ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಸಂಧ್ಯಾ ಪುರೆಚ್ ಅವರು ವಿಶ್ವವಿದ್ಯಾಲಯದ ನೂತನ ಅಂತರ್ಜಾಲವನ್ನು ಅನಾವರಣ ಗೊಳಿಸಿದರು.
ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸಂಗೀತ ನಾಟಕ ಅಕಾಡಮಿಯ ಎಲ್ಲಾ ಯೋಜನೆಗಳು, ಮತ್ತು ಸಹಾಯಧನದ ಮಾಹಿತಿ, ಯುವ ಕಲಾವಿದರಿಗೆ ಇರುವ ಶಿಷ್ಯವೇತನದ ಸಹಾಯದನದ ಮಾಹಿತಿ ನೀಡಿದರು.ಅಲ್ಲದೆ ವಯಸ್ಸಿನ ಭೇದವಿಲ್ಲದೆ ಎಲ್ಲಾ ಕಲಾವಿದರು ಅಕಾಡೆಮಿಯ ಜಾಲತಾಣದಲ್ಲಿ ತಮ್ಮ ಸ್ವವಿವರವನ್ನು ನೀಡಬೇಕು. ಇದರಿಂದ ಕಲಾವಿದರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಲು ಮತ್ತು ನಮ್ಮ ಸಂಸ್ಕೃತಿಯ ಉಳಿವಿಗಾಗಿ , ಮತ್ತು ನಮ್ಮ ಕಲೆಗಳ ಪ್ರಚಾರಕ್ಕಾಗಿ ಕಲಾವಿದ ಹಾಗೂ ಸರ್ಕಾರದ ಅನುದಾನಗಳನ್ನು ಸಮರ್ಪಕವಾಗಿ ನೀಡಲು ಅನುಕೂಲವಾಗುತ್ತದೆ ಎಂದರು.
ಭಾರತೀಯ ಪ್ರದರ್ಶನ ಕಲೆಗಳ ವಲಯವನ್ನು ವಿಸ್ತರಿಸುವ ಉದ್ದೇಶದ ಹಲವು ಮಹತ್ವದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಗೀತ ವಿವಿ ಕುಲಪತಿ ಡಾ.ನಾಗೇಶ್ ವಿ. ಬೆಟ್ಟಕೋಟೆ ಮಾಕನಾಡಿ, ವಿಶ್ವವಿದ್ಯಾಲಯವು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಿರುವ ಎಲ್ಲಾ ಮೂಲಗಳಿಂದಲೂ ಕಲಾವಿದರನ್ನು ಮತ್ತು
ಬೋಧಕರೊಂದಿಗೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು. ಆತ್ಮೀಯವಾಗಿ ನಡೆದ ಕಾರ್ಯಕ್ರಮದಲ್ಲಿ ನೃತ್ಯ, ನಾಟಕ ಮತ್ತು ಸಂಗೀತ ವಿಭಾಗದ ಎಲ್ಲ ಬೋಧಕರು ಉಪಸ್ಥಿತರಿದ್ದರು.