ್, ವಡ್ಕಳ್ಳಿ ಗೋವಿಂದ, ಮಾದಿಹಳ್ಳಿ ರಮೇಶ್, ಮುಖ್ಯಶಿಕ್ಷಕ ಶಾಂತಪ್ಪಾಜಿ, ಶಿಕ್ಷಕರಾದ ಪಾಪಣ್ಣ, ಮಧು, ಪರಶಿವಮೂರ್ತಿ, ಪಾರ್ವತಿ ಭಾಗವಹಿಸಿದ್ದರು.

ನ.೯ರಂದು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ

ಕನ್ನಡಪ್ರಭ ವಾರ್ತೆ ಮಂಡ್ಯ

ಆದರ್ಶ ಪದವಿ ಪೂರ್ವ ಕಾಲೇಜು, ನಾಗಾರ್ಜುನ ಎಜುಕೇರ್‌ ವತಿಯಿಂದ ನ.೯ರಂದು ನಗರದ ಆದರ್ಶ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜು ಆವರಣದಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗಾಗಿ ನೀಟ್, ಜೆಇಇ, ಕೆಸಿಇಟಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ನಾಗಾರ್ಜುನ ಎಜುಕೇರ್ ಸಂಸ್ಥೆ ವತಿಯಿಂದ ಪಿಯು ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿದೆ.

ಪ್ರವೇಶ ಪರೀಕ್ಷೆಯ ಮೂಲಕ ೫೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ನಾಗಾರ್ಜುನ ಎಜುಕೇರ್ ಮತ್ತು ಆದರ್ಶ ಪದವಿಪೂರ್ಪ ಕಾಲೇಜು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ adarshapucollege@gmail.com ಅಥವಾ ದೂರವಾಣಿ ಸಂಖ್ಯೆ ೯೦೭೧೦೫೫೧೧೪, ೮೪೯೬೦೫೦೦೬೯, ೯೬೨೦೬೧೫೩೭೩, ೯೪೪೮೮೭೭೮೯೩ ಸಂಖ್ಯೆಯನ್ನು ಸಂಪರ್ಕಿಸಲು ಆದರ್ಶ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ