ಚಿತ್ರದುರ್ಗ: ಲೋಕಸಭೆಯ ಚಿತ್ರದುರ್ಗ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶ ಇವಿಎಂನಲ್ಲಿ ಅಡಗಿದ್ದು ಚಿತ್ರದುರ್ಗದ ಸರ್ಕಾರ ವಿಜ್ಞಾನ ಕಾಲೇಜು ಸ್ಟ್ರಾಂಗ್ ರೂಂ ನಲ್ಲಿ ಜೂ.4ರವರೆಗೆ ಭದ್ರವಾಗಿ ಇಡಲಾಗಿದೆ. ಬಿಜೆಪಿ ಅಭ್ಯರ್ಥಿ ಕಾರಜೋಳ, ಕೈ ಅಭ್ಯರ್ಥಿ ಚಂದ್ರಪ್ಪ ಅವರುಗಳ ರಾಜಕೀಯ ಭವಿಷ್ಯ ಏನಾಗಬಹದು ಎಂಬ ಕುತೂಹಲ ಇನ್ನೊಂದು ತಿಂಗಳುಗಳವರೆಗೆ ಮಂದುವರಿಯಲಿದೆ.
73.30ರಷ್ಟು ಮತದಾನ
ಚಿತ್ರದುರ್ಗ ಲೋಕಸಭೆಗೆ ಏ.26ರಂದು ಶುಕ್ರವಾರ ಜರುಗಿದ ಚುನಾವಣೆಯಲಯ್ಲಿ ಶೇ.73.30ರಷ್ಟು ಮತದಾನವಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 18,56,876 ಮತದಾರರಲ್ಲಿ 13,61,031 ಮತದಾರರು ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದಾರೆ.ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.75.75ರಷ್ಟು ಮತದಾನವಾಗಿದೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಲ್ಲಿ 125730 ಪುರುಷ, 124968 ಮಹಿಳೆ, 13 ಇತರೆ ಮತದಾರರು ಸೇರಿ ಒಟ್ಟು 250711 ಮತದಾರರು ಇದ್ದಾರೆ. ಇದರಲ್ಲಿ 96329 ಪುರುಷ, 93569 ಮಹಿಳೆ, 7 ಇತರೆ ಮತದಾರರು ಸೇರಿ 189905 ಮತದಾರರು ಮತ ಚಲಾಯಿಸಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.69 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 131358 ಪುರುಷ, 136415 ಮಹಿಳೆ ಹಾಗೂ 41 ಇತರೆ ಸೇರಿ ಒಟ್ಟು 267814 ಮತದಾರರು ಇದ್ದಾರೆ. ಇದರಲ್ಲಿ 94999 ಪುರುಷ, 94302 ಮಹಿಳೆ ಹಾಗೂ 20 ಇತರೆ ಸೇರಿ ಒಟ್ಟು 189321 ಮತದಾರರು ಮತಚಲಾಯಿಸಿದ್ದಾರೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.75.45 ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 118806 ಪುರುಷ, 119554 ಮಹಿಳೆ ಹಾಗೂ 10 ಇತರೆ ಸೇರಿ ಒಟ್ಟು 238370 ಮತದಾರರು ಇದ್ದಾರೆ. ಇದರಲ್ಲಿ 92421 ಪುರುಷ, 87421 ಮಹಿಳೆ ಹಾಗೂ 2 ಇತರೆ ಮತದಾರರು ಸೇರಿ ಒಟ್ಟು 179844 ಮತದಾರರು ಮತಚಲಾಯಿಸಿದ್ದಾರೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಶೇ.70.52ರಷ್ಟು ಮತದಾನವಾಗಿದೆ. ಕ್ಷೇತ್ರದಲ್ಲಿ 100873 ಪುರುಷ, 97358 ಮಹಿಳೆ ಹಾಗೂ 9 ಇತರೆ ಸೇರಿ ಒಟ್ಟು 198240 ಮತದಾರರು ಇದ್ದಾರೆ. ಇದರಲ್ಲಿ 70997 ಪುರುಷ, 68801 ಮಹಿಳೆಯರು ಸೇರಿ ಒಟ್ಟು 139798 ಮತದಾರರು ಮತಚಲಾಯಿಸಿದ್ದಾರೆ.