ಬ್ಯಾಡಗಿ: ಕಾರ್ಗಿಲ್ ಯುದ್ಧ ಸೀಮಿತ ಸಂಘರ್ಷವಾಗಿದ್ದರೂ ರಾಷ್ಟ್ರದ ಸ್ಥಿತಿ ಸ್ಥಾಪಕತ್ವ ಮತ್ತು ಸಂಘರ್ಷದ ಸಮಯದಲ್ಲಿ ಪ್ರದರ್ಶಿಸಲಾದ ಶೌರ್ಯ ನೆನಪಿಸುತ್ತಿದ್ದು, ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವಿನ ಸಮರವಾಗಿದ್ದರಿಂದ ವಿಶ್ವವೇ ಯುದ್ದದ ವಿಜಯವನ್ನು ಎದುರು ನೋಡುತ್ತಿದ್ದವು ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ ಅಭಿಪ್ರಾಯಪಟ್ಟರು.
ಉಪ್ಪಾರ ಮಾತನಾಡಿ, ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಯುದ್ದಕ್ಕೂ ಭಾರತೀಯ ಪ್ರದೇಶಕ್ಕೆ ನುಸುಳಿದರು, ಶ್ರೀನಗರ-ಲೇಹ್ ಹೆದ್ದಾರಿ ಮಾರ್ಗ ಕಡಿತಗೊಳಿಸುವುದು ಇವರ ಉದ್ದೇಶವಾಗಿತ್ತು, ಆದರೆ ಆಪರೇಷನ್ ವಿಜಯ ಮೂಲಕ ಆಕ್ರಮಿತ ಶಿಖರಗಳ ಮೇಲೆ ದಾಳಿ ನಡೆಸುವ ಮೂಲಕ ಹಿಡಿತ ಸಾಧಿಸಿತು. ಪರ್ವತ ಪ್ರದೇಶದಲ್ಲಿ ನಡೆಸಿದ ಯುದ್ಧವು ಅತ್ಯಂತ ಸವಾಲಿನ ಕಠಿಣ ಪರಿಸ್ಥಿತಿ ನಮ್ಮ ಸೈನಿಕರು ಎದುರಿಸಬೇಕಾಯಿತು ಎಂದರು.
557 ಸೈನಿಕರು ಅಮರ:ಮಾಜಿ ಸೈನಿಕ ಮಹದೇವಪ್ಪ ಬಣಕಾರ ಮಾತನಾಡಿ, ಕಾರ್ಗಿಲ್ ವಿಜಯ ಸುಮ್ಮನೆ ಬಂದಿದ್ದಲ್ಲ, ಬದಲಾಗಿ ನಮ್ಮ ಸೈನಿಕರು 3 ತಿಂಗಳ ಕಾಲ ನಿರಂತರ ಹೋರಾಟ ಮಾಡಿದ್ದಲ್ಲದೇ ಒಟ್ಟು 527 ಸೈನಿಕರ ಬಲಿದಾನದಿಂದ ಬಂದಿದೆ, ನೂರಾರು ಸೈನಿಕರು ಇಂದಿಗೂ ಶಾಶ್ವತ ಅಂಗವಿಕಲರಾಗಿದ್ದಾರೆ, ಕ್ಯಾಪ್ಟನ್ ವಿಕ್ರಮ್ ಭಾತ್ರಾ ಮತ್ತು ಲೆಫ್ಟಿನೆಂಟ್ ಮನೋಜಕುಮಾರ ಪಾಂಡೆ ತ್ಯಾಗದಿಂದ ಯುದ್ಧ ಗೆಲ್ಲಲು ಸಾಧ್ಯವಾಯಿತು ಎಂದರು.