ನುಗ್ಗೇಹಳ್ಳಿ ಸೊಸೈಟಿಗೆ ಅಧ್ಯಕ್ಷರಾಗಿ ಕಾರೇಕೆರೆ ಪ್ರಕಾಶ್‌ ಆಯ್ಕೆ

KannadaprabhaNewsNetwork |  
Published : Sep 18, 2026, 01:30 AM IST
ನುಗ್ಗೇಹಳ್ಳಿ  ಹೋಬಳಿ ಕೇಂದ್ರದ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಅಧ್ಯಕ್ಷ ಸ್ಥಾನಕ್ಕೆ  ಗುರುವಾರ ನಡೆದ ಚುನಾವಣೆಯಲ್ಲಿ  ಜೆಡಿಎಸ್ ಬೆಂಬಲಿತ    ಕಾರೇ ಕೆರೆ ಪ್ರಕಾಶ್ ಅವಿರೋಧವಾಗಿ ಆಯ್ಕೆಗೊಂಡ ಹಿನ್ನಲೆಯಲ್ಲಿ  ಶಾಸಕ ಸಿಎನ್ ಬಾಲಕೃಷ್ಣ ಅಭಿನಂದಿಸಿದರು. | Kannada Prabha

ಸಾರಾಂಶ

ಈ ಹಿಂದೆ ಅಧ್ಯಕ್ಷರಾಗಿದ್ದ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾರೇಕೆರೆ ಪ್ರಕಾಶ್ ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು. ನೂತನ ಅಧ್ಯಕ್ಷ ಕಾರೇಕೆರೆ ಪ್ರಕಾಶ್ ಅವರನ್ನು ಶಾಸಕ ಸಿ ಎನ್ ಬಾಲಕೃಷ್ಣ ಅಭಿನಂದಿಸಿದರು. ಅಧ್ಯಕ್ಷ ಕಾರೇಕೆರೆ ಪ್ರಕಾಶ್ ಮಾತನಾಡಿ ಶಾಸಕರ ಸಲಹೆ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ವಿಭಾಗದ ಹೊಸ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿ ಕೇಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಕಾರೇಕೆರೆ ಪ್ರಕಾಶ್ ಅವಿರೋಧವಾಗಿ ಆಯ್ಕೆಗೊಂಡರು.ಈ ಹಿಂದೆ ಅಧ್ಯಕ್ಷರಾಗಿದ್ದ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಕಾರೇಕೆರೆ ಪ್ರಕಾಶ್ ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯೇಂದ್ರ ಘೋಷಿಸಿದರು. ನೂತನ ಅಧ್ಯಕ್ಷ ಕಾರೇಕೆರೆ ಪ್ರಕಾಶ್ ಅವರನ್ನು ಶಾಸಕ ಸಿ ಎನ್ ಬಾಲಕೃಷ್ಣ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ನುಗ್ಗೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಈ ಭಾಗದ ಸಾವಿರಾರು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ ಸಂಘ ಹೆಚ್ಚು ಲಾಭಗಳಿಸಲು ಪಿಗ್ಮಿ ಸೇರಿದಂತೆ ನಿವಳ ಠೇವಣಿಗೆ ಹೆಚ್ಚು ಆದ್ಯತೆ ನೀಡಿದರೆ ಲಾಭಗಳಿಸಲು ಸಾಧ್ಯ ನೂತನ ಅಧ್ಯಕ್ಷರು ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು. ಅಧ್ಯಕ್ಷ ಕಾರೇಕೆರೆ ಪ್ರಕಾಶ್ ಮಾತನಾಡಿ ಶಾಸಕರ ಸಲಹೆ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ವಿಭಾಗದ ಹೊಸ ರೈತರಿಗೆ ಸಾಲ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಲೂಕು ಟಿ ಎ ಪಿ ಎಮ್ ಎಸ್ ನಿರ್ದೇಶಕ ತೋಟಿ ನಾಗರಾಜ್, ಸಂಘದ ಉಪಾಧ್ಯಕ್ಷ ಚಂದ್ರಣ್ಣ, ತಾಪಂ ಮಾಜಿ ಸದಸ್ಯ ಪುಟ್ಟಸ್ವಾಮಿ, ನಿರ್ದೇಶಕರಾದ ಗೌರಮ್ಮ ತೋಪೇಗೌಡ, ವಿಕ್ಟರ್‌, ಎಚ್ ಬಿ ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್‌, ಕೃಷ್ಣೇಗೌಡ, ಮಾಯಮ್ಮ, ಕೋಮಲ ಕುಮಾರಸ್ವಾಮಿ, ಮುಖಂಡರಾದ ಎನ್ಎಸ್ ಮಂಜುನಾಥ್, ಉದ್ಯಮಿ ಜಗದೀಶ್, ಹಿರಿಯಣ್ಣ ಗೌಡ, ಹೊನ್ನೇಗೌಡ, ಯಲ್ಲಪ್ಪ, ಚಂದ್ರಣ್ಣ, ಗಿರೀಶ್, ಕಾಳೇಗೌಡ, ಕೃಷ್ಣ, ನಿಂಗರಾಜ್, ನಂಜಾಮರಿ, ವಿನೋದ, ಜಯಕುಮಾರ್‌, ಶೇಖರಾಚಾರ್‌, ಸುರೇಶ ಆಚಾರ್‌, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್ ಕೆ ಅಭಿಲಾಷ್‌, ಸಂಘದ ಸಿಇಒ ವಿನಯ್ ಡಿ. ಸಿಬ್ಬಂದಿಯಾದ ರುದ್ರೇಶ್, ಮಂಗಳಮ್ಮ, ನಂಜುಂಡಿ, ಕುಮಾರಿ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜಿಲ್ಲೆಯ ಸೌಕರ್ಯ ಮೇಲ್ದರ್ಜೆಗೆ: ಸಾಗರ ಖಂಡ್ರೆ
ವಿಮೋಚನೆಗೆ ಹೋರಾಡಿದವರ ತ್ಯಾಗ ಬಲಿದಾನ ಸ್ಮರಿಸಿ: ಸಚಿವ ಈಶ್ವರ ಖಂಡ್ರೆ