ಕಾರ್ಕಳ: ಅಯೋಧ್ಯೆ ರಾಮನಿಗೆ ಪ್ರಾಣ ಪ್ರತಿಷ್ಠೆಯಾಗುವ ಮೂಲಕ ಸಕಲ ಜೀವಿಗಳ ಆತ್ಮಕ್ಕೆ ಖುಷಿ ಸಿಗುವ ಕ್ಷಣ ಪ್ರಾಪ್ತಿ ಯಾಗಿದೆ ಎಂದು ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಹೇಳಿದರು.
ಅವರು ಕಾರ್ಕಳ ತಾಲೂಕಿನ ಬಜಗೋಳಿ ದಿಡಿಂಬಿರಿ ಬಳಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಜರಂಗ ದಳದ ಹೋರಾಟದ ಕಿಚ್ಚು ರಾಮಮಂದಿರ ನಿರ್ಮಾಣ ದ ಹಿಂದೆ ಅಡಗಿದೆ. ಕರಸೇವಕರ ಐನೂರು ವರ್ಷಗಳ ಹೋರಾಟ ತ್ಯಾಗವನ್ನು ಸ್ಮರಿಸಬೆಕಾಗುತ್ತದೆ. ಶ್ರೀರಾಮ ಮರ್ಯಾದ ಪುರುಷೋತ್ತಮನಾಗಿ ಎಲ್ಲರಿಗೂ ಅದರ್ಶನಾಗಿದ್ದಾನೆ ಎಂದರು.ದೇವಿದಾಸ್ ಪ್ರಭು ಪ್ರಾಸ್ತಾವಿಕ ಮಾತನಾಡಿ ಸಂಸ್ಕಾರಯುತ ಶಿಕ್ಷಣ ಎಲ್ಲರಿಗೂ ಸಿಗಬೇಕು ಅದಕ್ಕಾಗಿ ಹಿಂದು ಧರ್ಮ ಶಿಕ್ಷಣ ಅಭಿಯಾನವನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೂ ಧರ್ಮ ಶಿಕ್ಷಣ ಅಭಿಯಾನವನ್ನು ಎಸ್‌ಕೆಎಫ್‌ನ ರಾಮಕೃಷ್ಣ ಅಚಾರ್ ಉದ್ಘಾಟಿಸಿದರು. ಸೂರ್ಯ ಕಿರಣ ಟ್ರಸ್ಟನ್ನು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಿದರು. ನವೋದಯ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸುನೀಲ್ ಕುಮಾರ್, ಉದ್ಯಮಿಗಳಾದ ಉಮೇಶ್ ರಾವ್, ಉದಯ ಸಾಲ್ಯಾನ್, ಚೆನ್ನಕೇಶವ ಮೆಂಡನ್, ಪಾಂಡುರಂಗ ನಾಯಕ್ ಕಡ್ತಲ, ಯಶವಂತ ಆಚಾರ್ಯ, ಸದಾನಂದ ಪಾಟ್ಕರ್, ಉದಯ ಸಾಲ್ಯಾನ್, ರಮೇಶ್, ಗಂಗಯ್ಯಬಪರವ, ಕೃಷ್ಣ ಪೂಜಾರಿ, ವಾಸ್ತು ತಜ್ಞ ಕೃಷ್ಣ ಮೊಯಿಲಿ, ಬಜರಂಗದಳ ಪ್ರಾಂತ್ಯ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್.ಸ ಉದ್ಯಮಿ ಮಹವೀರ ಜೈನ್, ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್, ಅರುಣ್ ಕುಮಾರ್, ಗುರುಪ್ರಸಾದ್ ನಾರಾವಿ, ನೆಲ್ಲಿಕಾರು ಶಿಲೆ ದೊರೆತ ಮನೆಯ ತುಂಗಪ್ಪ ಪೂಜಾರಿ, ಸದಾನಂದ ಪಾಟ್ಕರ್, ಶ್ರೀರಾಂ ಭಟ್, ಸಂಜೀವ ಮೊಯಿಲಿ, ರಾಜೀವ್ ಸಾಮಗ, ರತ್ನಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಸಾಲಿಯಾನ್ ಬಜಗೋಳಿ ಪ್ರಾರ್ಥಿಸಿದರು. ವಿನಯ ಡಿ. ಬಂಗೇರ ಸ್ವಾಗತಿಸಿದರು. ಪುರೋಹಿತ ಸಂಘ ಕಾರ್ಕಳ ಇವರ ಪ್ರಾಯೋಜಕತ್ವದಲ್ಲಿ ಶ್ರೀರಾಮ ತಾರಕ ಮಂತ್ರ ಯಾಗ, ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ ತಾಲೂಕಿನ ಹಿರಿಯರಿಗೆ ಪ್ರಸಾದ ನೀಡಿ ಸನ್ಮಾನ ಕಾರ್ಯಕ್ರಮ, ೧೦೦೮ ರಾಮ ಭಕ್ತರಿಂದ ಶ್ರೀಕಾಂತ್ ಶೆಟ್ಟಿ ಬಳಗದಿಂದ ಹನುಮಾನ್ ಚಾಲೀಸ್ ಪಠಣ ಮಾಡಲಾಯಿತು. ಭಕ್ತಿಗೀತೆ, ಭಜನೆ, ಧಾರ್ಮಿಕ ನೃತ್ಯ ಸಂಗಮ ಹಾಗೂ ಕುಣಿತ ಭಜನೆಯೂ ನಡೆಯಿತು.