ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ರೈತ ಪರ ಸರ್ಕಾರ: ಎಚ್ಡಿಕೆ

KannadaprabhaNewsNetwork |  
Published : Apr 14, 2024, 01:46 AM ISTUpdated : Apr 14, 2024, 09:16 AM IST
೧೩ ಟಿವಿಕೆ ೨ - ತುರುವೇಕೆರೆಯಲ್ಲಿ ನಡೆದ ಬಿಜೆಪಿ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. | Kannada Prabha

ಸಾರಾಂಶ

ನಾನು ನನ್ನ ಪಕ್ಷದ ಉಳಿವಿಗಾಗಿ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಬಿಜೆಪಿ ಜತೆಗೆ ಕೈಜೋಡಿಸಿದ್ದೇನೆ. ಇನ್ನು ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ನಿಮ್ಮ ಸರ್ಕಾರ ಬರಲಿದೆ. ಅಂದರೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

  ತುರುವೇಕೆರೆ(ತುಮಕೂರು) :  ನಾನು ನನ್ನ ಪಕ್ಷದ ಉಳಿವಿಗಾಗಿ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದ ಬಿಜೆಪಿ ಜತೆಗೆ ಕೈಜೋಡಿಸಿದ್ದೇನೆ. ಇನ್ನು ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ನಿಮ್ಮ ಸರ್ಕಾರ ಬರಲಿದೆ. ಅಂದರೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಶನಿವಾರ ವಿ.ಸೋಮಣ್ಣ ಪರ ಮತಯಾಚನೆ ಮಾಡಿದ ಅವರು, ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿಗಳ ಜೊತೆಗೆ ತಾನು ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಗ್ಯಾರಂಟಿ ಎಂಬ ಸಂದೇಶವನ್ನು ಕಾಂಗ್ರೆಸ್‌ ನೀಡಿದೆ. ಮುಂಬರುವ ದಿನಗಳಲ್ಲಿ ದೇಶದ ಪ್ರಧಾನಿಯಾಗಿ ಮೋದಿಯವರು ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಆ ಸಂದರ್ಭದಲ್ಲಿ ಖುದ್ದು ನಾನೇ ಅವರ ಜತೆಗೆ ಮಾತನಾಡಿ ರಾಜ್ಯದ ಜನರ ಹಿತಕಾಯುವ ಕೆಲಸ ಮಾಡುತ್ತೇನೆ ಎಂದರು.

ರೈತರು ಭಿಕ್ಷುಕರಲ್ಲ: ಈ ಕಾಂಗ್ರೆಸ್ ಸರ್ಕಾರ ಬರಗಾಲದ ಪರಿಹಾರವಾಗಿ ಕೇವಲ ೨ ಸಾವಿರ ರು. ನೀಡಿದೆ. ಈ ವಿಚಾರದಲ್ಲೂ ನೂರಕ್ಕೆ ನೂರರಷ್ಟು ಗುರಿಸಾಧನೆಯಾಗಿಲ್ಲ. ಆದರೆ ಸರ್ಕಾರ ೫ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ ಎಂದು ಪ್ರಚಾರ ಮಾಡಲು ಸುಮಾರು ೩೦೦ ಕೋಟಿ ರು.ಗಳನ್ನು ವ್ಯಯ ಮಾಡಿದ್ದಾರೆ. ಅಂದರೆ ರೈತರಿಗೆ ಕೊಡಲು ಹಣ ಇಲ್ಲ ಎನ್ನುವ ಈ ಸರ್ಕಾರ, ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ವ್ಯಯ ಮಾಡುತ್ತಿದೆ ಎಂದು ಕಿಡಿಕಾರಿದರು. 

ಮಹಾನ್ ನಾಯಕ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕೊಬ್ಬರಿಯ ಪ್ರತಿ ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು.ಗಳ ಸೂಕ್ತ ಬೆಲೆ ಕೊಡಿಸುವ ಭರವಸೆಯನ್ನು ಕನಕಪುರದ ಮಹಾನ್ ನಾಯಕ ಹೇಳಿ ಹೋಗಿದ್ದರು. ಆದರೆ ಅಧಿಕಾರಕ್ಕೆ ಬಂದು ಎಂಟ್ಹತ್ತು ತಿಂಗಳು ಆಗುತ್ತಾ ಬಂದರೂ ಈವರೆಗೂ ಕೊಬ್ಬರಿ ಬಗ್ಗೆ ಮಾತೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ರವರನ್ನು ತಿವಿದರು.

PREV

Recommended Stories

ಎನ್‌ಒಸಿ ಬೇಕಾ? : ವಾಹನದ ಪೂರ್ಣ ಮಾಹಿತಿ ಅಪ್ಡೇಟ್‌ ಮಾಡಿ
ಬೆಂಗಳೂರು : ಕೆರೆ ಜಾಗದಲ್ಲಿ ಕಟ್ಟಿದ್ದ 20 ಮನೆ ನೆಲಸಮ