ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಕಸಾಪ ಕಚೇರಿ ಕಸಾಪ ಜಿಲ್ಲಾ ಮತ್ತು ರಾಮನಗರ ತಾಲೂಕು ಘಟಕ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, 1915ರಲ್ಲಿ ಮೈಸೂರು ಮಹಾರಾಜರಿಂದ ಕನ್ನಡದ ಅಸ್ಮಿತೆಯಾದ ಕರ್ನಾಟಕ ಸಾಹಿತ್ಯ ಪರಿಷತ್ ಉದಯವಾಯಿತು ಎಂದರು.
ಎಚ್.ಬಿ. ನಂಜುಂಡಯ್ಯ ಪರಿಷತ್‌ನ ಮೊದಲ ಅಧ್ಯಕ್ಷರಾಗಿದ್ದರು. ಮೂರು ಬಾರಿ ಅವರು ಹುದ್ದೆ ಅಲಂಕರಿಸಿದ್ದರು. ಮಹಾರಾಜರ ನಿಕಟವರ್ತಿ ಕೂಡ ಆಗಿದ್ದ ಇವರ ಮಾತೃಭಾಷೆ ತೆಲುಗು, ಉಪಾಧ್ಯಕ್ಷರ ಮಾತೃಭಾಷೆ ತಮಿಳು, ಆದರೂ ಕನ್ನಡದ ರಥವನ್ನು ಎಳೆಯಲು ಈ ಮಹನೀಯರು ಶ್ರಮಿಸಿದರು. ಇಲ್ಲಿಯವರೆಗೂ 87 ಸಮ್ಮೇಳನಗಳು ನಡೆದಿವೆ. 1915 ರಿಂದ 1940 ರ ವರೆಗೆ ಪರಿಷತ್‌ಗೆ ಅವಿರೋಧವಾಗಿ ಆಯ್ಕೆ ನಡೆಯುತ್ತಿತ್ತು ಎಂದು ತಿಳಿಸಿದರು.ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ತು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಜಿ.ಎಚ್. ರಾಮಯ್ಯ, ನಾಡು- ನುಡಿ ಹೇಗೆ ಕಟ್ಟಬೇಕು ಎಂಬ ಆಲೋಚನೆಯೊಂದಿಗೆ ಪರಿಷತ್ ಸ್ಥಾಪನೆಯಾಗಿ ಜನಪದರು ಈ ನಾಡನ್ನು ಕಟ್ಟಿದರು ಎಂದು ಹೇಳಿದರು.
ಜಿಲ್ಲಾ ಲೇಖಕರ ವೇದಿಕೆ ಜಿಲ್ಲಾಧ್ಯಕ್ಷ ಕೂ.ಗಿ. ಗಿರಿಯಪ್ಪ ಮಾತನಾಡಿ, ನಾಡು-ನುಡಿ ಕುರಿತು ಅಭಿಮಾನ ಕಡಿಮೆಯಾಗುತ್ತಿದ್ದು, ಯುವಜನರಲ್ಲಿ ಕನ್ನಡ ಭಾಷೆಯ ಅಸ್ಮಿತೆ ಕುರಿತು ಅಭಿಮಾನ ಮೂಡಿಸುವ ಕೆಲಸ ಮಾಡಬೇಕಿದೆ. ಪಿಂಚಣಿ ಹಣದಲ್ಲಿ ಪರಿಷತ್ ನಲ್ಲಿ ದತ್ತಿ ನಿಧಿ ಸ್ಥಾಪಿಸಿದ್ದೇನೆ. ಪರಿಷತ್ತಿನ ಮಹತ್ವವನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಪರಿಷತ್ತಿನ ಆಜೀವ ಸದಸ್ಯರ ಸಂಖ್ಯೆ ಹತ್ತಿರ ಹತ್ತಿರ ನಾಲ್ಕು ಲಕ್ಷ ಇದ್ದು, 109 ವರ್ಷ ವರ್ಷಗಳಲ್ಲಿ ವಾಮನತ್ವದಿಂದ ಆರಂಭಗೊಂಡ ಹೆಗ್ಗಳಿಕೆ ಪರಿಷತ್‌ಗೆ ಇದೆ. ಕೇಂದ್ರ ಕಚೇರಿಯ ಜತೆಗೆ ಕರ್ನಾಟಕದ ಎಲ್ಲ ಜಿಲ್ಲಾ, ತಾಲೂಕು, ದೆಹಲಿ ಮತ್ತು ಐದು ನೆರೆಯ ರಾಜ್ಯಗಳಲ್ಲಿ ಅಧಿಕೃತ ಘಟಕಗಳನ್ನು ಹೊಂದಿರುವ ಅನನ್ಯ ಸಂಸ್ಥೆಯಿದು. ಕನ್ನಡದ ಕಂಪನ್ನು ರಾಜ್ಯದಲ್ಲಿ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿ ಹರಡಲು ಪರಿಷತ್ ಕಾರಣವಾಗಿದೆ. ರಾಜ್ಯ ಮತ್ತು ಜಿಲ್ಲೆಗಳಲ್ಲಿ ದತ್ತಿನಿಧಿ ಸ್ಥಾಪಿಸಿ, ನಿಧಿ ಮೂಲಕ ತಮ್ಮ ಹೆಸರು ಪರಿಷತ್ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿಯುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ ಜೊತೆಗೆ ರೈತರು, ಸೈನಿಕರು, ಅಂಗವಿಕಲರಿಗೆ ಸದಸ್ಯತ್ವ ನೀಡುವ ಕೆಲಸವನ್ನು ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಗೀತಗಾಯನವನ್ನು ಕೆಂಗಲ್ ವಿನಯಕುಮಾರ್, ಕೆ.ಎಚ್.ಕುಮಾರ್ ನಡೆಸಿಕೊಟ್ಟರು.