ದಾಂಡೇಲಿ: ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ದೊರೆತಿರುವುದು ನನ್ನ ಜೀವನದಲ್ಲಿ ದೊರೆತ ಮಹತ್ವದ ಭಾಗ್ಯ ಎಂದು ನಿವೃತ್ತ ಪ್ರಾಚಾರ್ಯ, ಪತ್ರಕರ್ತ ಯು.ಎಸ್. ಪಾಟೀಲ ತಿಳಿಸಿದರು.
ಫೆ. 28ರಂದು ಆಲೂರು ಗ್ರಾಮದಲ್ಲಿ ನಡೆಯುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅವರು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆ ಮನಗಳಲ್ಲಿ ಕನ್ನಡವನ್ನು ಸದೃಢಗಳಿಸಲು ಪರಿಣಾಮಕಾರಿಯಾಗಿ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಇಂತಹ ಮಹತ್ವದ ಗೌರವವನ್ನು ಒದಗಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಪದಾಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಯು.ಎಸ್. ಪಾಟೀಲ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ದಾಂಡೇಲಿಗೆ ಅವರು ನೀಡಿದ ಸೇವೆ ಸದಾ ಸ್ಮರಣೀಯ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಯು.ಎಸ್. ಪಾಟೀಲ ಮತ್ತು ಲತಾ ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ ಮತ್ತು ಪ್ರವೀಣ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಜಿಪಂ ಮಾಜಿ ಸದಸ್ಯ ವಾಮನ ಮಿರಾಶಿ, ಭೀಮಾಶಂಕರ ಅಜನಾಳ, ಸಂದೇಶ ಜೈನ, ತಾಲೂಕು ಘಟಕದ ಪದಾಧಿಕಾರಿಗಳು, ಸದಸ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.ರೈತರಿಗೆ ಕೃಷಿ ಯಂತ್ರೋಪಕರಣ ವಿತರಣೆಕುಮಟಾ: ತಾಲೂಕಿನ ಅರ್ಹ ಫಲಾನುಭವಿ ರೈತರಿಗೆ ಕೃಷಿ ಇಲಾಖೆಯ ಮೂಲಕ ಸಹಾಯಧನದ ಅಡಿಯಲ್ಲಿ ಮಂಜೂರಾದ ವಿವಿಧ ಬಗೆಯ ಕೃಷಿ ಯಂತ್ರೋಪಕರಣಗಳನ್ನು ಶಾಸಕ ದಿನಕರ ಕೆ. ಶೆಟ್ಟಿ ವಿತರಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಒಟ್ಟೂ ವಿತರಿಸಲಾದ ₹೧೨,೬೮,೨೦೦ ಮೌಲ್ಯದ ಯಂತ್ರೋಪಕರಣಗಳಿಗೆ ಸರ್ಕಾರದಿಂದ ₹೫,೭೨,೪೫೦ ಸಹಾಯಧನ ಮಂಜೂರಾತಿ ದೊರೆತಿದೆ. ಸರ್ಕಾರ ರೈತರಿಗಾಗಿ ಮತ್ತ ಕೃಷಿ ಅಭಿವೃದ್ಧಿಗಾಗಿ ನೀಡಿದ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಆದಾಯ ಗಳಿಸುವ ಜತೆಗೆ ಕೃಷಿ ಕಾರ್ಯ ಹೆಚ್ಚಿಸಬೇಕು. ಕೃಷಿ ಇಲಾಖೆಯಲ್ಲಿ ರೈತರಿಗೆ ಸಹಾಯಧನದ ಅಡಿಯಲ್ಲಿ ಅಗತ್ಯ ಯಂತ್ರೋಪಕರಣಗಳು ಲಭ್ಯವಿದ್ದು, ರೈತರು ಸನಿಹದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಸಾಮಾನ್ಯ ರೈತರಿಗೆ ೩ ಪವರ್ ಟಿಲ್ಲರ್, ೪ ಪವರ್ ವೀಡರ್, ಮೋಟೋ ಕಾರ್ಟ್, ಒಂದು ಪಂಪ್‌ಸೆಟ್ ನೀಡಿದರೆ ವಿಶೇಷ ಘಟಕದಡಿ ಪರಿಶಿಷ್ಟರಿಗೆ ೨ ಬ್ರಶ್ ಕಟರ್ ಹಾಗೂ ಒಂದು ಮೋಟೋ ಕಾರ್ಟ್ ವಿತರಿಸಲಾಯಿತು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ., ಕೃಷಿ ಅಧಿಕಾರಿ ಚಂದ್ರಕಲಾ ಎಸ್. ಬರ್ಗಿ, ಆತ್ಮ ಯೋಜನೆಯ ಸಿಬ್ಬಂದಿ ಮತ್ತು ಇಲಾಖೆಯ ಸಿಬ್ಬಂದಿ, ರೈತರು ಇದ್ದರು.