2026-27ನೇ ಸಾಲಿಗೆ ಪ್ರವೇಶಾತಿ ಪಡೆಯುವ ಬಿಎಸ್ಸಿ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 6,079ಕ್ಕೆ ( ಈ ಮೊದಲು ₹ 13,112) ಪರಿಷ್ಕರಿಸಲಾಗಿದೆ. ಹಾಗೆಯೇ, ಬಿಸಿಎ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 26,593ಕ್ಕೆ ( ಈ ಮೊದಲು ₹ 34,522) ಪರಿಷ್ಕರಿಸಲಾಗಿದೆ.
ಧಾರವಾಡ:
ಬಿಎಸ್ಸಿ-ಬಿಬಿಎ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಏರಿಕೆ ಮಾಡಿರುವ ಕರ್ನಾಟಕ ವಿವಿ ನೀತಿ ವಿರೋಧಿಸಿ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಕವಿವಿ ಕೊನೆಗೂ ಪ್ರವೇಶ ಶುಲ್ಕವನ್ನು ಇಳಿಕೆ ಮಾಡಿ ಆದೇಶಿಸಿದೆ.2026-27ನೇ ಸಾಲಿಗೆ ಪ್ರವೇಶಾತಿ ಪಡೆಯುವ ಬಿಎಸ್ಸಿ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 6,079ಕ್ಕೆ ( ಈ ಮೊದಲು ₹ 13,112) ಪರಿಷ್ಕರಿಸಲಾಗಿದೆ. ಹಾಗೆಯೇ, ಬಿಸಿಎ 3ನೇ ಮತ್ತು 5ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಶುಲ್ಕವನ್ನು ₹ 26,593ಕ್ಕೆ ( ಈ ಮೊದಲು ₹ 34,522) ಪರಿಷ್ಕರಿಸಲಾಗಿದೆ. ಈ ಶುಲ್ಕವನ್ನು ಹಿಂದಿನ ವರ್ಷದಲ್ಲಿ ಜಾರಿಯಲ್ಲಿದ್ದ ಶುಲ್ಕಕ್ಕೆ ನಿಯಮಾನುಸಾರ ಶೇ. 10ರಷ್ಟು ಮಾತ್ರ ಹೆಚ್ಚಿಸಿ ಪರಿಷ್ಕರಿಸಲಾಗಿದೆ ಎಂದು ಕವಿವಿ ಕುಲಸಚಿವರು ಆದೇಶದಲ್ಲಿ ತಿಳಿಸಿದ್ದಾರೆ. ಜತೆಗೆ ಈ ಮೊದಲು ಹೆಚ್ಚುವರಿ ಶುಲ್ಕ ಭರಿಸಿದ್ದರೆ, ಈ ಶುಲ್ಕವನ್ನು ಮರುಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಶೇ.80ಕ್ಕಿಂತ ಹೆಚ್ಚು ಏರಿಕೆ?:ಕರ್ನಾಟಕ ವಿವಿಯು ಅವೈಜ್ಞಾನಿಕವಾಗಿ ಶೇ.80ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಶುಲ್ಕ ಏರಿಕೆ ವಿರೋಧಿಸಿ ಎಐಡಿಎಸ್‌ಒ ಸಂಘಟನೆಯು ವಿದ್ಯಾರ್ಥಿಗಳೊಂದಿಗೆ ಈ ಮೊದಲು ಕರ್ನಾಟಕ ಕಾಲೇಜು ಆವರಣದಲ್ಲಿ ಹಾಗೂ ಬುಧವಾರ ಸಹ ಕವಿವಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕವಿವಿ ಶುಲ್ಕವನ್ನು ವೈಜ್ಞಾನಿಕವಾಗಿ ಹೆಚ್ಚಿಸಿದ್ದನ್ನು ಎಐಡಿಎಸ್‌ಒ ಸಂಘಟನೆ ಪದಾಧಿಕಾರಿಗಳು ಸ್ವಾಗತಿಸಿದ್ದಾರೆ. ಇದು ಹೋರಾಟಕ್ಕೆ ಸಂದ ಜಯ ಎಂದು ಕಾರ್ಯದರ್ಶಿ ಶಶಿಕಲಾ ಮೇಟಿ ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.