ಸಂಡೂರು: ಕೌಶಲ್ಯ ರಹಿತ ವ್ಯಕ್ತಿ ಪರಾವಲಂಬಿ, ಕೌಶಲ್ಯ ಸಹಿತ ವ್ಯಕ್ತಿ ಸ್ವಾವಲಂಬಿ. ಪ್ರತಿ ಉದ್ಯಮದಲ್ಲೂ ಅಗತ್ಯ ಕೌಶಲ್ಯಗಳನ್ನು ಹೊಂದಿದ್ದಲ್ಲಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಬಹುದಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ ಹೇಳಿದರು.
ಶಿಬಿರಾರ್ಥಿಗಳು ಸಂಜೀವಿನಿ, ಎನ್,ಆರ್.ಎಲ್.ಎಂ. ಯೋಜನೆ ಅಡಿ ವಿವಿಧ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಆರ್.ಎಸ್.ಇ.ಟಿ.ಐ ವಿಭಾಗದ ನಿರ್ದೇಶಕರಾದ ರಾಜಾಸಾಬ್ ವಿವಿಧ ಜೀವನೋಪಾಯ ಚಟುವಟಿಕೆಗಳು ಮತ್ತು ಬ್ಯಾಂಕ್ ಸೌಲಭ್ಯಗಳ ಕುರಿತು ವಿವರಿಸಿದರು. ಶಿಬಿರಾರ್ಥಿಗಳು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಜೀವಿನೋಪಾಯ ಚಟುವಟಿಕೆಗಳನ್ನು ಕೈಗೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತಿಳಿಸಿದರು.ಪಿಡಿಒ ಕೊಟ್ರಯ್ಯ, ಸದಸ್ಯರಾದ ಉರುಳಿ ಸಿದ್ದಪ್ಪ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮಾ, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕೆ.ಸೋಮಶೇಖರ, ಆರ್.ಎಸ್.ಇ.ಟಿ.ಐ ಬೋಧಕರಾದ ಜಡೇಶ್, ಸಂಜೀವಿನಿ ಒಕ್ಕೂಟದ ಸಿಬ್ಬಂದಿ ಆರತಿ, ಸುನಂದಾ, ಪಾರ್ವತಿ, ಮಲ್ಲಮ್ಮ, ನೇತ್ರಾವತಿ, ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಮ್ಮಿಕೊಳ್ಳಲಾಗಿರುವ ಉದ್ಯಮಶೀಲತಾ ಅಭಿವೃದ್ಧಿ ಕುರಿತ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಲಾಯಿತು.