40 ದಿನಗಳಲ್ಲಿ 62,428 ಕಿಮೀ ಸೈಕ್ಲಿಂಗ್ ಮಾಡಿದ ಕಾರವಾರದ ಸೈಕ್ಲಿಸ್ಟ್

KannadaprabhaNewsNetwork |  
Published : Mar 19, 2026, 02:15 AM IST
ಕಾರವಾರದ ಸೈಕ್ಲಿಸ್ಟ್ ತಂಡ  | Kannada Prabha

ಸಾರಾಂಶ

ಕೇವಲ 40 ದಿನಗಳಲ್ಲಿ ಒಟ್ಟು 62,428 ಕಿಲೋಮೀಟರ್ ಸೈಕ್ಲಿಂಗ್ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಕ್ಲಬ್, ದೇಶಾದ್ಯಂತ ಭಾಗವಹಿಸಿದ ಕ್ಲಬ್‌ಗಳಲ್ಲಿ 4ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ.

ಕ್ಯಾಂಕಿಡ್ಸ್ ‘ಸೈಕಲ್ ಫಾರ್ ಗೋಲ್ಡ್’ ಅಭಿಯಾನದಲ್ಲಿ ಕಾರವಾರ ಬೈಸಿಕಲ್ ಕ್ಲಬ್‌ನ ವಿಶಿಷ್ಟ ಸಾಧನೆ

ಕನ್ನಡಪ್ರಭ ವಾರ್ತೆ ಕಾರವಾರಬಾಲ್ಯ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ಆಯೋಜಿಸಲಾದ “ಕ್ಯಾಂಕಿಡ್ಸ್ – ಸೈಕಲ್ ಫಾರ್ ಗೋಲ್ಡ್” ಅಭಿಯಾನದಲ್ಲಿ ಕಾರವಾರ ಬೈಸಿಕಲ್ ಕ್ಲಬ್ ಸದಸ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ. ಕೇವಲ 40 ದಿನಗಳಲ್ಲಿ ಒಟ್ಟು 62,428 ಕಿಲೋಮೀಟರ್ ಸೈಕ್ಲಿಂಗ್ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿರುವ ಕ್ಲಬ್, ದೇಶಾದ್ಯಂತ ಭಾಗವಹಿಸಿದ ಕ್ಲಬ್‌ಗಳಲ್ಲಿ 4ನೇ ಸ್ಥಾನ ಪಡೆಯಲು ಯಶಸ್ವಿಯಾಗಿದೆ.ಈ ಅಭಿಯಾನದಲ್ಲಿ ಒಟ್ಟು 54 ಸೈಕ್ಲಿಸ್ಟ್‌ ಭಾಗವಹಿಸಿದ್ದು, ವಿಶೇಷವೆಂದರೆ ಈ ಎಲ್ಲಾ ಸದಸ್ಯರು ಕಾರವಾರದ ಸ್ಥಳೀಯ ಸೈಕ್ಲಿಸ್ಟ್ ಗಳೇ ಆಗಿದ್ದಾರೆ. ಈ ಅಭಿಯಾನದಲ್ಲಿ ಕ್ಲಬ್‌ನ ಹಲವಾರು ಸದಸ್ಯರು ವೈಯಕ್ತಿಕವಾಗಿ ಕೂಡ ಉತ್ತಮ ಸಾಧನೆ ಮಾಡಿದ್ದಾರೆ.ಪುರುಷರ ವಿಭಾಗದಲ್ಲಿ ಧೀರಜ್ ಭುಜ್ಲೆ- 5556 ಕಿಮೀ, ಸುರೇಶ್ ಪಿ.- 4197 ಕಿಮೀ, ಕಿಶೋರ್ ಬಾಂದೇಕರ್- 4014 ಕಿಮೀ ಕ್ರಮಿಸಿ ಸಾಧನೆ ಮಾಡಿದ್ದಾರೆ. ಮಹಿಳಾ ವಿಭಾಗದಲ್ಲಿ ಸಾಕ್ಷಿ ಎಸ್. ನಾಯಕ-1603 ಕಿಮೀ, ಅಕ್ಷತಾ ಶೆಟ್ಟಿ- 1206 ಕಿಮೀ, ಶೋಭಿತ್ ಹೆಗ್ಡೆ- 1109 ಕಿಮೀ ಕ್ರಮಿಸಿ ಸಾಧನೆ ಮಾಡಿದ್ದಾರೆ.

ಕಾರವಾರ ಬೈಸಿಕಲ್ ಕ್ಲಬ್ ಅಧ್ಯಕ್ಷ ಡಾ. ಸೂರಜ್ ಹೆಗ್ಡೆ, ಕಾರ್ಯದರ್ಶಿ ಡಾ. ಸಚಿನ್ ನಾಯ್ಕ ಹಾಗೂ ಖಜಾಂಚಿ ಆರ್.ವಿ. ಭಟ್ ನೇತೃತ್ವದಲ್ಲಿ, ಕಿಶೋರ ಬಾಂದೇಕರ್ ಮಾರ್ಗದರ್ಶನದಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆಯಿತು.ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಕ್ಲಬ್ ಅಧ್ಯಕ್ಷ ಡಾ. ಸೂರಜ್ ಹೆಗ್ಡೆ ಹಾಗೂ ಸದಸ್ಯರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಯುಗಾದಿಯ ಸಂಭ್ರಮ: ಆದರೆ ಕೂಡ್ಲಿಗಿಯಲ್ಲಿ ಸೂತಕದ ಛಾಯೆ!
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ತಹಸೀಲ್ದಾರ್ ಕೆ. ರಾಘವೇಂದ್ರ ರಾವ್