ಕನ್ನಡಪ್ರಭ ವಾರ್ತೆ ಜೇವರ್ಗಿ
ಜೇವರ್ಗಿಯಲ್ಲಿ ಲೋಕಸಭೆ ಕಾಂಗ್ರೆಸ್ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಬಗ್ಗೆಯೇ ದೇಶದಾದ್ಯಂತ ಅನೇಕರು ಬೆರಗಾಗಿದ್ದಾರೆ. ನಮ್ಮಲ್ಲಿನ ಪಂಚ ಗ್ಯಾರಂಟಿಗಳು ಮನೆ ಮನ ತಲುಪಿವೆ. ಇದರಿಂದ ಜನರು ಖುಷಿಯಲ್ಲಿದ್ದಾರೆ. ಜನತೆಗೆ ನೆರವು ನೀಡಿದ ನಮಗೆ ಜನ ಪುನಃ ಶಕ್ತಿ ತುಂಬಲು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪರ ಅಲೆ ಎಲ್ಲೆಡೆ ಇದೆ ಎಂದು ಖರ್ಗೆ ಹೇಳಿದರು.ಲೋಕಸಭೆಯಲ್ಲಿಯೂ ನಾರಿ ನ್ಯಾಯ, ಯುವ ನ್ಯಾಯ, ಶ್ರಮಿಕ್, ಕಿಸಾನ್ ನ್ಯಾಯ ಎಂದು ಗ್ಯಾರಂಟಿ ಯೋಜನೆಗಳನ್ನು ನಾವು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ನಮ್ಮ ಪ್ರಣಾಳಿಕೆ ನಿಮ್ಮ ಮುಂದಿದೆ. ಸರಿಯಾಗಿ ವಿಷಯ ತಿಳಿದು ಮತ ಹಾಕಿರಿ ಎಂದರು.
ನಮ್ಮ ಚುನಾವಣೆ ಭರವಸೆಗಳನ್ನೆಲ್ಲ ಮುಸ್ಲಿಂ ಲೀಗ್ ಪ್ರಣಾಳಿಕೆ ಅಂತ ಟೀಕೆ ಮಾಡುತ್ತಾರೆ, ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದರು. ಮೋದಿ ಸಿರಿವಂತರ ಪರ ಇರೋ ವ್ಯಕ್ತಿ. ಜನರು ಅರಿಯಬೇಕು. ನರೇಗಾ ಯೋಜನೆ 400 ರು. ಖಾತ್ರಿ ಕೊಡುತ್ತೇವೆ. ಎಲ್ಲಾ ಹಳ್ಳಿಗಳಲ್ಲಿ ಜಾರಿ ಮಾಡುತ್ತೇವೆ. ನಾವೇ ಬಡವರ ಪರ ಇರೋರು ಎಂದರು.
ಮೋದಿ ಪ್ರಗತಿ ವಿರೋಧಿ, ಅಭಿವೃದ್ಧಿಗೆ ಮತ ಹಾಕಿರಿ. ಖರ್ಗೆಗೆ ರೈಲು ಬಿಡಕ್ಕೆ ಯಾಕೆ ಆಗಲಿಲ್ಲ ಅಂತಾರೆ, ಇಲ್ಲಿ ಆ ವ್ಯವಸ್ಥೆ ಇರಲಿಲ್ಲಂತ ರೈಲು ಇಲ್ಲಿಂದ ಓಜಡಿಸಲು ಆಗಲಿಲ್. ನಾವೇ ಪಿಟ್ ಲೈನ್ ಮಾಡಿದ್ವಿ. ಅದು ಹೀಗೆ ಕೇಳೋರಿಗೆ ಗೊತ್ತಿರಲಿ ಎಂದು ಸಂಸದ ಉಮೇಶ ಜಾಧವ್‌ಗೆ ಟಾಂಗ್ ನೀಡಿದರು.
ಜನರ ಉದ್ಧಾರಕ್ಕೆ ಮೋದಿ ಪ್ರಧಾನಿ ಆಗಿಲ್ಲ, ಸಂಘ ಪರಿವಾರಕ್ಕೆ, ಸಿರಿವಂತರಿಗೆ ಉದ್ಧಾರ ಮಾಡಲು ಅದ. ಪ್ರಧಾನಿ ಭಾಯ್, ಬಹಿನೋ ಬಿಟ್ಟು ಈಗ ಮೇರೇ ಪರಿವಾರ್ ಅಂತ ಶುರು ಮಾಡ್ಯಾನ ಎಂದು ಮೋದಿ ಅವರಿಗೆ ಏಕ ವಚನದಲ್ಲಿ ಟೀಕಿಸಿದರು. ಕೊನೆಯಲ್ಲಿ ಸಭಿಕರೊಂದಿಗೆ ಸಂವಿಧಾನ ಉಳಿಸಲು ಕಾಂಗ್ರೆಸ್‌ಗೆ ಮತ ಹಾಕಿ ಎಂದರಲ್ಲದೆ ಮೋದಿ ಹಠಾವೋ ದೇಶ ಬಚಾವೋ ಎಂದು ಘೋಷಣೆ ಹಾಕಿದರು.
ತಮ್ಮ ಬಾಷಣದುದ್ದಕ್ಕೂ ತುಂಬಾ ಬಾವುಕರಾಗಿ, ಜನರಿಗೆ ನಾವು ಏನೆಲ್ಲಾ ಕೊಟ್ಟಿದ್ದೇವೆ ಎಂಬುದನ್ನು ಹೇಳುತ್ತ ಮತ ಹಾಕುವಾಗ ನಮ್ಮನ್ನು ಮರಿಬೇಡಿರೆಂದರು.
ಜೇವರ್ಗಿಗೆ ಬಹು ಕೋಟಿ ಮೊತ್ತದ ಬಹುಗ್ರಾಮ ಯೋಜನೆ ಜಾರಿಗೆ ತರಲಾಗಿದೆ. ಇದು ಟೆಂಡರ್ ಹಂದಲ್ಲಿದೆ, ಇದು ಜಾರಿ ಆದಲ್ಲಿ ಜೇವರ್ಗಿ ಪ್ರತಿ ಮನೆ ನೀರು ಪೂರೈಕೆ ಆಗಲಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಖರ್ಗೆ ಅವರು ಮಂತ್ರಿ ಆಗಿದ್ದಾಗ, ತಂದೆಯವರಾದ ಧರಂ ಸಿಂಗ್ ಅವರು ಸಂಸದ ಆಗಿದ್ದಾಗ ಕಲಾಂ 371 ಜೆ ಜಾರಿಗೆ ತಂದರು. ಇದು ಈ ಭಾಗದ ಜನರ ಭಾಗ್ಯದ ಬಾಗಿಲು ತೆರೆದಿದೆ, ಇವೆಲ್ಲ ಯೋಜನೆಗಳ ಹರಿಕಾರರು ಖರ್ಗೆಯವರು. ಅವರ ಕೈ ಬಲ ಪಡಿಸಲು ನಾವು ನೀವೆಲ್ಲರೂ ಕಾಂಗ್ರೆಸ್ ಪಕ್ಷ ಗೆಲ್ಲಿಸೋದು ತುಂಬಾ ಅಗತ್ಯ ವಾಗಿದೆ ಎಂದು ಕೈ ಜೋಡಿಸಿ ಅಜಯ್ ಸಿಂಗ್ ಅವರು ಕೋರಿದರು.
ನಾವು ನಿಮಗೆ ಶಕ್ತಿ, ನೀವು ನಮಗೆ ಶಕ್ತಿ: ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡುತ್ತ, ಪಂಚ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ, ಉಪಕಾರ ಸ್ಮರಣೆ ಮಾಡಿರಿ, ಹೋದ ಸಾಲದ ಅನ್ಯಾಯ ಪುನರಾವರ್ತನೆ ಆಗೋದು ಬೇಡ. ನಾವು ನಿಮಗೆ ಶಕ್ತಿ ತುಂಬುತ್ತೆವೆ. ನೀವು ನನಗೆ ಶಕ್ತಿ ತುಂಬಿ. ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಹೇಳುತ್ತಾ ಜನತೆಗೆ ಮನವಿ ಮಾಡಿದರು. ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸೀಟು ಜಿಳ್ಳುತ್ತೇವೆ. ನಿಮ್ಮ ಆಶೀರ್ವಾದ ಸದಾ ಕಾಂಗ್ರೆಸ್ಗೆ ಇರಲಿ. ಜೇವರ್ಗಿ ಯಿಂದ 40 ಸಾವಿರ ಲೀಡ್ ಕೊಡಿ ಪದಕ್ಕೆ ನಮಸ್ಕಾರ ಮಾಡಿ ಹೋಗುತ್ತೇವೆ ಎಂದರು.ದೇಶಭಕ್ತಿ ಬಿಜೆಪಿ ಗುತ್ತಿಗೆಯೆ?: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಬಿಜೆಪಿ ದೇಶ ಭಕ್ತಿ ಗುತ್ತಿಗೆ ಹಿಡಿದಿದೆ, ನಾವೆಲ್ಲ ಹಂಗೇ ನಂಬಿದ್ವಿ, ವಾಸ್ತವ ಬೇರೇನೇ ಇದೇ. ನಿಜವಾದ ದೇಶ ಭಕ್ತಿ ಕಾಂಗ್ರೆಸ್‌ನದ್ದು. ದೇಶಕ್ಕೆ ಸ್ವತಂತ್ರ ಸಿಕ್ಕಾಗ ಬಿಜೆಪಿ ಹುಟ್ಟಿರಲಿಲ್ಲ. ಆದ್ರೂ ಭಾರೀ ದೇಶ ಭಕ್ತಿ ಮಾತು ಹೆಳ್ತಾರೆ ಅವರು. ಅವರ ಮಾತಿಗೆ ಮರಳು ಆಗಬೇಡಿ ನೀವು. ಜಾಗೃತರಾಗಿ, ಯಾರಿಗೆ ಬೆಂಬಲ ನೀಬೇಕು ಅನ್ನೋಸು ಯೋಚಿಸಿರಿ ಎಂದರು.
ಎಂಎಲ್ಸಿ ತಿಪ್ಪಣ್ಣ ಕಮಕನೂರ್, ಬಾಬೂರಾವ ಚಿಂಚನ್ಸೂರ್ ಮಾತನಾಡುತ್ತ ಮೋದಿ ಸುಲ್ಳು ಹೇಳುತ್ತ ಕೋಲಿ ಸಮಾಜಕ್ಕೆ ಮೋಸ ಮಾಡಿದ್ದಾರೆಂದು ನಿಂದಿಸಿದರು. ಸಮಾರಂಭದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ನಟ ಎಎಸ್ ನಾರಾಯಣ ಸೇರಿದಂತೆ ಕಾಂಗ್ರೆಸ್‌ನ ಮುಖಂಡರಿದ್ದರು.