ಪಾಂಬೂರು ಪರಿಚಯ - ನೂತನ ರಂಗಮಂಟಪಕ್ಕೆ ಶಿಲಾನ್ಯಾಸ

KannadaprabhaNewsNetwork |  
Published : Jul 16, 2026, 03:30 AM IST
14ರಂಗಮಂಟಪ | Kannada Prabha

ಸಾರಾಂಶ

ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟಕಲ್ಲು ಸಮೀಪದ ಪಾಂಬೂರಿನಲ್ಲಿರುವ ಪರಿಚಯ ಪ್ರತಿಷ್ಠಾನದ ಕನಸಿನ ಯೋಜನೆಯಾದ ನೂತನ ರಂಗ ಮಂದಿರದ ಶಿಲಾನ್ಯಾಸ ಭಾನುವಾರ ಜರುಗಿತು.

ಕಾಪು: ಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟಕಲ್ಲು ಸಮೀಪದ ಪಾಂಬೂರಿನಲ್ಲಿರುವ ಪರಿಚಯ ಪ್ರತಿಷ್ಠಾನದ ಕನಸಿನ ಯೋಜನೆಯಾದ ನೂತನ ರಂಗ ಮಂದಿರದ ಶಿಲಾನ್ಯಾಸ ಭಾನುವಾರ ಜರುಗಿತು.ಪಾಂಬೂರು ಚರ್ಚ್‌ನ ಧರ್ಮಗುರು ಫಾ. ರೋಶನ್ ಡಿಸೋಜ ಹಾಗೂ ಖ್ಯಾತ ನಾಟಕಕಾರ ಮತ್ತು ರಂಗಕರ್ಮಿ ಫಾ. ಆಲ್ವಿನ್ ಸೆರಾವೋ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ಪ್ರವರ್ತಕ ಮೇರಿ ನೊರೋನ್ಹಾ ಶಿಲಾನ್ಯಾಸ ನೆರವೇರಿಸಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿನ್ಸೆಂಟ್ ಆಳ್ವಾ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ರೂಪುರೇಷೆಗಳನ್ನು ಹಾಗೂ ಸ್ಥೂಲ ನೋಟವನ್ನು ನೀಡಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ವಂದಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಸದಸ್ಯ ನವೀನ್ ಲೋಬೊ ಬಜಾಲ್, ತುಳು ಅಕಾಡೆಮಿ ಸದಸ್ಯ ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ಹಿರಿಯಡ್ಕ, ಹಿರಿಯ ಸಾಹಿತಿಗಳಾದ ಡಾ. ಎವ್ಜಿನ್ ಡಿಸೋಜ, ಅನಿಲ್ ಪೆರ್ನಾಲ್, ರಂಗಕರ್ಮಿಗಳಾದ ಕ್ರಿಸ್ಟೋಪರ್ ಡಿಸೋಜ ನೀನಾಸಂ, ರಾಜು ಮಣಿಪಾಲ, ನೆಲ್ಲು ಪೆರ್ಮನ್ನೂರು, ಪರಿಚಯದ ಟ್ರಸ್ಟಿಗಳು, ಅಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿ-ಪಿಕ್ಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ