ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಕೋಟೆಬೀದಿಯ ಗಂಗಾಧರೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜನುಮ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ರಾಜ್ಯದ ನೆಲ, ಜಲ ಹಾಗೂ ರೈತ ಪರ ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದಿದ್ದಾರೆ ಎಂದರು.
ಎಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲಿಯೂ ರಾಜ್ಯ ಸಭೆಯಲ್ಲಿ ರಾಜ್ಯದ ಅನೇಕ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ನಮ್ಮ ನಾಡು ಮತ್ತು ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಹೆಚ್ಚಿನ ಆರೋಗ್ಯ, ಆಯಸ್ಸು ದೊರೆಯಲಿ ಎಂದರು.ಜೆಡಿಎಸ್ ಅನ್ನು ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಪಕ್ಷವನ್ನು ಸದೃಢಗೊಳಿಸುತ್ತಿದ್ದಾರೆ. ಅವರಿಗೆ ಎಲ್ಲೆಡೆ ಯುವಪಡೆ ಉತ್ತಮ ಬೆಂಬಲ ನೀಡುತ್ತಿದೆ ಎಂದರು.
ಇಂದು ಯುವ ಮನಸ್ಸುಗಳಿಗೆ ಗಾಂಧಿ ವಿಚಾರ ಮಂಥನ
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೋಡೇ ಪಿ.ಕೃಷ್ಣ ಅವರು ಸಮಾರಂಭ ಉದ್ಘಾಟಿಸುವರು. ಕೃಷಿ ವಿವಿ ಡೀನ್ ಡಾ.ಪಿ.ಎಸ್.ಫಾತೀಮಾ ಅಧ್ಯಕ್ಷತೆ ವಹಿಸುವರು. ಯಾಕಾಗಿ ಗಾಂಧಿ?, ಕುರಿತು ಕವಿ ಕೆ.ಪಿ.ಮೃತ್ಯುಂಜಯ ಉಪನ್ಯಾಸ ನೀಡುವರು.ಯುವಜನತೆ ಮತ್ತು ಗಾಂಧಿ ಕುರಿತು ಅಕ್ಕಮಹಾದೇವಿ ವಿವಿ ವಿಶೇಷ ಅಧಿಕಾರಿ ಡಾ.ವಿಷ್ಣು ಎಂ.ಶಿಂಧೆ ಅವರು ಉಪನ್ಯಾಸ ನೀಡುವರು. ಕೃಷಿ ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ, ಡಾ.ಪಿ.ಪ್ರವೀಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಪ್ರೊ.ಕೆ.ನಾಗಾನಂದ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.