ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ೨೩ ವಾರ್ಡ್‌ಗಳಲ್ಲಿ ಬಿಜೆಪಿ ಪಕ್ಷವನ್ನ ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಸಿ. ಆರ್‌. ಚಿದಾನಂದ್ ತಿಳಿಸಿದರು. ಅವರು ಪಟ್ಟಣದ ವಾರ್ಡ್‌ ನಂಬರ್‌ 3ರಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮುಂಬರುವ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎಲ್ಲಾ ವಾರ್ಡುಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನ ಚುನಾವಣಾ ಕಣಕ್ಕೆ ನಿಲ್ಲಿಸಲಾಗುವುದು. ಬಿಜೆಪಿ ಪಕ್ಷದ ಸಿದ್ಧಾಂತ ಮತ್ತು ತತ್ವವನ್ನ ನಂಬಿ ಪಟ್ಟಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಉತ್ಸುಕರಾಗಿ ಕಾರ್ಯಕರ್ತರುಗಳು ಸೇರ್ಪಡೆಯಾಗುತ್ತಿರುವುದು ಪಕ್ಷಕ್ಕೆ ಬಲಬಂದಂತಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಸೇರಿ ಪಕ್ಷವನ್ನ ಬೆಳೆಸುವ ಕೆಲಸವನ್ನ ಮಾಡಬೇಕು. ಬಿಜೆಪಿ ಪಕ್ಷ ಕೇವಲ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ ಪಕ್ಷದ ಕಟ್ಟ ಕಡೆಯ ಕಾರ್ಯಕರ್ತರಿಗೂ ಕೂಡ ಅಧಿಕಾರ ಸಿಗಬೇಕೆಂಬುದು ನಮ್ಮ ಸಿದ್ಧಾಂತ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಒಂದಲ್ಲ ಒಂದು ದಿನ ಪಕ್ಷ ತಮ್ಮನ್ನ ಗುರುತಿಸಿ ಉನ್ನತ ಸ್ಥಾನ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಾರಿ ಪುರಸಭೆಗೆ ಬಿಜೆಪಿ ಸದಸ್ಯರನ್ನು ಕಳುಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಈಗಾಗಲೇ ಪ್ರತಿ ವಾರ್ಡಿನಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುತ್ತಿದ್ದು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಮಾಡಿಸಲು ತಾವೆಲ್ಲರೂ ಕಂಕಣಬದ್ಧರಾಗಿ ಕೆಲಸ ಮಾಡಿ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹರ್ಷವರ್ಧನ, ನಂಜುಂಡಮೈಮ್, ತಿಲಕ್, ಅರ್ಪಿತ ಪಟೇಲ್, ಮಂಜು ಗುಂಡಶೆಟ್ಟಿಹಳ್ಳಿ, ಮಂಜುಳ ಪಟೇಲ್, ಅಪೂರ್ವ, ತುಂಗ, ಮಿಥುನ್, ಶ್ರೀನಿವಾಸ್, ಭರತ್, ಸಂಜಯ್, ಆಕಾಶ್, ಅಭಿ, ಗಗನ್ ಮತ್ತಿತರಿದ್ದರು.