ನಾಳೆಯಿಂದ ರಂಗಾಯಣದಲ್ಲಿ ರಂಗಸಂಭ್ರಮ

KannadaprabhaNewsNetwork |  
Published : Mar 21, 2025, 12:36 AM IST
8 | Kannada Prabha

ಸಾರಾಂಶ

ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆಯುವ ನಾಟಕೋತ್ಸವ

ಕನ್ನಡಪ್ರಭ ವಾರ್ತೆ ಮೈಸೂರುಒಂದಿಲ್ಲೊಂದು ಕಾರ್ಯಕ್ರಮದ ಮೂಲಕ ರಂಗಾಸಕ್ತರಿಗೆ ರಸದೌತಣ ನೀಡುವ ನಗರದ ರಂಗಾಯಣವು ಮಾ. 22 ರಿಂದ 27 ರವರೆಗೆ ರಂಗಸಂಭ್ರಮ ನಾಟಕೋತ್ಸವ ಆಯೋಜಿಸಿದೆ.ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆಯುವ ನಾಟಕೋತ್ಸವದಲ್ಲಿ ವಿಚಾರ ಸಂಕಿರಣ, ಜಾನಪದ, ರಂಗಗೀತೆಗಳು, ರಂಗ ಗೌರವ, ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ತಲಕಾಡು ರಾಜೇಶ್ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.ಮಾ. 22ರಂದು ಸಂಜೆ 6ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ ರಂಗ ಸಂಭ್ರಮಕ್ಕೆ ಚಾಲನೆ ನೀಡುವರು. ಶಾಸಕ ಕೆ. ಹರೀಶ್ ಗೌಡ, ರಂಗ ನಿರ್ದೇಶಕಿ ಕೆ.ಆರ್. ಸುಮತಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.ಮಾ. 23ರಂದು ಬೆಳಗ್ಗೆ 10ಕ್ಕೆ ಕಾರಂತ ರಂಗ ಚಾವಡಿಯಲ್ಲಿ ನಡೆಯುವ ವಿಚಾರ ಸಂಕಿರಣವನ್ನು ಐಪಿಎಸ್ ಅಧಿಕಾರಿ ಧರಣಿದೇವಿ ಮಾಲಗತ್ತಿ ಉದ್ಘಾಟಿಸುವರು. ರಂಗ ನಿರ್ದೇಶಕ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸುವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಭಾಗವಹಿಸುವರು. ಈ ವೇಳೆ ಸಿಜಿಕೆ ಅವರ ಸಾಕ್ಷ್ಯಚಿತ್ರ ಪ್ರದರ್ಶನವಾಗಲಿದೆ ಎಂದರು.ಈ ವೇಳೆ ಸಿಜಿಕೆ ದೃಷ್ಟಿಯಲ್ಲಿ ಆಧುನಿಕ ಕನ್ನಡ ರಂಗಭೂಮಿಯಲ್ಲಿ ತಳ ಸಮುದಾಯಗಳ ನಿರೂಪಣೆ ವಿಷಯದ ಕುರಿತು ರಂಗಾಯಣದ ಮಾಜಿ ನಿರ್ದೇಶಕ ಎಚ್. ಜರ್ನಾಧನ್ (ಜನ್ನಿ) ಮಾತನಾಡುವರು. ಸಂಘಟನೆ, ಸಮುದಾಯ, ಸಾಮಾಜಿಕ ಚಳವಳಿಗಳಲ್ಲಿ ಸಿಜಿಕೆ ಪಾತ್ರದ ಕುರಿತು ಗುಂಡಣ್ಣ ಚಿಕ್ಕಮಗಳೂರು ವಿಷಯ ಮಂಡಿಸುವರು. ಕತ್ತಾಲೆ ಬೆಳದಿಂಗಳೊಳಗ, ಕನ್ನಡ ರಂಗಭೂಮಿಯ ಆತ್ಮಚರಿತ್ರೆ ವಿಷಯವನ್ನು ಪ್ರೊ.ಎಸ್.ಆರ್. ರಮೇಶ್ ಮಂಡಿಸುವುದಾಗಿ ಅವರು ವಿವರಿಸಿದರು. ನಾಟಕಗಗಳುಮಾ. 22ರಂದು ಸಂಜೆ 6.30ಕ್ಕೆ ಭೂಮಿಗೀತಾ ಸಭಾಂಗಣದಲ್ಲಿ ಮಹಾದೇವ ಹಡಪದ ನಿರ್ದೇಶನದಲ್ಲಿ ಧಾರವಾಡದ ಆಟ ಮಾಟ ತಂಡವೂ ಗುಡಿಯ ನೋಡಿರಣ್ಣ ನಾಟಕ ಪ್ರದರ್ಶಿಸಲಿದೆ. 23ರಂದು ಸಂಜೆ 6.30ಕ್ಕೆ ಎಚ್.ಕೆ. ದ್ವಾರಕನಾಥ್ ನಿರ್ದೇಶನದಲ್ಲಿ ರಂಗಾಯಣದ ಹಿರಿಯ ಕಲಾವಿದರು ಮಿ ಬೋಗಿಸ್ ನಾಟಕ ಪ್ರದರ್ಶಿಸುವರು.ಮಾ. 24ರಂದು ಸಂಜೆ 6.30ಕ್ಕೆ ಮೈಸೂರಿನ ಅರಳಿ ರಂಗತಂಡವೂ ಪಾವನ ಧನರಾಜ್ ನಿರ್ದೇಶನದಲ್ಲಿ ‘ಉರುವಿ’ ನಾಟಕ ಪ್ರಸ್ತುತಪಡಿಸಿದರೆ, ಮಾ. 25ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅಭಿನಯ ತರಂಗ ತಂಡವೂ ಮಂಜುನಾಥ್ ಆರ್. ಬಡಿಗೇರ್ ನಿರ್ದೇಶನದಲ್ಲಿ ಬಂಕಾಪುರದ ಬಯರಾಟ ನಾಟಕ ನಡೆಯಲಿದೆ. ಮಾ. 26ರಂದು ಸಂಜೆ 6.30ಕ್ಕೆ ನಾಗಾರ್ಜುನ ಆರಾಧ್ಯ ನಿರ್ದೇಶನದಲ್ಲಿ ಆಯಾಮ ರಂಗತಂಡವು ‘ಕ್ಲೈ ಚಮೈಸ್ಟ್ರ’ ನಾಟಕ ಪ್ರದರ್ಶಿಸಲಿದೆ.ವಿಶ್ವರಂಗಭೂಮಿ ದಿನಾಚರಣೆಯ ಅಂಗವಾಗಿ ಮಾ. 27ರಂದು ಸಂಜೆ 6ಕ್ಕೆ ಗೌತಮ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಟ್ರಸ್ಟ್ ಕಲಾವಿದರಿಂದ ಜಾನಪದ ಕಲೆಗಳ ಪ್ರದರ್ಶನ ಮತ್ತು ಹವ್ಯಾಸಿ ರಂಗಕರ್ಮಿಗಳಿಂದ ರಂಗ ಗೌರವ ಮತ್ತು ರಂಗಗೀತೆಗಳ ಕಾರ್ಯಕ್ರಮ ನಡೆಯಲಿದೆ. ಪ್ರವೇಶ ದರ 100 ರೂ. ನಿಗದಿಪಡಿಸಿದ್ದು, ಸೀಜ್ಹನ್ ಟಿಕೆಟ್ 300 ರೂ. ಇರಿಸಲಾಗಿದೆ ಎಂದು ಅವರು ವಿವರಿಸಿದರು.ಮಾ. 27ರಂದು ಸಂಜೆ 6ಕ್ಕೆ ಭೂಮಿಗೀತದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸಮಾರೋಪದಲ್ಲಿ ಮಾಜಿ ಅಧ್ಯಕ್ಷ ಮಾಲತಿ ಸುಧೀರ್, ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಪಾಲ್ಗೊಳ್ಳುವರು.ಈ ಸಂದರ್ಭದಲ್ಲಿ ಸರಸ್ವತಿ ಜುಲೇಖ ಬೇಗಂ, ಎಚ್. ಜನಾರ್ಧನ್ , ನೂರ್ ಅಹಮದ್ ಶೇಖ್, ಪ್ರಸಾದ್ ಕುಂದೂರು, ಚಂದ್ರಶೇಖರ್ ಅಚಾರ್, ಡಾ.ಎಚ್.ಎಂ. ಕುಮಾರಸ್ವಾಮಿ, ತಿಪ್ಪಣ್ಣ, ಮಾಲತಿಶ್ರೀ, ಡಾ.ಸಿ. ಬಸವಲಿಂಗಯ್ಯ, ಡಾ. ರಾಜಶೇಖರ ಕದಂಬ ಅವರಿಗೆ ರಂಗ ಗೌರವ ನೀಡಿ ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕಿ ಡಾ.ಎಂ. ಜಾಹಿದಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ಖಜಾಂಚಿ ಅಬ್ದುಲ್ ಕರೀಂ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ