ಕರ್ನಾಟಕ ಸೊಸಾಯಿಟಿ ಬೆಳ್ಳಿ ಸಂಭ್ರಮಕ್ಕೆ ನಿರ್ಧಾರ

KannadaprabhaNewsNetwork |  
Published : Sep 30, 2025, 12:02 AM ISTUpdated : Sep 30, 2025, 12:03 AM IST
ವಿಜಯಪುರ ನಗರದ ವನಶ್ರೀ ಸಂಸ್ಥಾನಮಠದ ಸಭಾಭವನದಲ್ಲಿ ದಿ.ಕರ್ನಾಟಕ ಕೋ-ಅಪ್ ಕ್ರೆಡಿಟ್ ಸೊಸಾಯಿಟಿಯ 25ನೇ ವಾರ್ಷಿಕ ಮಹಾಸಭೆ ನಡೆಯಿತು. | Kannada Prabha

ಸಾರಾಂಶ

ಕನಿಷ್ಠ 10 ಸಾವಿರ ಸದಸ್ಯರು ಹಾಗೂ 25 ಶಾಖೆಗಳ ಗುರಿ ತಲುಪಿ ಮುಂದಿನ ವರ್ಷ ಬ್ಯಾಂಕಿನ ಬೆಳ್ಳಿ ಮಹೋತ್ಸವ ಅದ್ಧೂರಿ ಆಚರಣೆಗೆ ಗುರಿ ಹೊಂದಲಾಗಿದೆ

ಕನ್ನಡಪ್ರಭ ವಾರ್ತೆ ವಿಜಯಪುರ

ದಿ.ಕರ್ನಾಟಕ ಕೋ-ಅಪ್ ಕ್ರೆಡಿಟ್ ಸೊಸಾಯಿಟಿ ಯಶಸ್ವಿ 25ನೇ ವರ್ಷಾಚರಣೆ ಸಂಭ್ರಮದಲ್ಲಿದ್ದು, ಕನಿಷ್ಠ 10 ಸಾವಿರ ಸದಸ್ಯರು ಹಾಗೂ 25 ಶಾಖೆಗಳ ಗುರಿ ತಲುಪಿ ಮುಂದಿನ ವರ್ಷ ಬ್ಯಾಂಕಿನ ಬೆಳ್ಳಿ ಮಹೋತ್ಸವ ಅದ್ಧೂರಿ ಆಚರಣೆಗೆ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದರು.

ನಗರದ ವನಶ್ರೀ ಸಂಸ್ಥಾನಮಠದ ಸಭಾಭವನದಲ್ಲಿ ನಡೆದ ದಿ.ಕರ್ನಾಟಕ ಕೋ-ಅಪ್ ಕ್ರೆಡಿಟ್ ಸೊಸಾಯಿಟಿಯ 25ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇವಲ 400 ಸದಸ್ಯರು ಹಾಗೂ ₹4 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಈ ಸಂಸ್ಥೆ ಅನೇಕ ಹಿರಿಯರು, ನಿರ್ದೇಶಕರ ಪರಿಶ್ರಮ, ಸದಸ್ಯರ ಸಹಕಾರದಿಂದ ಇಂದು ಹಂತಹಂತವಾಗಿ ಬೆಳೆದು ಈ ವರ್ಷ ₹37 ಕೋಟಿ ವಹಿವಾಟು ಮಾಡಿ ಸತತ ಲಾಭದಲ್ಲಿ ಮುನ್ನೆಡೆಯುತ್ತಿದ್ದು, ಆರು ಹೊಸ ಶಾಖೆಗಳ‌ ಮೂಲಕ ಸೇವೆ ವಿಸ್ತರಿಸಿದೆ ಎಂದು ತಿಳಿಸಿದರು.

ಬ್ಯಾಂಕ್ ವರ್ಷಾಂತ್ಯದಲ್ಲಿ 3 ಸಾವಿರ ಸದಸ್ಯರು, ಸುಮಾರು ₹90 ಲಕ್ಷ ಶೇರು ಬಂಡವಾಳ ಹಾಗೂ ₹6.45 ಕೋಟಿ ಠೇವು ಹೊಂದಿದೆ. ವಿವಿಧ ರೀತಿಯ ₹9.68 ಕೋಟಿ‌ ಸಾಲ ವಿತರಿಸಿ ಪ್ರಸಕ್ತ ವರ್ಷ ₹25.59 ಲಕ್ಷ ನಿವ್ವಳ‌ ಲಾಭದೊಂದಿಗೆ ಸದಸ್ಯರಿಗೆ ಶೇ.15 ಡಿವಿಡೆಂಡ್‌ ನೀಡಲು ಘೋಷಿಸಿದ್ದೇವೆ ಎಂದರು. ನಿರ್ದೇಶಕ ಎಸ್.ಎಸ್.ಶಿರಾಡೋಣ ಮಾತನಾಡಿ, ಸದಸ್ಯರು ನಾಲ್ಕು ವರ್ಷದ ಡಿವಿಡೆಂಡ್‌ ತೆಗೆದುಕೊಂಡಿಲ್ಲ. ಮೂರು ವರ್ಷದ ಉಳಿಕೆ ಡಿವಿಡೆಂಡ್‌ ಬ್ಯಾಂಕಿನ ಕಟ್ಟಡ ಅಭಿವೃದ್ಧಿ ನಿಧಿಗೆ ಬಳಸಿಕೊಳ್ಳಲು ಸಲಹೆ ನೀಡಿದರು.

ಉಪಾಧ್ಯಕ್ಷ ಆರ್‌.ಎಲ್.ಇಂಗಳೇಶ್ವರ ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪಕಿ ಶಕುಂತಲಾ.ಆರ್‌.ಎಂ ವಾರ್ಷಿಕ ವರದಿ ವಾಚಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಸುನೀಲ ಕಲ್ಲೂರ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿಇಓ‌ ಡಾ.ಬಾಬು ಸಜ್ಜನ, ಸಿಪಿಐ ಪರಶುರಾಮ ಮನಗೂಳಿ, ರೇಷ್ಮೆ ಇಲಾಖೆ ಅಧಿಕಾರಿ ಸುರೇಶ ಗೊಳಗೊಂಡ, ಎಫ್‌ಪಿಒಗಳ ಸಹಕಾರಿ ಮಹಾಮಂಡಳ ಉಪಾಧ್ಯಕ್ಷ ಮದನ ಲೋಣಿ, ಪತ್ರಕರ್ತ ಬಸವರಾಜ ಉಳ್ಳಾಗಡ್ಡಿ, ಜಗದೀಶ ಪಾಟೀಲರಿಗೆ ಗೌರವಿಸಿ ಸನ್ಮಾನಿಸಲಾಯಿತು.

ನಿರ್ದೇಶಕರಾದ ಬಿ.ಜಿ.ಪಾಟೀಲ ಹಲಸಂಗಿ, ಜಿ.ಟಿ.ಪಾಟೀಲ, ಎಸ್.ಎಸ್.ಅರಕೇರಿ, ಎ.ಎಸ್.ಹೊಸಮನಿ, ಶರಣಪ್ಪ ಶ್ಯಾಪೇಟಿ, ಶಿವಕುಮಾರ ಸಜ್ಜನ, ನಿಂಗಪ್ಪ ಕೊಂಡಗೂಳಿ, ಶೋಭಾ ಕತ್ನಳ್ಳಿ, ವಿ.ಎಸ್.ಹತ್ತಳ್ಳಿ, ವಿ.ಸಿ.ರಾಯಚೂರ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ವಿವಿಧ ಶಾಖೆಗಳ ಸಲಹಾ ಸಮಿತಿ‌ ಸದಸ್ಯರು, ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು. ಸಂತೋಷ ಬಂಡೆ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ