ಕನ್ನಡಪ್ರಭ ವಾರ್ತೆ ಹೊಸಪೇಟೆ
5ನೇ ವಯಸ್ಸಿನಿಂದ ವ್ಯಾಸಂಗದ ಜೊತೆಗೆ ರಂಗಭೂಮಿಯಲ್ಲಿ ಬಾಲಕಲಾವಿದರಾಗಿ, ಕೆರೆಗೆ ಹಾರ, ಪುಣ್ಯಕೋಟಿ ಇತರೆ ಹಲವು ಸಾಮಾಜಿಕ ಪೌರಾಣಿಕ ನಾಟಕಗಗಳಲ್ಲಿ ವೃತ್ತಿ ಆರಂಭಿಸಿದರು. ಬಿಟೆಕ್ ಹಾಗೂ ಎಂಬಿಎ ಪದವೀಧರರಾಗಿ ವೃತ್ತಿಯಲ್ಲಿ ಟೆಲಿಕಾಂ ಎಂಜಿನಿಯರ್ ಆಗಿ ಸದ್ಯ ಬೆಂಗಳೂರಿನ ಕ್ಯುಯುಇಎಸ್ಎಸ್ (ಅಮೇರಿಕ) ಕಂಪನಿಯಲ್ಲಿ ಸಹ ಉಪಾಧ್ಯಕ್ಷ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಗಳಲ್ಲಿ ಕನ್ನಡ ಸಂಘಗಳ ಜೊತೆಗೆ, ಕನ್ನಡದ ಶ್ರೇಷ್ಠ ಬರಹಗಾರರ ನಾಟಕಗಳನ್ನು ಆಯ್ಕೆ ಮಾಡಿ, ನಟಿಸಿ, ನಿರ್ದೇಶಿಸಿ ಪ್ರದರ್ಶಿಸುತ್ತಾ ಬರುತ್ತಿರುವುದು ಇವರ ಪ್ರವೃತ್ತಿಯಾಗಿದೆ. ಬೆಂಗಳೂರಿನ ಪ್ರತಿಷ್ಠಿತ ರಂಗಭೂಮಿಯಾದ ಪ್ರಯೋಗ ರಂಗ, ರಂಗ ನಿರಂತರ ತಂಡದ ಸದಸ್ಯರಾಗಿ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ನಟನೆ, ನಿರ್ದೇಶನ:ಮಂಟೇಸ್ವಾಮಿ ಕಥಾ ಪ್ರಸಂಗ, ಸಂತೆಯಲ್ಲಿ ನಿಂತ ಕಬೀರ, ಮೌನಿ, ಕಂಬಾರರು ರಚನೆಯ ಶಿವರಾತ್ರಿ, ಸಿಂಗಿರಾಜ, ಕೊಂದವರಾರು, ಮಹಿಪತಿ ಕ್ವಾಣನ ತಂಬ್ಗಿ, ಅಂಬೇಡ್ಕರ್, ಗಾಂಪರ ಗುಂಪು, ಕರ್ನಾಟಕ ರಮಾರಣ, ರಕ್ತರಾತ್ರಿ, ಶ್ರೀಕೃಷ್ಣದೇವರಾಯ, ಪರಿಹಾರ ಸೇರಿ ಹಲವು ನಾಟಕಗಳಲ್ಲಿ ಅಭಿಯಿಸಿ, ನಿರ್ದೇಶಿಸಿದ ಕೀರ್ತಿ ಹೊಂದಿದ್ದಾರೆ.