ಅಧ್ಯಕ್ಷರಾಗಿ ಪ್ರಭುಲಿಂಗ, ಗೌರವಾಧ್ಯಕ್ಷರಾಗಿ ವಳಗೆರೆಹಳ್ಳಿ ಶ್ರೀನಿವಾಸ್ ಆಯ್ಕೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಸಂಘದ ಏಕೀಕರಣ ಸಮಿತಿಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಖಜಾಂಚಿಯಾಗಿ ಕುಂಟನಹಳ್ಳಿ ಮರಿಲಿಂಗಯ್ಯ, ಉಪಾಧ್ಯಕ್ಷರಾಗಿ ರಾಮಣ್ಣ, ನಂಜುಂಡೇಗೌಡ, ಖ್ಯಾತಘಟ್ಟ ಅಂದಾನಿ. ವೃತ್ತ ಘಟಕದ ಅಧ್ಯಕ್ಷರಾಗಿ ಗೂಳೂರು ಲಿಂಗರಾಜು, ಪಣ್ಣೆ ದೊಡ್ಡಿ ವೆಂಕಟೇಶ, ಪದಾಧಿಕಾರಿಗಳಾಗಿ ಬೆಸಗರಹಳ್ಳಿ ವೆಂಕಟೇಶ, ಸಿದ್ದೇಗೌಡ, ಮಲ್ಲೇಶ, ಮರಳಿಗ ಶಿವರಾಜು ಆಯ್ಕೆಯಾಗಿದ್ದಾರೆ.ನಂತರ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದ ಪಚ್ಚೆ ನಂಜಂಡಸ್ವಾಮಿ ಮಾತನಾಡಿ, ರೈತ ಸಂಘದ ಏಕೀಕರಣ ಸಮಿತಿ ಮುಂದಿನ ದಿನಗಳಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ರೈತ ಮುಖಂಡರಾದ ಯರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜು, ಸೋಶಿ ಪ್ರಕಾಶ್ ಮತ್ತಿತರರು ಇದ್ದರು