ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಸೋಮವಾರ ನಡೆದ ಪಂದ್ಯದಲ್ಲಿ ಕರ್ತಮಾಡ, ಚಿಂಡಮಾಡ, ಆಟ್ರಂಗಡ ತಂಡಗಳು ಜಯ ಸಾಧಿಸಿವೆ.ಬೊಟ್ಟಂಗಡ ಮತ್ತು ಕರ್ತಮಾಡ ತಂಡಗಳ ನಡುವಿನ ಪಂದ್ಯ ತಲಾ 1 ಗೋಲುಗಳ ಮೂಲಕ ಪಂದ್ಯ ಡ್ರಾ ಆದ ಕಾರಣ ಟೈ ಬ್ರೇಕರ್‌ನಲ್ಲಿ ಕರ್ತಮಾಡ ತಂಡ 5-3 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಚಿಂಡಮಾಡ ಮತ್ತು ತೇಲಪಂಡ ನಡುವಿನ ಪಂದ್ಯದಲ್ಲಿ ಕೂಡ ತಲಾ 1 ಗೋಲು ದಾಖಲಿಸುವ ಸಮಬಲ ಸಾಧಿಸಿದ್ದರಿಂದ ಟೈ ಬ್ರೇಕರ್‌ನಲ್ಲಿ ಚಿಂಡಮಾಡ ತಂಡ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಕುಂಡ್ರಂಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಆಟ್ರಂಗಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು.ಕಾಡ್ಯಮಾಡ ಮತ್ತು ಮಳವಂಡ ತಂಡಗಳ ನಡುವಿನ ಪಂದ್ಯದಲ್ಲಿ ಮಳವಂಡ ತಂಡ 2-0 ಗೋಲು ಅಂತರದಲ್ಲಿ ಗೆಲುವು ದಾಖಲಿಸಿತು. ಅರೆಯಡ ಮತ್ತು ಚೋಕಿರ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಅರೆಯಡ ತಂಡ ಗೆಲುವು ದಾಖಲಿಸಿತು.
ಚೇಂದಿರ ಮತ್ತು ಕಾಯಪಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಸಮಬಲವಾದ ಕಾರಣ ನಂತರ ನಡೆದ ಟೈ ಬ್ರೇಕರ್‌ನಲ್ಲಿ 7-6 ಗೋಲುಗಳ ಅಂತರದಲ್ಲಿ ಕಾಯಪಂಡ ತಂಡ ಗೆಲುವು ದಾಖಲಿಸಿತು.ಕೋಳೇರ ಮತ್ತು ಕರವಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಗೆಲುವು ದಾಖಲಿಸಿತು. ಅಪ್ಪಚೆಟ್ಟೋಳಂಡ ಮತ್ತು ಪಳೆಯಂಡ(ನಾಲ್ಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಅಪ್ಪಚೆಟ್ಟೋಳಂಡ ತಂಡ ಗೆಲುವು ದಾಖಲಿಸಿತು.
ಮನೆಯಪಂಡ ಮತ್ತು ಅಕ್ಕಪಂಡ ನಡುವಿನ ಪಂದ್ಯದಲ್ಲಿ ಮನೆಯಪಂಡ ತಂಡ 4-0 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು.ಮುದ್ದಿಯಡ ಮತ್ತು ಆಲೆಮಾಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ನಿಗದಿತ ಅವಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್ ನಲ್ಲಿ 3-1 ಗೋಲುಗಳ ಅಂತರದಲ್ಲಿ ಆಲೆಮಾಡ ತಂಡ ಜಯ ಸಾಧಿಸಿತು. ಮಾನಿಪಂಡ ಮತ್ತು ಚಕ್ಕೇರ ನಡುವಿನ ಪಂದ್ಯದಲ್ಲಿ 2-0 ಗೋಲು ಅಂತರದಲ್ಲಿ ಚೆಕ್ಕೇರ ತಂಡ ಜಯ ಸಾಧಿಸಿತು.
ಬೊಳ್ತಂಡ ಮತ್ತು ಬೊಜ್ಜಂಗಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಬೊಜ್ಜಂಗಡ ತಂಡ ಜಯ ಸಾಧಿಸಿತು.ಮಚ್ಚಮಾಡ ಮತ್ತು ಎಳ್ತಂಡ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಚ್ಚಮಾಡ ತಂಡ ಗೆಲುವು ಸಾಧಿಸಿತು. ಕೊಂಗಂಡ ಮತ್ತು ಕೋದಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕೊಂಗಂಡ ಜಯ ಸಾಧಿಸಿತು.
ಕಳ್ಳೇಂಗಡ(ಬೆಳ್ಳೂರು) ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯ ಸಾಧಿಸಿತು.ಬಾಳೆಯಡ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲು ದಾಖಲಿಸಿ ಸಮಬಲ ಪ್ರದರ್ಶನ ಮಾಡಿದ ಕಾರಣ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಬಾಳೆಯಡ ತಂಡ ಗೆಲುವು ಸಾಧಿಸಿತು. ಪಾಲೆಯಡ ಮತ್ತು ಕೊಣೇರಿರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೊಣೇರಿರ ತಂಡ ಗೆಲುವು ಸಾಧಿಸಿತು.
ಇಟ್ಟೀರ ಮತ್ತು ಅಲ್ಲಂಡ ನಡುವಿನ ಪಂದ್ಯದಲ್ಲಿ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಇಟ್ಟೀರ ತಂಡ ಜಯ ಸಾಧಿಸಿತು.