ಬಿ.ಎಸ್.ಸುನೀಲ್
ಕಾರ್ಕಹಳ್ಳಿಯಲ್ಲಿ ಪುರಾಣ ಪ್ರಸಿದ್ಧ ಶ್ರೀಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ.
ಮಾ.28 ರಂದು ಪಟ್ಟಲದಮ್ಮನ ಕೊಂಡೋತ್ಸವದೊಂದಿಗೆ ಹಬ್ಬಕ್ಕೆ ಚಾಲನೆ ದೊರತಿದೆ. ಮನೆ ದೇವರ ದೇವಾಲಯಗಳಲ್ಲಿ ಹೋಮ ನಡೆದು ಹಬ್ಬಕ್ಕೆ ಗ್ರಾಮವು ನವ ವಧುವಂತೆ ಸಿಂಗಾರಗೊಳ್ಳುತ್ತಿದೆ.ಮುಜರಾಯಿ ಇಲಾಖೆಗೆ ದೇಗುಲ ಒಳಪಟ್ಟಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಬ್ಬ ನಡೆಸಲು ಚಾಲನೆ ಸಿಕ್ಕಿದೆ. ಗ್ರಾಮಸ್ಥರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ.
ಮಾ.3 ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸಲಿದ್ದಾರೆ. ಜಾತ್ರಾ ಮಹೋತ್ಸವದ ಕೇಂದ್ರ ಬಿಂದು ರಥೋತ್ಸವವು ಮಾ.4ರ ಸಂಜೆ 4 ಗಂಟೆಗೆ, ಮಾ.5 ರಂದು ದೇವೇಗೌಡನದೊಡ್ಡಿ ಗ್ರಾಮದಲ್ಲಿ ಕಾರ್ಕಹಳ್ಳಿ ಶ್ರೀ ಬಸವೇಶ್ವರ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಗುವುದು. ಮಾ.8 ರಂದು ಶ್ರೀ ಮುತ್ತುರಾಯ ಸ್ವಾಮಿಯ ಸೇವೆ ಜರುಗಲಿದೆ.
ಮೈಸೂರು ಜಿಲ್ಲೆಯ ಕಾರುಗಹಳ್ಳಿಯಲ್ಲಿ ಮೇರವೇಗೌಡ, ಹಂಚಿಗಯ್ಯ ಮತ್ತು ನಂಜಯ್ಯ ಎಂಬುವರು ಇದ್ದು ಅವರ ಮನೆಯಲ್ಲಿ ಎರಡು ಸೂರದ್ರೂಪಿ ಹೆಣ್ಣು ಮಕ್ಕಳಿದ್ದರು. ಅದೇ ಗ್ರಾಮದ ಕ್ಷೌರಿಕ ಸಮೂದಾಯದ ಯುವಕರು ಅವರನ್ನು ವಿವಾಹ ಮಾಡಿಕೊಳ್ಳಲು ಮುಂದಾದಾಗ ಮೇರೇವೇಗೌಡ ಕುಟುಂಬ ವಿರೋಧಿಸಿತು.
ಕಾಲ ಕ್ರಮೇಣ ಮನೆ ಕಟ್ಟಿ ಕೊಂಡು ಜೀವನ ನಡೆಸುತಿದ್ದರು. ಜೀವನೊಪಯಕ್ಕಾಗಿ ಮೂಡಲ ಸಿಮೇಗೆ ತೆರಳಿ ಎಣ್ಣೆ ಹರಳಿನ ವ್ಯಾಪರ ನಡೆಸುತ್ತ ಜೀವನ ನಡೆಸುತಿದ್ದರು. ಈ ವೇಳೆ ಒಂದು ಹುಣ್ಣಿಮೆ ದಿನ ನಂಜಯ್ಯ ಮತ್ತು ಮಂಚಿಗಯ್ಯ ವ್ಯಾಪರ ಮುಗಿಸುಕೊಂಡು ಹೋಗುತ್ತಿದ್ದಾಗ ಕತ್ತಲೆ ಆವರಿಸಿತು. ಆ ವೇಳೆ ಹಲಗೂರು ಸಮೀಪವಿರುವ ಕೆಮ್ಮಾಳು ಗ್ರಾಮದ ಕೆಂಡಗಣ್ಣು ಬಸವೇಶ್ವರ ದೇವಾಲಯದಲ್ಲಿ ತಂಗಿದರು.
ಗುರುಗಳು ಪೂಜೆ ಪುನಸ್ಕಾರಗಳನ್ನು ನಡೆಸಿ ಬಸಪ್ಪನನ್ನು ತಮ್ಮ ದಿವ್ಯಾ ದೃಷ್ಟಿಯಿಂದ ನೇಮಕ ಮಾಡಿದರು. ಕಾಲಾ ಕ್ರಮೇಣ ದೇವಾಲಯ ಪ್ರಸಿದ್ದಿಯಾಗಿ ಬಸಪ್ಪ ಕಳ್ಳ ಕಾಕರಿಗೆ ಸಿಂಹ ಸ್ವಪ್ನವಾಗಿ ಕಾಡಿತು. ಕಾರುಗಹಳ್ಳಿ ಎಂದು ಕರೆಯುತ್ತುದ್ದು, ನಂತರ ದಿನಗಳಲ್ಲಿ ಕಾರುಕಹಳ್ಳಿಯಾಗಿ ಜನಜನಿತವಾಯಿತು. ದೇವೇಗೌಡನದೊಡ್ಡಿಯತು ಸಹ ಕಾರ್ಕಹಳ್ಳಿಯಿಂದ ಒಲಸೆ ಹೋದವರು ಎಂಬುವುದು ಪ್ರತೀತಿಯಿದೆ.