ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಅದಿತ್ಯ ಶರ್ಮ ಪೌರೋಹಿತ್ಯದಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ, ಶ್ರೀಪಂಚಮುಖಿ ಗಣಪತಿ, ಶ್ರೀಪಂಚಮುಖಿ ಆಂಜನೇಯಸ್ವಾಮಿ, ಶ್ರೀಕಂಠೇಶ್ವರ, ಶ್ರೀಸೂರ್ಯನಾರಾಯಣ ಸ್ವಾಮಿ ಹಾಗೂ ಶ್ರೀಅಂಬಿಕಾ ದೇವಿಗೆ ಫಲ, ಪಂಚಾಮೃತಾಭಿಷೇಕ ಮತ್ತು ವಿಶೇಷ ಅಲಂಕಾರ ಪೂಜಾ ವಿಧಿಗಳು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂತರ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದ ಶ್ರೀಸತೀಶ್ ಶರ್ಮ ಗುರೂಜೀಗಳು ಮಾತನಾಡಿ, ಕಾರ್ತಿಕ ಮಾಸ ದೀಪೋತ್ಸವವು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ಬೆಳಕನ್ನು ಹೃದಯದಲ್ಲಿ ಬೆಳಗಿಸುವ ಸಂಕೇತ. ಜಗತ್ತಿನಲ್ಲಿ ಪ್ರಕೃತಿ ವಿಕೋಪಗಳು ಕಡಿಮೆಯಾಗಿ ಸುಖ, ಶಾಂತಿಯು ನೆಲೆಯೂರಲಿ. ಸಮಾನತೆ ಮತ್ತು ಸದ್ಭಾವನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ವಾಸವಾಗಲಿ ಎಂಬ ಪ್ರಾರ್ಥನೆ ಭಕ್ತರು ಪವಿತ್ರ ಮನಸ್ಸಿನಿಂದ ಮಾಡಬೇಕು ಎಂದು ತಿಳಿಸಿದರು.ಪೂಜಾ ಸಮಾರಂಭದಲ್ಲಿ ಶ್ರೀಲಕ್ಷ್ಮೀನರಸಿಂಹ ಕ್ಷೇತ್ರಾಭಿವೃದ್ಧಿ ಸಮಿತಿ, ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಅವಧೂತ ಶಿಷ್ಯ ಬಳಗದ ಸದಸ್ಯರು, ನೂರಾರು ಮಹಿಳೆಯರು ಹಾಗೂ ಭಕ್ತಾದಿಗಳು ಭಾಗವಹಿಸಿದರು. ಕಾರ್ಯಕ್ರಮದ ಬಳಿಕ ಎಲ್ಲ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಸಂಜೆ ವೇಳೆ ಸುಮಾರು 10 ಸಾವಿರ ತುಪ್ಪದ ಬತ್ತಿಗಳನ್ನು ಭಕ್ತರು ಪ್ರಜ್ವಲಿಸಿ ವಿಷ್ಣು ದೀಪೋತ್ಸವಕ್ಕೆ ವಿಶೇಷ ಮೆರುಗು ತಂದರು.