‘ಗಂಡಸರನ್ನು ಕೊಲ್ಲಿರಿ’ ಸೇರಿ ಹಲವು ಕೃತಿಗೆ ಕಸಾಪ ಪ್ರಶಸ್ತಿ

KannadaprabhaNewsNetwork |  
Published : Feb 01, 2026, 02:15 AM IST
ಕಸಾಪ ಪ್ರಶಸ್ತಿ | Kannada Prabha

ಸಾರಾಂಶ

2024ರ ಜನವರಿಯಿಂದ ಡಿಸೆಂಬರ್‌ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

2024ರ ಜನವರಿಯಿಂದ ಡಿಸೆಂಬರ್‌ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ಈ ಪೈಕಿ ವಸುದೇವ ಭೂಪಾಲಂ ದತ್ತಿಯಲ್ಲಿ ನಾಲ್ಕು ಪುಸ್ತಕಗಳಿಗೆ ಮತ್ತು ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿಯಲ್ಲಿ ಎರಡು ಪುಸ್ತಕಗಳಿಗೂ ಬಹುಮಾನ ನೀಡಲಾಗಿದೆ.

ಲೇಖಕರಾದ ಡಾ.ಎಚ್‌.ಡಿ.ಜಯಪದ್ಮಕುಮಾರ್‌- ಆರಾಧ್ಯಪುಣ್ಯಸೂತ್ರ (ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ ಜೈನ ದತ್ತಿ ಪ್ರಶಸ್ತಿ), ಡಾ.ಪದ್ಮರಾಜ ದಂಡಾವತಿ- ಜೈನಧರ್ಮ (ಪೂಜ್ಯ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ದತ್ತಿ), ರವಿ ಸೋಮಣ್ಣ ಅಂಬೋಜಿ- ಮಾರ್ಗದಾಳು (ಡಾ.ಎಚ್‌.ಎಸ್‌.ಮದನಕೇಸರಿ ಮತ್ತು ಎಂ.ಪಿ.ಗುಣಮಾಲ ದತ್ತಿ), ಶಾರದಾ ವಿ.ಮೂರ್ತಿ- ಸಾಧನೆ (ಕೆ.ಎಸ್‌.ಭಾರತಿ ರಾಜಾರಾಮ್‌ ಮಧ್ಯಸ್ಥ ದತ್ತಿ), ಸುನೀತಾ ರಾಜು- ನೇಪಥ್ಯೆಯರು (ಗೌರುಭಟ್‌ ದತ್ತಿ ಪ್ರಶಸ್ತಿ), ರೇಣುಕಾ ಕೋಡಗುಂಟೆ- ಚಿಗುರೊಡೆದ ಬೇರು (ಡಾ.ವೀಣಾ ಶಾಂತೇಶ್ವರ ದತ್ತಿ), ಫೌಝಿಯಾ ಸಲೀಂ- ಕುಚುಕು (ದಿ.ಗೌರಮ್ಮ ಹಾರ್ನಹಳ್ಳಿ ಕೆ.ಮಂಜಪ್ಪ ದತ್ತಿ), ಅನುಸೂಯ ಯತೀಶ್‌- ಕೆನೆವಾಲ ಕಡೆದು (ಮಲ್ಲಿಕಾ ಪ್ರಶಸ್ತಿ ದತ್ತಿ), ಡಾ.ಸುಜಾತಾ ಚಲವಾದಿ- ಲಚಮವ್ವ (ಅಂತಾರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ), ಉಮಾ ಅನಂತ್‌- ಆರೋಗ್ಯ ಮಾಹಿತಿ ಸ್ವಸ್ಥ ಬದುಕಿಗೆ ಸ್ಫೂರ್ತಿ (ಶಾರದಾ ರಾಮಲಿಂಗಪ್ಪ ದತ್ತಿ) ಅಯ್ಕೆಯಾಗಿವೆ.

ಮೇ.ನಾ.ತರಂಗಿಣಿ- ಒಂದಿಷ್ಟೇ ಇಷ್ಟು ತಾವು (ಲಿಂ.ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ದತ್ತಿ), ಲತಾ ಹೆಗಡೆ- ಕೃಶಕಾಯದ ಕರಕರೆ (ನೀಲಗಂಗಾ ದತ್ತಿ), ಗೀತಾಮಂಜು ಬೆಣ್ಣೆಹಳ್ಳಿ- ಕಿರು ಬೆಳಕಿನ ಸೂಜಿ (ಶಾರದಾ ಆರ್. ರಾವ್ ದತ್ತಿ), ಸ್ಮಿತಾ ಅಮೃತರಾಜ್ ಸಂಪಾಜೆ- ಅವರೆ ಚಪ್ಪರದ ಹಾಡು (ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ), ಡಾ. ಎನ್.ಎಂ. ಗಿರಿಜಾಪತಿ- ಷಡಕ್ಷರಿ ದೇವನ ಶಬರಶಂಕರ ವಿಳಾಸಂ (ಜಯಲಕ್ಷ್ಮಮ್ಮ ಬಿ.ಎಸ್. ಸಣ್ಣಯ್ಯ ದತ್ತಿ), ರೇಷ್ಮಾ ಭಟ್- ಕಂದನ ಮುಡಿಪೂ (ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ), ಡಾ.ಎ.ರಘುರಾಂ- ನುಡಿ ಚಿಗುರು (ಡಾ. ಹಾ.ಮಾ. ನಾಯಕ ಸ್ಮಾರಕ ದತ್ತಿ ಪ್ರಶಸ್ತಿ), ಚನ್ನಪ್ಪ ಅಂಗಡಿ- ಇನ್ನು ಕೊಟ್ಟೆನಾದೊಡೆ (ಡಾ. ಜಿ. ಚಂದ್ರಮೌಳೇಶ್ವರ ದತ್ತಿ), ಡಾ. ಎನ್‌.ಮಧುಸೂದನ- ಸ್ವಾಸ್ಥ್ಯಮುಖಿ (ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ), ರಮ್ಯಾ ಶ್ರೀಹರಿ- ಅನಿಶ್ಚಿತತೆಯಿಂದ ಆನಂದದೆಡೆಗೆ (ದಿ. ಡಾ. ಎ.ಎಸ್. ಧರಣೇಂದ್ರಯ್ಯ-ಮನೋವಿಜ್ಞಾನ ದತ್ತಿ) ಆಯ್ಕೆಗೊಂಡಿವೆ.

ಡಾ. ಕೆ.ವಿ. ಮುದ್ದವೀರಪ್ಪ- ನೆಲಮೂಲ ಸಂಸ್ಕೃತಿ (ವಿ. ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಶಸ್ತಿ), ಕಾರ್ಗಲ್ ಭೋಗರಾಜ್- ಅನಾವರಣ (ಭಾರತಿ ಮೋಹನ ಕೋಟಿ ದತ್ತಿ), ಎಂ.ಸಂಪತ್ ಕುಮಾರ್- ನಿಕಷ (ನಿಡಸಾಲೆ ಪುಟ್ಟಸ್ವಾಮಯ್ಯ ಸಾಹಿತ್ಯ ಪ್ರಶಸ್ತಿ ದತ್ತಿ), ಸದಾನಂದ ಏಳಗುಂಟೆ- ಭಾವೈಕ್ಯದ ನೆಲೆಗಳು (ಡಾ. ಎಚ್. ನರಸಿಂಹಯ್ಯ ದತ್ತಿ), ಹೇಮಂತ್ ಲಿಂಗಪ್ಪ- ಮತ್ತೆ ಮತ್ತೆ ಮಳೆ (ದಿವಂಗತ ಕೆ.ವಿ. ರತ್ನಮ್ಮ ದತ್ತಿ), ಪ್ರೊ. ದೊಡ್ಡಣ್ಣ ಭಜಂತ್ರಿ- ಜಾನಪದ ಸಂಭ್ರಮ (ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ), ಎಚ್.ಎಸ್. ಚಂಪಾವತಿ - ತಲ್ಲಣ (ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿ), ಕೋರಗಲ್ ವಿರೂಪಾಕ್ಷಪ್ಪ- ಕಲ್ಯಾಣದ ಉಳಿವು (ಗುಬ್ಬಿ ಸೋಲೂರು ಮುರುಗಾರಾಧ್ಯ ದತ್ತಿ ಪ್ರಶಸ್ತಿ), ಕೆ.ಎಸ್.ಸತೀಶ್- ಭೈರ (ಸಾರಂಗಿ ವೆಂಕಟರಾಮಯ್ಯ ಶ್ರೀನಿವಾಸರಾವ್ ದತ್ತಿ), ಡಾ. ಟಿ. ಲಕ್ಷ್ಮಿನಾರಾಯಣ- ಸ್ವಾತಂತ್ರ್ಯ ಸಮರ ಕರುನಾಡು ಅಮರ (ದಿ. ಕಾಕೋಳು ಸರೋಜಮ್ಮ ದತ್ತಿ) ಕೃತಿಗಳು ಆಯ್ಕೆಯಾಗಿವೆ.

ದಸ್ತಗೀರಸಾಬ್‌ ದಿನ್ನಿ- ಮಧುಬಟ್ಟಲಿನ ಗುಟುಕು (ಪಂಪಮ್ಮ-ಶರಣೇಗೌಡ ವಿರುಪಾಪುರ ದತ್ತಿ), ಸವಿರಾಜ್ ಆನಂದೂರು- ಗಂಡಸರನ್ನು ಕೊಲ್ಲಿರಿ (ನಾ.ಕು. ಗಣೇಶ್ ದತ್ತಿ), ಮಂದಗದ್ದೆ ಚಂದ್ರಮೌಳಿ- ಮಕ್ಕಳಿಗಾಗಿ ಚಿಕ್ಕ ಕಥೆಗಳು (ದಿ. ಎಚ್. ಕರಿಯಣ್ಣ ದತ್ತಿ ಪ್ರಶಸ್ತಿ), ಶಂಕರದೇವರು ಹಿರೇಮಠ- ನಾವು ಭಾರತೀಯರು ವೀರ ಕನ್ನಡಿಗರು (ಪಳಕಳ ಸೀತಾರಾಮಭಟ್ಟ ದತ್ತಿ ಪ್ರಶಸ್ತಿ), ಅಕ್ಬರ್ ಸಿ. ಕಾಲಿಮಿರ್ಚಿ- ಎಸ್ಕಲೇಟರ್( ‘ಸಿಸು’ ಸಂಗಮೇಶ ದತ್ತಿ ಪ್ರಶಸ್ತಿ), ಪ್ರೊ. ಎಂ.ಎಸ್. ರಘುನಾಥ್- ಚೆಲುವಿನ ಅನಾವರಣ ( ದಿ. ಪದ್ಮ ಆರ್. ಸ್ಮರಣಾರ್ಥ ದತ್ತಿ ಪ್ರಶಸ್ತಿ), ಕಪಿಲ ಪಿ. ಹುಮನಾಬಾದೆ- ಬಣಮಿ (ಜಯಲಕ್ಷ್ಮಿ ಮತ್ತು ಬಾಪು ರಾಮಣ್ಣ ದತ್ತಿ), ಲಕ್ಷ್ಮಣ ಶರೆಗಾರ- ತಿದಿಯ ತುದಿಗೆ ಬೆಂಕಿಯ ಉಗುಳು ( ಹೇಮರಾಜ್ ಜಿ.ಎನ್. ಕುಶಾಲನಗರ ದತ್ತಿ), ಶ್ರೀನಿವಾಸ ಜೋಕಟ್ಟೆ- ಅದೆಲ್ಲಾ ಬಿಟ್ಟು (ಕೆ. ವಾಸುದೇವಾಚಾರ್ ದತ್ತಿ), ಅನಿಲಕುಮಾರ ಗುನ್ನಾಪೂರ- ಸರ್ವೆ ನಂಬರ್-97 (ಬೋರಮ್ಮ ಗೋವಿಂದಪ್ಪ ದತ್ತಿ), ಭವ್ಯ ಕಬ್ಬಳಿ- ದೇವರ ತೇರಿಗೂ ಗಾಲಿಗಳು ಬೇಕು (ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ) ಕೃತಿಗಳು ಆಯ್ಕೆಗೊಂಡಿವೆ.

ಎ. ಇರಾಜ ವೃಷಭ- ನನಸಾಯಿತು ಕನಸು (ಡಾ. ಆರ್.ಜೆ. ಗಲಗಲಿ ದತ್ತಿ ಪ್ರಶಸ್ತಿ), ಅನಂತ ಕುಣಿಗಲ್- ಸಿಗ್ನಲ್ ಜಂಪ್ (ಪ್ರಕಾಶಕ ಆರ್. ಎನ್. ಹಬ್ಬು ದತ್ತಿ), ಬಸವರಾಜ ಕುಂಬಾರ- ಊರತುಂಬಾ ಉಸಾಬರಿ..! (ಪದ್ಯ) ಮತ್ತು ಡಾ. ನೀ.ಗೂ. ರಮೇಶ್- ಗಾಂಧೀ ಮರ (ಗದ್ಯ) (ರತ್ನಾಕರವರ್ಣಿ-ಮುದ್ದಣ-ಅನಾಮಿಕ ದತ್ತಿ), ಡಾ. ಶೈಲೇಶ್ ಕುಮಾರ್- ಸುಪ್ತ ಸಾಗರದಾಚೆ ( ಡಾ. ರಮಾನಂದ ಮತ್ತು ಶಾಂತಕುಮಾರಿ ದತ್ತಿ), ದೀಪಕ ಬಿಳ್ಳೂರ- ದೀಪಗಳು ಬೆಳಕಿನತ್ತ ಪಯಣ (ಪ್ರೊ.ಡಿ.ಸಿ. ಅನಂತಸ್ವಾಮಿ ದತ್ತಿ), ರವಿಕುಮಾರ್ ನೀಹ- ಅವು ಅಂಗೇ..! (ಅಮೃತ ಮಹೋತ್ಸವ ಸಾಹಿತ್ಯ ಸಮ್ಮೇಳನದ ಸವಿ ನೆನಪಿನ ದತ್ತಿ), ಈರಣ್ಣ ಬೆಂಗಾಲಿ- ಅಮರ ಚಿಂತನೆ (ಜಿ.ಆರ್. ರೇವಯ್ಯ ದತ್ತಿ), ಸುಕನ್ಯಾ ಕಳಸ- ಮಾರ್ಜಾಲ ಮೋಹಿನಿಯರು (ದಿ.ಡಿ.ಮಾಣಿಕರಾವ ಸ್ಮರಣಾರ್ಥ ಹಾಸ್ಯ ಸಾಹಿತ್ಯ ದತ್ತಿ), ನಳಿನಿ ಟಿ. ಭೀಮಪ್ಪ- ಐಸ್ ಪೈಸ್(ಕುಂಬಾಸ ಪ್ರಶಸ್ತಿ ದತ್ತಿ), ಡಾ. ಬಿ.ಆರ್. ಹಿರೇಮಠ- ಬುದ್ಧ ಬಸವ ಅಂಬೇಡ್ಕರ್ (ಗಂಗಮ್ಮ ಮತ್ತು ಟಿ. ಶಿವಣ್ಣ ದತ್ತಿ) ಕೃತಿಗಳು ಆಯ್ಕೆಯಾಗಿವೆ.

ವಸುದೇವ ಭೂಪಾಲಂ ದತ್ತಿ ಪ್ರಶಸ್ತಿಗೆ ಗುರುಪ್ರಸಾದ್ ಕಂಟಲಗೆರೆ- ಅಟ್ರಾಸಿಟಿ (ಕಾದಂಬರಿ), ಟಿ.ಎಂ. ರಮೇಶ- ಡೆಡ್ ಸ್ಟಾಕ್ (ಸಣ್ಣಕಥಾ ಸಂಕಲನ), ಎಸ್.ಎಸ್. ಸಾತಿಹಾಳ- ಅಜ್ಜಿಯ ಕೌದಿ (ಮಕ್ಕಳ ಸಾಹಿತ್ಯ ಕೃತಿ), ಡಾ.ಬಿ.ಸಿ. ನಾಗೇಂದ್ರ ಕುಮಾರ್- ಅನುಸಂಧಾನ (ವೈಚಾರಿಕ ಲೇಖನಗಳ ಕೃತಿ) ಕೃತಿ ಆಯ್ಕೆಯಾಗಿವೆ.

‘ಪಿ. ಶಾಂತಿಲಾಲ್ ದತ್ತಿ ಪ್ರಶಸ್ತಿ’ ಹಾಗೂ ‘ಅಸುಂಡಿ ಹುದ್ದಾರ್ ಕೃಷ್ಣರಾವ್ ದತ್ತಿ ಪ್ರಶಸ್ತಿ’ ಆಯ್ಕೆಗೆ ಯಾವುದೇ ಪುಸ್ತಕಗಳು ಬಂದಿಲ್ಲ. ಆದ್ದರಿಂದ ಎರಡೂ ಪ್ರಶಸ್ತಿಗಳನ್ನು ಆಯ್ಕೆಗೆ ಪರಿಗಣಿಸಿರುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ