ಕನ್ನಡಪ್ರಭವಾರ್ತೆ ಮೂಲ್ಕಿ
ಕಟೀಲು ಬಿಲ್ಲವ ಸಮಾಜ ಸೇವಾ ಸಂಘದ ಬ್ರಹ್ಮ ಶ್ರೀ ನಾರಾಯಣಗುರುಗಳ ನೂತನ ಮಂದಿರದ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ ಹಾಗೂ ಕುಂಭಾಭಿಷೇಕವು ಬುಧವಾರ ಕೇರಳ ಶಿವಗಿರಿ ಮಠದ ಮನೋಜ್ ತಂತ್ರಿ ಉಪಸ್ಥಿತಿಯಲ್ಲಿ, ಹೆಜಮಾಡಿ ಮಹೇಶ ಶಾಂತಿ ಪೌರೋಹಿತ್ಯದಲ್ಲಿ ನಡೆಯಿತು.ಬೆಳಗ್ಗೆ ಪುಣ್ಯಾಹ, ಗಣಹೋಮ ಭಗವತೀ ಸೇವೆ, ನವಕ ಪ್ರಧಾನ, ಕುಂಭಾಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ಗೆ ಥಂಡರ್ ಗೈಸ್ ಬಜಪೆ ತಂಡದಿಂದ ಕ್ಷೇತ್ರ ಪುರಾಣ ಮಂಜರಿ ನೃತ್ಯ ಸಂಗಮ ಕಾರ್ಯಕ್ರಮ ನಡೆಯಿತು.
ಕಟೀಲು ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಗೌರವಾಧ್ಯಕ್ಷ ಈಶ್ವರ್ ಕಟೀಲು, ನೀಲಯ್ಯ ಕೋಟ್ಯಾನ್, ಕಟೀಲು, ತಿಮ್ಮಪ್ಪ ಕೋಟ್ಯಾನ್ ಕಟೀಲು, ಲೋಕಯ್ಯ ಸಾಲ್ಯಾನ್ ಕೊಂಡೇಲ, ಅರುಣ್ ಕುಮಾರ್, ಶೇಖರ ಅಮೀನ್ , ಶರಣ್ ಕುಮಾರ್ ಕಟೀಲು, ಉದಯ ಕುಮಾರ್, ಕೇಶವ, ನವೀನ್ ಕುಮಾರ್ ಕಟೀಲು, ಮಂಜುನಾಥ ಪೂಜಾರಿ ಮಲ್ಲಿಗೆಯಂಗಡಿ ಮತ್ತಿತರರಿದ್ದರು. ಸಭಾ ಕಾರ್ಯಕ್ರಮ: ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವದೊಂದಿಗೆ ಸಮಾಜಮುಖಿಯಾಗೆ ಬದುಕ ಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ನೂತನ ಮಂದಿರದ ಲೋಕಾರ್ಪಣೆ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ಸಮಾಜ, ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಕುದ್ರೋಳಿ ದೇಗುಲ ಸಮಿತಿಯ ಅಧ್ಯಕ್ಷ ಎಚ್. ಸಾಯಿರಾಂ, ಮಿತ್ತಬೈಲು ಶೇಖರ ಪೂಜಾರಿ, ಪಕ್ಷಿಕೆರೆ ಶೀನ ಸ್ವಾಮಿ, ಮಾಜಿ ಸಚಿವ ಅಭಯಚಂದ್ರ ಜೈನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಉದ್ಯಮಿ ಗಿರೀಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೀತಾಂಜಲಿ ಸುವರ್ಣ, ಕಸ್ತೂರಿ ಪಂಜ, ಕುಶಲ ಪೂಜಾರಿ, ಗೋಪಾಲ್ ಪೂಜಾರಿ ಗುತ್ತಕಾಡು, ಅರುಣ್ ಕುಮಾರ್, ಕಟೀಲು ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಉದಯ ಪೂಜಾರಿ, ತಿಮ್ಮಪ್ಪ ಕೋಟ್ಯಾನ್, ಸಮಿತಿಯ ಗೌರವಾಧ್ಯಕ್ಷ ಈಶ್ವರ ಕಟೀಲು, ನೀಲಯ್ಯ ಕೋಟ್ಯಾನ್, ಸೀತಾರಾಮ್ ಮಂಗಳೂರು, ಸಮಿತಿಯ ಲೋಕಯ್ಯ ಸಾಲ್ಯಾನ್ ಮತ್ತಿತರರಿದ್ದರು.ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ದಯಾನಂದ ಕಟೀಲು ಸ್ವಾಗತಿಸಿದರು. ರಾಜೇಂದ್ರ ಎಕ್ಕಾರು ನಿರೂಪಿಸಿದರು.