ಕಾರ್ನಾಡು ಶ್ರೀ ಹರಿಹರ ಕ್ಷೇತ್ರ ಮಹಾಶಿವರಾತ್ರಿ ಕಾರ್ಯಕ್ರಮ 26ರಿಂದ 28 ರ ವರೆಗೆ

KannadaprabhaNewsNetwork | Published : Feb 21, 2025 11:48 PM

ಸಾರಾಂಶ

ಮೂಲ್ಕಿಯ ಕಾರ್ನಾಡಿನ ಶ್ರೀ ಹರಿಹರ ಕ್ಷೇತ್ರದಲ್ಲಿ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ಆಶ್ರಯದಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮಗಳು 26ರಿಂದ 28ರ ವರೆಗೆ ಜರಗಲಿವೆ.26ರಂದು ಸಂಜೆ 6.30ರಿಂದ 27ರ ಬೆಳಗ್ಗೆ 6.30ರ ತನಕ ಜಾಗರಣಾ ಭಜನೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿಯ ಕಾರ್ನಾಡಿನ ಶ್ರೀ ಹರಿಹರ ಕ್ಷೇತ್ರದಲ್ಲಿ ಶ್ರೀ ಹರಿಹರ ಕ್ಷೇತ್ರ ಯುವಕ ವೃಂದ ಮತ್ತು ಮಹಿಳಾ ಮಂಡಳಿ ಆಶ್ರಯದಲ್ಲಿ ಮಹಾ ಶಿವರಾತ್ರಿ ಕಾರ್ಯಕ್ರಮಗಳು 26ರಿಂದ 28ರ ವರೆಗೆ ಜರಗಲಿವೆ.26ರಂದು ಸಂಜೆ 6.30ರಿಂದ 27ರ ಬೆಳಗ್ಗೆ 6.30ರ ತನಕ ಜಾಗರಣಾ ಭಜನೆ ಜರುಗಲಿದೆ. 26ರಂದು ಸಂಜೆ ಭಜನಾ ಜ್ಯೋತಿಯನ್ನು ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ಉದ್ಯಮಿ ಶರತ್ ಎನ್. ಸಾಲ್ಯಾನ್, ಸುವರ್ಣಿ ಸುಜಿತ್ ನಾಯಕ್, ಮಂಗಳೂರು, ನಿವೃತ್ತ ಕಂದಾಯ ನಿರೀಕ್ಷಕ ಹೂವಯ್ಯ ಶೆಟ್ಟಿ, ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿ ನ , ಸುರತ್ಕಲ್ ಶಾಖೆಯ ಪ್ರಬಂಧಕ ಪ್ರಜ್ವಲ್‌ ಶೆಟ್ಟಿ ಬೆಳಗಿಸಲಿದ್ದಾರೆ.

27ರಂದು ಸಂಜೆ 6ರಿಂದ ಭಜನೆ, 28ರಂದು ಸಂಜೆ ಜರಗಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಯಚ್. ಅರವಿಂದ ಪೂಂಜ ವಹಿಸುವರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ ಆಶಿರ್ವಚನ ನೀಡಲಿದ್ದಾರೆ.

ಭಾರತ್ ಬ್ಯಾಂಕ್ ಲಿ. ಮುಂಬೈ ನ ನಿರ್ದೇಶಕ ಭಾಸ್ಕರ ಎಂ ಸಾಲ್ಯಾನ್, ಪತಂಜಲಿ ಪುಡ್ಸ್ ಲಿ., ಬೈಕಂಪಾಡಿಯ ಎಚ್‌ ಆರ್‌ ವಿಭಾಗದ ಪ್ರಬಂಧಕ ಅರುಣ್ ಕುಮಾರ್ ಶರ್ಮ, ಉದ್ಯಮಿ ಜೈಕೃಷ್ಣ ಕೋಟ್ಯಾನ್, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಗ್ರಾಮ ಸಮಿತಿ ಗೌರವಾಧ್ಯಕ್ಷ ಗುಣನಾಥ ಜಿ ಬಂಗೇರ, ನಿವೃತ್ತ ಅರಣ್ಯ ಅಧಿಕಾರಿ ರಮಾನಂದ ಎಸ್. ರಾವ್, ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಮೊಕ್ತೇಸರ ರಾಘವೇಂದ್ರ ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸೇನೆಯ ನಿವೃತ್ತ ಸುಭೇದಾರ್‌ ನಾರಾಯಣ ರೈ, ಕ್ರಿಕೆಟ್‌ ತರಬೇತುದಾರ ನಿತಿನ್ ಮೂಲ್ಕಿ ಮತ್ತು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಜಯರಾಜ್‌ ಹಾಗೂ ಸಂಸ್ಥೆಯ ಹಿರಿಯ ಸದಸ್ಯ ದಯಾನಂದ ಕೋಟ್ಯಾನ್‌ ಅವರನ್ನು ಸನ್ಮಾನಿಸಲಾಗುವುದು. ಎಸ್.ಎಸ್.ಎಲ್.ಸಿ. ಅಂತಿಮ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧಕರಾದ ಯಶ್ವಿತ್ ಡಿ. ಕಾಂಚನ್,

ಹರ್ಷಿತ ಎಸ್.ಎಸ್., ದ್ವಿತೀಯ ಪಿ.ಯು.ಸಿ. ಅಂತಿಮ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧಕರಾದ ಪ್ರಜ್ಞಾ ಎನ್.ಆಶ್ರಯ ಎಲ್. ಸುವರ್ಣ, ಚಿತ್ರಾಪು, ದಿಶಾ ಆರ್. ಶೆಟ್ಟಿ, ಸಮೀಕ್ಷಾ ಎ. ಕೋಟ್ಯಾನ್ ಅವರಿಗೆ ಪ್ರತಿಭಾ ಪುರಸ್ಕಾರ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ.

ರಾತ್ರಿ ಪೊಲಿಪುದಪ್ಪೆ ಜಲದುರ್ಗೆ ತುಳು ಪೌರಾಣಿಕ ನಾಟಕ ಪ್ರದರ್ಶನ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Share this article