ಹುಕ್ಕೇರಿಮಠದ ಪ್ರಸಾದಕ್ಕಾಗಿ ಸಿದ್ಧಪಡಿಸಿದ ಕರ್ಚಿಕಾಯಿ, ಶೇಂಗಾ ಹೋಳಿಗೆ ಮೆರವಣಿಗೆ

KannadaprabhaNewsNetwork |  
Published : Dec 16, 2025, 02:00 AM IST
15ಎಚ್‌ವಿಆರ್2-  | Kannada Prabha

ಸಾರಾಂಶ

ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15 ವರ್ಷಗಳ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ಅಂಗವಾಗಿ ಸ್ಥಳೀಯ ಶಿವಬಸವ ನಗರ, ಶಿವಯೋಗೇಶ್ವರ ಬಡಾವಣೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.

ಹಾವೇರಿ: ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವ, ಶಿವಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುವರ್ಣ ಮಹೋತ್ಸವ, ಶಿವಬಸವೇಶ್ವರ ಪ್ರಸಾದ ನಿಲಯದ ಅಮೃತ ಮಹೋತ್ಸವ, ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಸುವರ್ಣ ಮಹೋತ್ಸವ, ಶಿವಬಸವ ಜಾನುವಾರು ಜಾತ್ರೆಯ ಸುವರ್ಣ ಮಹೋತ್ಸವ ಹಾಗೂ ಸದಾಶಿವ ಶ್ರೀಗಳ 15 ವರ್ಷಗಳ ಪಟ್ಟಾಧಿಕಾರದ ಸವಿನೆನಪಿಗಾಗಿ ರಜತ ತುಲಾಭಾರದ ಅಂಗವಾಗಿ ಸ್ಥಳೀಯ ಶಿವಬಸವ ನಗರ, ಶಿವಯೋಗೇಶ್ವರ ಬಡಾವಣೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಪಾದಯಾತ್ರೆ ಉದ್ದಕ್ಕೂ ರಸ್ತೆಯನ್ನು ರಂಗೋಲಿ ಮೂಲಕ ಸಿಂಗರಿಸಲಾಗಿತ್ತು. ಪಾದಯಾತ್ರೆಯಲ್ಲಿ ಆಗಮಿಸಿದ ಎಲ್ಲ ಪೂಜ್ಯರಿಗೆ ಪುಷ್ಪವೃಷ್ಟಿ ಮಾಡಲಾಯಿತು. ಮಹಿಳೆಯರು ಆರತಿ ಮೂಲಕ ಪರಮಪೂಜ್ಯರನ್ನು ಬರಮಾಡಿಕೊಂಡರು. ಸದಾಶಿವ ಶ್ರೀಗಳು ಬಡಾವಣೆ ಜನರನ್ನು ಜಾತ್ರಾ ಮಹೋತ್ಸವಕ್ಕೆ ಆಮಂತ್ರಿಸಿದರು.ಸಂಜೆ ಪ್ರವಚನ ಕಾರ್ಯಕ್ರಮಕ್ಕೆ ಮಾರನಬೀಡ, ವರ್ದಿ ಮತ್ತು ನರೇಗಲ್ಲ ಗ್ರಾಮದಿಂದ ಗ್ರಾಮಸ್ಥರು ಚಕ್ಕಡಿಯ ಮೂಲಕ ಆಗಮಿಸಿದ್ದರು. ನೂರಾರು ಮಹಿಳೆಯರು ಪ್ರಸಾದಕ್ಕಾಗಿ ಸಾವಿರಾರು ಕರ್ಚಿಕಾಯಿ, ಶೇಂಗಾ ಹೋಳಿಗೆಗಳನ್ನು ತಂದಿದ್ದರು. ಗ್ರಾಮಸ್ಥರನ್ನು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಹುಕ್ಕೇರಿಮಠದವರೆಗೆ ಮೆರವಣಿಯಲ್ಲಿ ಕರೆತರಲಾಯಿತು.ಸಂಜೆ ಕಾರ್ಯಕ್ರಮದಲ್ಲಿ ಲಿಂ.ಶಿವಬಸವ ಶ್ರೀಗಳ ಮೂರ್ತಿಗೆ ನಾಣ್ಯಗಳಿಂದ ತುಲಾಭಾರ ಕಾರ್ಯಕ್ರಮ ನಡೆಯಿತು. ಒಟ್ಟು 24 ಸದ್ಭಕ್ತರು ಈ ಸೇವೆಯಲ್ಲಿ ಪಾಲ್ಗೊಂಡಿದ್ದರು. ಕೊಟ್ನಿಕಲ್‌ನ ಅಮರೇಶ ಗವಾಯಿಗಳು ವಚನ ಸಂಗೀತ ನಡೆಸಿಕೊಟ್ಟರು. ಸಮಾರಂಭದಲ್ಲಿ ಹುಕ್ಕೇರಿಮಠ ಸದಾಶಿವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಶಿರಾಳಕೊಪ್ಪದ ವೀರಬಸವ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ನೆಹರು ಓಲೇಕಾರ, ಮಹೇಶ ಚಿನ್ನಿಕಟ್ಟಿ, ರಾಜಣ್ಣ ಮಾಗನೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!