ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕು ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸರ್ಕಾರ ಬಡವರ ಆರೋಗ್ಯಕ್ಕೆ ಅನುಕೂಲವಾಗಲಿ ಎಂದು ಸ್ಕ್ಯಾನಿಂಗ್ ಯಂತ್ರವನ್ನು ಮಾಜಿ ಶಾಸಕ ದಿ. ವೈ.ಎನ್. ರುದ್ರೇಶ್ ಗೌಡ ಅವರ ಪರಿಶ್ರಮದಿಂದ ತರಲಾಗಿದೆ. ಆದರೆ ಇಲ್ಲಿನ ವೈಧ್ಯರು ಶಾಮೀಲಾಗಿ ಸ್ಕ್ಯಾನಿಂಗ್ ಯಂತ್ರವನ್ನು ಡಿ.ಗ್ರೂಪ್ ನೌಕರನ ಮನೆಯಲ್ಲಿ ಇಟ್ಟಿರುವುದು ಸಂಶಯಕ್ಕೆ ಎಡಮಾಡಿಕೊಟ್ಟಿದೆ. ಕಳೆದ ಹಲವಾರು ವಷಗಳಿಂದ ಸ್ಕ್ಯಾನಿಂಗ್ ಯಂತ್ರವನ್ನು ಉಪಯೋಗಿಸದೆ ಮೂಲೆಗುಂಪು ಮಾಡಲಾಗಿದೆ, ಯಂತ್ರದ ಸಹಾಯದಿಂದ ಲಿಂಗ ಭ್ರೂಣ ಪತ್ತೆಗೆ ಮುಂದಾಗಿರಬಹುದು ಎಂದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಈ ಬಗ್ಗೆ ತನಿಖೆ ನಡೆದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು
ಕೋರೋನಾ ಸಂದರ್ಭದಲ್ಲಿ ಆಸ್ಪತ್ರೆಗೆ ಸರ್ಕಾರ ಹಾಗೂ ದಾನಿಗಳ ಸಹಾಯದಿಂದ ವೆಂಟಿಲೇಟರ್ ಮತ್ತು ಆ್ಯಕ್ಸಿಜನ್ ಪೂರೈಕೆ ಮಾಡಲಾಗಿತ್ತು . ಅದರೆ ಈಗ ಸಿಲಿಂಡರ್ ಗಳು ಕಾಣೆಯಾಗಿವೆ ಎಂದು ಹೇಳಲಾಗುತ್ತಿದೆ . ಕಳೆದ 5 ವರ್ಷದಲ್ಲಿ ಸರ್ಕಾರ ಆಸ್ಪತ್ರೆಗೆ ಕೋರೋನಾ ಕಾಲದಲ್ಲಿ ಯಾವ ಯಾವ ಸೌಲಭ್ಯ ನೀಡಿ ಎಷ್ಟು ಹಣ ಬಿಡುಗಡೆ ಮಾಡಿದೆ ಎಂಬ ಬಗ್ಗೆ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕರವೇ ಉಗ್ರ ಪತ್ರಿಭಟನೆ ಹಮ್ಮಿಕೊಳ್ಳಲಾಗು ವುದು ಎಂದು ಎಚ್ಚರಿಸಿದರು.ಕರವೇ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಡಿ.18ರಲ್ಲಿ ಈ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ, ಪ್ರದೀಪ್ ಎಂಬುವರು ಸ್ಕ್ಯಾನಿಂಗ್ ಯಂತ್ರವನ್ನು ಇರಿಸಿದ್ದು, ನಂತರ ಆಸ್ಪತ್ರೆಗೆ ತಂದು ಇಡಲಾಗಿದೆ ಎಂದು ಬೇಜವಾಬ್ದಾರಿ ಉತ್ತರ ಹೇಳುತ್ತಾರೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾ ಕೆಲವು ಕಡೆ ಕೆಲಸ ಮಾಡುತ್ತಿಲ್ಲ, ಸರ್ಕಾರ ಬಡ ರೋಗಿಗಳಿಗೆ ಸೌಲಭ್ಯ ನೀಡಿದರೆ ಅದನ್ನು ಕಬಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ ಕೋರೋನಾ ಸಮಯದಲ್ಲಿ ಆಸ್ಪತ್ರೇಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎನ್ನಲಾಗಿದ್ದು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರವೇ ಮುಖಂಡರಾದ ಮೋಹನ್, ಮದನ್ ಸೇರಿ ಹಲವರು ಭಾಗಿಯಾಗಿದ್ದರು.