ಕರ್ನಾಟಕ ರಾಜ್ಯ ಕ್ರೀಡಾಕೂಟದ ಬೆಸ್ಟ್ ಅಥ್ಲೀಟ್‌ಗಳಾಗಿ ಬೆಂಗಳೂರಿನ ನಿಯೋಲ್ ಅನ್ನಾ ಕರ್ನೆಲಿಯೊ ಮತ್ತು ಬೆಳಗಾವಿಯ ಝಫರ್ ಖಾನ್ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಹತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯವಾದ ಕರ್ನಾಟಕ ರಾಜ್ಯ ಕ್ರೀಡಾಕೂಟ - 2025 (ಕರ್ನಾಟಕ ಒಲಿಂಪಿಕ್ಸ್)ರ ಬೆಸ್ಟ್ ಅಥ್ಲೀಟ್ ಗಳಾಗಿ ಮಹಿಳಾ 100 ಮೀ. ಓಟದಲ್ಲಿ ಚಿನ್ನ ಗೆದ್ದ ಬೆಂಗಳೂರಿನ ನಿಯೋಲ್ ಅನ್ನಾ ಕರ್ನೆಲಿಯೊ ಮತ್ತು ಪುರುಷರ ಲಾಂಗ್ ಜಂಪ್‌ನಲ್ಲಿ ಚಿನ್ನ ಗೆದ್ದ ಬೆಳಗಾವಿಯ ಝಫರ್ ಖಾನ್ ಅವರು ಆಯ್ಕೆಯಾಗಿದ್ದಾರೆ.
ಗುರುವಾರ ಒಟ್ಟು 9 ಸ್ಪರ್ಧೆಗಳ ಫೈನಲ್ ನಡೆಯಿತು. ಅವುಗಳಲ್ಲಿ ಉಡುಪಿ ಮತ್ತು ಬೆಂಗಳೂರು ತಲಾ 2 ಚಿನ್ನದ ಪದಕಗಳನ್ನು ಗೆದ್ದರೆ, ತುಮಕೂರು, ಬೆಳಗಾವಿ, ಕೊಡಗು, ಉಕ ಮತ್ತು ಯಾದಗಿರಿ ಜಿಲ್ಲೆಗಳು ತಲಾ ಒಂದೊಂದು ಚಿನ್ನದ ಪದಕಗಳನ್ನು ಗೆದ್ದುಕೊಂಡಿವೆ.
ಫಲಿತಾಂಶ ಹೀಗಿದೆ: ಪುರುಷರ ವಿಭಾಗ: 100 ಮೀ. ಓಟ: ಚಿನ್ನ - ಗಗನ್ ಎಲ್. ಗೌಡ (ಬೆಂಗಳೂರು), ಬೆಳ್ಳಿ - ರವಿಕಿರಣ (ಚಾಮರಾಜನಗರ), ಕಂಚು - ಶಿಜಾನ್ ಥಾಮಸ್ (ದಕ್ಷಿಣ ಕನ್ನಡ)
5000 ಮೀ ಓಟ: ಚಿನ್ನ - ಸಂದೀಪ್ ಟಿ. ಎಸ್. (ತುಮಕೂರು), ಬೆಳ್ಳಿ - ವೈಭವ್ ಮಾರುತಿ ಪಾಟೀಲ್ (ಬೆಂಗಳೂರು),
ಕಂಚು - ಗುರುಪ್ರಸಾದ್ (ತುಮಕೂರು)
ಹೈಜಂಪ್ ಚಿನ್ನ: ಸಿನಾನ್ (ಉಡುಪಿ), ಬೆಳ್ಳಿ - ಭವಿತ್ ಕುಮಾರ್ (ದಕ್ಷಿಣ ಕನ್ನಡ), ಕಂಚು - ಯಾಶ್ವಿನ್ ಕೆ.ಆರ್. (ದಕ್ಷಿಣ ಕನ್ನಡ)
ಶಾಟ್‌ಪಟ್: ಚಿನ್ನ - ಪ್ರಜ್ವಾಲ್ ಎಂ. ಶೆಟ್ಟಿ (ಉಡುಪಿ), ಬೆಳ್ಳಿ - ಮುಹಮ್ಮದ್ ಸಕ್ಲೇನ್ ಅಹ್ಮದ್ (ಮೈಸೂರು), ಕಂಚು - ಮಾನುಷ್ ಬಿ. (ಮೈಸೂರು)
400 ಮೀ ಹರ್ಡಲ್ಸ್: ಚಿನ್ನ - ಭೂಷಣ್ ಸುನಿಲ್ ಪಾಟೀಲ್ (ಬೆಳಗಾವಿ), ಬೆಳ್ಳಿ - ರಾಹುಲ್ ನಾಯಕ್ ಎನ್ (ಮೈಸೂರು), ಕಂಚು - ಭಾಗ್ಯವಂತ ಎನ್. ಕಲಾಲ್ (ಕಲ್ಬುರ್ಗಿ)
ಮಹಿಳೆಯರ ವಿಭಾಗ: 100 ಮೀ. ಓಟ ಚಿನ್ನ - ನಿಯೋಲ್ ಅನ್ನಾ ಕರ್ನೆಲಿಯೊ (ಬೆಂಗಳೂರು), ಬೆಳ್ಳಿ - ಸ್ತುತಿ ಪಿ. ಶೆಟ್ಟಿ (ಉಡುಪಿ), ಕಂಚು - ವರ್ಷಾ ವಿ. (ಬೆಂಗಳೂರು)
5000 ಮೀ ಓಟ: ಚಿನ್ನ - ತೇಜಸ್ವಿ ಎನ್. ಎಲ್. (ಕೊಡಗು), ಬೆಳ್ಳಿ - ಪ್ರಣಮ್ಯ ಎನ್. (ಶಿವಮೊಗ್ಗ), ಕಂಚು - ಶುಭಾಂಗಿ ಪ್ರಮೋದ್ ಕಾಕತ್ಕರ್ (ಬೆಳಗಾವಿ)
400 ಮೀ ಹರ್ಡಲ್ಸ್: ಚಿನ್ನ - ದೀಕ್ಷಿತಾ ರಾಮಕೃಷ್ಣ ಗೌಡ (ಉತ್ತರಕನ್ನಡ), ಬೆಳ್ಳಿ - ಅಪೂರ್ವ ಆನಂದ್ ನಾಯಕ್ (ಬೆಳಗಾವಿ), ಕಂಚು - ಅರ್ನಿಕಾ ವರ್ಷಾ ಡಿಸೋಜಾ (ಉಡುಪಿ)
ಹೈ ಜಂಪ್: ಚಿನ್ನ - ಪಲ್ಲವಿ ಎಸ್. ಪಾಟೀಲ್ (ಯಾದಗಿರಿ), ಬೆಳ್ಳಿ - ಎಸ್. ಬಿ. ಸುಪ್ರಿಯಾ (ಚಿಕ್ಕಮಗಳೂರು), ಕಂಚು - ಫ್ಲಾರ್ವಿಷಾ ವೆಲಿಷಾ ಮಾಂತೆರೊ (ದಕ್ಷಿಣ ಕನ್ನಡ)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.