ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವವು ಅ.3ರಿಂದ 13ರ ವರೆಗೆ ನಡೆಯಲಿದೆ. ನವರಾತ್ರಿ ಸಂದರ್ಭ ಪ್ರತಿದಿನ ಬೆಳಗ್ಗೆ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ 5 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 7ರಿಂದ ದಶಾವತಾರ ಕಥೆಯನ್ನಾಧರಿಸಿದ ಯಕ್ಷಗಾನ ಬಯಲಾಟಗಳು ನಡೆಯಲಿವೆ.
----ನಾಳೆಯಿಂದ ಮೂಲ್ಕಿಯ ವಿವಿಧೆಡೆ ನವರಾತ್ರಿ ಉತ್ಸವಮೂಲ್ಕಿ: ಪಡುಪಣಂಬೂರು ಸಮೀಪದ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಅ.3ರಿಂದ 12 ರ ವರೆಗೆ ನವರಾತ್ರಿ ಮಹೋತ್ಸವವು ವಿಶೇಷ ಪೂಜಾ ಸಮಾರಂಭಗಳೊಂದಿಗೆ ಜರುಗಲಿದೆ. 12ರಂದು ಮಹಾನವಮಿಯಂದು ಬೆಳಗ್ಗೆ 9ರಿಂದ ಚಂಡಿಕಾಯಾಗ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 10 ಗಂಟೆಗೆ ಶ್ರೀ ವೀರಭದ್ರ ಮಹಾಗಣಪತಿ ಸನ್ನಿಧಿಯಲ್ಲಿ ಮಹಾಪೂಜೆ ನಡೆಯಲಿದೆ. 13ರಂದು ಭಾನುವಾರ ವಿಜಯದಶಮಿಯಂದು ವಾಚಾನಾಲಯದ ಸದಸ್ಯರು ಹಾಗೂ ಯಕ್ಷನಾಟ್ಯ ತರಗತಿಯ ಮಕ್ಕಳಿಂದ ಹಿರಣ್ಯಾಕ್ಷ ವಧೆ- ಕುಂಭಕರ್ಣ ಕಾಳಗ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.ಕುಜಿಂಗಿರಿ ರಕ್ತೇಶ್ವರಿ ದೈವಸ್ಥಾನ ನವಾರಾತ್ರಿ: ತಾಳಿಪಾಡಿ ಪುನರೂರು ಕುಜಿಂಗಿರಿ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ ಅಂಗವಾಗಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಕಿನ್ನಿಗೋಳಿ ಸಮೀಪದ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಖೀಲಾಂಡೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ನಡೆಯಲಿದ್ದು, ಪ್ರತಿ ದಿನ ಸಂಜೆ ೬ ರಿಂದ ಭಜನೆ, ದುರ್ಗಾನಮಸ್ಕಾರ ಪೂಜೆ, ಹೂವಿನ ಪೂಜೆ, ನವರಾತ್ರಿ ಪೂಜೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕೊಜಪಾಡಿಬಾಳಿಕೆ ತಿಳಿಸಿದ್ದಾರೆ.