ಹೆದ್ದಾರಿ ಹೊಂಡ ಮುಚ್ಚಿದ ಪೊಲೀಸರಿಗೆ ಕರವೇ ಗೌರವಾರ್ಪಣೆ

KannadaprabhaNewsNetwork |  
Published : Aug 02, 2025, 12:15 AM IST
01ಟ್ರಾಫಿಕ್ | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಗುಂಡಿಗಳನ್ನು ಶ್ರಮದಾನದಿಂದ ಮುಚ್ಚಿದ ಟ್ರಾಫಿಕ್ ಎಸೈ ಪ್ರಕಾಶ್ ಮತ್ತು ಸಿಬ್ಬಂದಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಗುರುತಿಸಿ ಗೌರವಿಸಿತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಅಂಬಲಪಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಹೊಂಡಗುಂಡಿಗಳಾದ್ದು ವಾಹನ ಸಂಚಾರವೇ ದುಸ್ತರವಾಗಿದೆ. ಈ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾದ ಘಟನೆಗಳೂ ನಡೆದಿವೆ. ಈ ಗುಂಡಿಗಳಿಂದಾಗಿ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಈ ಸಮಸ್ಯೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸದೇ ಇದ್ದಾಗ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಗರದ ಟ್ರಾಫಿಕ್ ಪೊಲೀಸರು ಸಾರ್ವಜನಿಕರ ಕಷ್ಟಗಳ‍ನ್ನು ನೋಡಲಾಗದೆ ಈ ಗುಂಡಿಗಳಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ್ದರು. ಈ ಕೆಲಸ ತಮ್ಮದಲ್ಲದಿದ್ದರೂ ತಾವೇ ಸ್ವಯಂಪ್ರೇರಿತರಾಗಿ ಈ ಸೇವೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಸಮಾಜಮುಖಿ ಕೆಲಸ ಮಾಡಿದ ಟ್ರಾಫಿಕ್ ಎಸೈ ಪ್ರಕಾಶ್ ಮತ್ತು ಸಿಬ್ಬಂದಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಗುರುತಿಸಿ ಗೌರವಿಸಿತು.ಈ ಸಂದರ್ಭದಲ್ಲಿ ಕ.ರ.ವೇ. ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್, ಪ್ರಮುಖರಾದ ಸಯ್ಯದ್ ನಿಜಾಮ್, ಸತೀಶ್ ಸನಿಲ್, ಪ್ರಶಾಂತ್ ಸಾಲಿಯಾನ್, ಅಬ್ದುಲ್ ಖಾದರ್ ಶಿರ್ವ, ಕಲಂಧರ್ ಶಫಿ, ಹಮೀದ್, ಜ್ಯೋತಿ ಸೇರಿಗಾರ್ತಿ, ದೇವಕಿ ಬಾರ್ಕೂರ್, ಕಿರಣ್ ಪ್ರತಾಪ್, ಚಂದ್ರಕಲಾ, ಮೋಹಿನಿ, ಸವಿತಾ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ