ಬ್ಯಾಡಗಿ: ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೈನ್ಯದ ಶಕ್ತಿ ವಿಶ್ವಕ್ಕೆ ಪರಿಚಯಿಸಲಾಗಿದೆ, ಅದರಲ್ಲೂ ಆತ್ಮ ನಿರ್ಭರ ಯೋಜನೆಯಡಿ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿ ಜಗತ್ತನ್ನೇ ಬೆರಗಾಗಿಸಿದ್ದು ಯುದ್ದದ ಸಂದರ್ಭ ಸ್ವಾವಲಂಬಿಯಾಗಿ ಎದುರಿಸುವ ಶಕ್ತಿ ನೀಡಿದೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ ತಿಳಿಸಿದರು.
ಕಾರ್ಗಿಲ್ ಯುದ್ಧದ ವಿಜಯದಿಂದ ಸ್ವತಂತ್ರ ಭಾರತದಲ್ಲಿ ಈಡೀ ಜಗತ್ತಿಗೆ ಭಾರದ ಸೈನಿಕರ ಶಕ್ತಿ ಎನೆಂಬುದನು ತೋರಿಸಿಕೊಟ್ಟಿದೆ, ನಮ್ಮ ಸೈನಿಕರ ತ್ಯಾಗ ಬಲಿದಾನಗಳಿಂದ ಅಂತಿಮವಾಗಿ ವಿರೋಧಿ ಪಾಕಿಸ್ತಾನವನ್ನು ಮಂಡಿಯೂರಿವಂತೆ ಮಾಡಿದೆ ಎಂದರು.
ಹುನ್ನಾರ:ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ ಮಾತನಾಡಿ, ಪಾಕ್ ತನ್ನ ಕುತಂತ್ರಿ ಬುದ್ಧಿಯನ್ನು ಮತ್ತೊಮ್ಮೆ ತೋರಿಸಿ ಗುಳ್ಳೆನರಿಯಂತೆ ಭಾರತದ ಕಾರ್ಗಿಲ್ ವಶಪಡಿಕೊಂಡು ಭಾರತ ಮೇಲೆ ಪ್ರಭುತ್ವ ಸಾಧಿಸಲು ಮುಂದಾಗಿತ್ತು, ಇದನ್ನು ಅರಿತ ಭಾರತೀಯ ಸೈನಿಕರು ಅತ್ಯಂತ ಕಡಿಮೆ ಸಮಯದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೇ ಕ್ಲಿಷ್ಟ,ಸನ್ನಿವೇಶ ಹಾಗೂ ಪ್ರದೇಶದಲ್ಲಿ ವಿರಾವೇಷದಿಂದ ಹೋರಾಡಿ ಭಾರತದ ಸಾರ್ವಭೌಮ ಅಧಿಕಾರ ಕಸಿದುಕೊಳ್ಳುವ ಹುನ್ನಾರ ನಡೆಸಿದ್ದ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಹದೇವಪ್ಪ ಬಣಕಾರ ಹಾಗೂ ರಾಜಶೇಖರ ಹೊಸಳ್ಳಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.