ಕನ್ನಡಪ್ರಭ ವಾರ್ತೆ ಕಾರ್ಕಳ
ಉಡುಪಿಯ ಹಿರಿಯ ಕಲಾ ಪೋಷಕರಾದ ಯು. ವಿಶ್ವನಾಥ ಶೆಣೈ- ಪ್ರಭಾವತಿ ವಿ. ಶೆಣೈ ದಂಪತಿ ಪ್ರಾಯೋಜಕತ್ವದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಸಮಾರಂಭ ಆಯೋಜಿಸಿತ್ತು.ಅಧ್ಯಕ್ಷತೆ ವಹಿಸಿದ್ದ ದೇವಳದ ಮೊಕ್ತೇಸರ ರಮೇಶ ಕಾರ್ಣಿಕ್, ತಂತ್ರಜ್ಞಾನದ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿರುವ ನಮ್ಮ ಕಲೆ, ಸಂಸ್ಕೃತಿ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಉಡುಪಿ ಕಲಾರಂಗದ ಕಾರ್ಯ ಪ್ರಶಂಸಾರ್ಹ ಎಂದು ಹೇಳಿದರು.
ಮಹಾವೀರ ಪಾಂಡಿ ಸಮ್ಮಾನಿತರನ್ನು ಪರಿಚಯಿಸಿದರು. ನಿರಂಜನ ಭಟ್ ಅವರೊಂದಿಗಿನ ಒಡನಾಟ ಸ್ಮರಿಸಿದರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಪ್ರಶಸ್ತಿಯು ೨೦ ಸಾವಿರ ರು. ನಗದು ಪುರಸ್ಕಾರ, ಪ್ರಶಸ್ತಿ ಪರಿಕರ ಒಳಗೊಂಡಿತ್ತು.ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಪ್ರಶಾಂತ ಕಾಮತ್, ವಿನಾಯಕ ಬಾಳಿಗಾ, ದೇವಳದ ಅರ್ಚಕರಾದ ಪದ್ಮನಾಭ ಭಟ್, ಜಗದೀಶ್ ಭಟ್, ಪಂಚಾಯಿತಿ ಅಧ್ಯಕ್ಷೆ ಸುನೀತಾ, ಧರ್ಮರಾಜ ಹೆಗ್ಡೆ, ರಾಮರಾಯ ನಾಯಕ್ ಮತ್ತು ಕೆರ್ವಾಶೆಯ ನಾಗರಿಕರು ಇದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.