ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ಪಾದಗಟ್ಟಿಯಿಂದ ಹಳೆ ಬಸ್ ನಿಲ್ದಾಣದವರೆಗಿನ ರಸ್ತೆ ಹದಗೆಟ್ಟು 7- 8 ವರ್ಷ ಕಳೆದರೂ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ ಎಂದು ಕರವೇ(ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಮಹೇಶ ಕಲಘಟಗಿ ನೇತೃತ್ವದಲ್ಲಿ ಮಂಗಳವಾರ ಸೋಮೇಶ್ವರ ಪಾದಗಟ್ಟಿಯ ಹತ್ತಿರ ಬಜಾರ್ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ರಸ್ತೆ ದುರಸ್ತಿಗೆ ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿ ಈಗಲಾದರೂ ರಸ್ತೆ ದುರಸ್ತಿಗೆ ಮುಂದಾಗಬೇಕು ಎಂದರು.
ಪ್ರತಿಭಟನಾಕಾರರೊಂದಿಗೆ ಶಾಸಕರು ಮಾತನಾಡಿ, ರಸ್ತೆ ದುರಸ್ತಿ ಮಾಡುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಅಧಿಕಾರಿಗಳು ಸಾಮಾನ್ಯ ನಿಧಿಯಿಂದ ಇನ್ನೊಂದು ತಿಂಗಳಲ್ಲಿ ರಸ್ತೆ ದುರಸ್ತಿ ಮಾಡಲು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಶಾಸಕರ ಮಾತಿಗೆ ಒಪ್ಪಿಗೆ ನೀಡಿ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.ಮಹೇಶ ಕಲಘಟಗಿ, ಅಂಬರೀಷ ಗಾಂಜಿ, ಶಕ್ತಿ ಕತ್ತಿ, ಮಂಜುನಾಥ ಗಾಂಜಿ, ನಾಗರಾಜ ಬಟಗುರ್ಕಿ, ಶಿವಾನಂದ ಮೆಕ್ಕಿ, ಬಸವರಾಜ ಕುಂಬಿ, ಆನಂದ ತಟ್ಟಿ, ಆಕಾಶ ಸವದತ್ತಿ, ಮಲ್ಲನಗೌಡ ಪಾಟೀಲ, ಕೊಟ್ರೇಶ ಕತ್ತಿ, ಪವನ ಹಗ್ಗರದ, ಶ್ರೇಯಾಂಕ ಹಿರೇಮಠ, ಹನುಮಂತ ಕುಂಬಾರ, ಅಭಿಷೇಕ ಘೋಂಗಡಿ, ಪವನ ಪಾಟೀಲ, ಕಾರ್ತಿಕ ನರೇಗಲ್ಲ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ ಬೀಳಗಿ, ಹನುಮಂತಪ್ಪ ನಂದೆಣ್ಣವರ, ಮಂಜುನಾಥ ಮುದಗಲ್ಲ, ಕಾಟೇವಾಲೆ ಸೇರಿದಂತೆ ಅನೇಕರು ಇದ್ದರು.