ಕನ್ನಡಪ್ರಭ ವಾರ್ತೆ ಹಲಗೂರು
ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಲಗೂರು ಸರ್ಕಲ್ ನಲ್ಲಿ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್ ರಾಜ್ ಮಾತನಾಡಿ, ರಸ್ತೆಗಳು ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮವಾಗಿ ಕಡಿಮೆ ಅವಧಿಯಲ್ಲಿ ಮನೆ ತಲುಪುವಂತೆ ಇರಬೇಕು.
ಆದರೆ, ಗೊಲ್ಲರಹಳ್ಳಿ ಮತ್ತು ಎಚ್.ಬಸಾಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳಿಂದ ಹಲವು ತಿಂಗಳುಗಳಿಂದ 20ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ. ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.ಹಲಗೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವುದರಿಂದ ಅಪಘಾತಗಳ ಸರಣಿಗಳೂ ಹೆಚ್ಚಾಗಿವೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ದಿನದ 24 ಗಂಟೆಯೂ ವೈದ್ಯರ ಸೇವೆ ಕಲ್ಪಿಸಬೇಕು.
ನಾಡ ಕಚೇರಿಯಲ್ಲಿ ರೆಕಾರ್ಡ್ ನೀಡಲು ವಿಳಂಬ ಮಾಡುತ್ತಿದ್ದಾರೆ. ಅಸಮರ್ಪಕ ಕಾರ್ಯ ನಿರ್ವಹಣೆ, ದಾಖಲಾತಿಗಳನ್ನು ಪಡೆಯಲು ಜೆರಾಕ್ಸ್ ಯಂತ್ರಗಳು ಇಲ್ಲದೆ ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ನೀಡುವಂತೆ ತಹಸೀಲ್ದಾರ್ ಅವರನ್ನು ಒತ್ತಾಯಿಸಿದರು.
ಮುತ್ತತ್ತಿಗೆ ಹೋಗುವ ರಸ್ತೆಯಲ್ಲಿ ಚಿಕ್ಕಕೆರೆ ಬಳಿ ಐದಾರು ವರ್ಷಗಳಿಂದ ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಸಾರ್ವಜನಿಕರಿಗೆ ತೊಂದರೆಯಾಗಿದೆ. ಎನ್.ಕೊಡಹಳ್ಳಿ ಮತ್ತು ಮಾರಗೌಡನಹಳ್ಳಿ ಬಳಿ ಶಾಲಾ ವಿದ್ಯಾರ್ಥಿಗಳು ಹೆಚ್ಚಾಗಿ ಪ್ರಯಾಣಿಸುವುದರಿಂದ ಅಲ್ಲಿ ರಸ್ತೆ ಉಬ್ಬನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ.ಮಹದೇವು, ಕಾರ್ಯದರ್ಶಿ ಮಹೇಶ್ ಕುಮಾರ್, ಸಾಗ್ಯ ಶಿವಕುಮಾರ್, ರಾಜು, ಎ.ಎಲ್.ಶಿವಕುಮಾರ್, ಪ್ರಮೀಳಾ, ಶಾಂಭವಿ, ಗುರುಸ್ವಾಮಿ, ಸಣ್ಣಶೆಟ್ಟಿ, ಶಿವಪ್ಪ, ಮಹದೇವು, ಗೋಪಿ, ಗಣೇಶ್, ನಾರಾಯಣಗೌಡ, ಬೋರಯ್ಯ, ವಿಷಕಂಠಮೂರ್ತಿ, ಚಿಕ್ಕರಾಜು, ದೇವರಾಜು, ಶ್ರೀನಿವಾಸ್, ಭಾಸ್ಕರ್, ಕೆ.ಎಂ.ಗುರುಪ್ರಸಾದ್, ರಾಜೇಗೌಡ, ಪಟೇಲ್ ಬಸವರಾಜು, ಡೈರಿಬಾಬು. ಶೇಖರ್, ಚನ್ನಬಸಪ್ಪ ಸೇರಿ ಹಲವರು ಭಾಗವಹಿಸಿದ್ದರು.