ಕನ್ನಡಪ್ರಭ ವಾರ್ತೆ ಮಂಡ್ಯ
ಕಾರ್ಯಕ್ರಮದಲ್ಲಿ ಆಯೋಜನೆಗೊಂಡಿದ್ದ ವಿಭಿನ್ನ ಮಾದರಿಯ ತಿಂಡಿ-ತಿನಿಸುಗಳ ಆಹಾರ ಮೇಳ ಜನರನ್ನು ಬಹುವಾಗಿ ಸೆಳೆಯಿತು. ಹಾಡು, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದವು. ಮಕ್ಕಳ ರಂಜನೆಗೆ ಪೂರಕವಾದ ಆಟಗಳು ಮಕ್ಕಳ ಮನರಂಜಿಸಿದವು.
ಮಕ್ಕಳಿಂದ ದೊಡ್ಡವರೆಗೂ ಇಷ್ಟವಾಗುವ ಅಪರೂಪದ ತಿಂಡಿ-ತಿನಿಸುಗಳನ್ನು ತಿನ್ನುತ್ತಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಮಜವಾಗಿ ಕಾಲ ಕಳೆದರು. ಕುಟುಂಬದವರು, ಸ್ನೇಹಿತರೊಂದಿಗೆ ಮಂಡ್ಯ ಸಂಭ್ರಮಕ್ಕೆ ಆಗಮಿಸಿದ್ದವರು ಜಾಲಿ ಮೂಡ್‌ನಲ್ಲಿದ್ದರು. ತಮಗಿಷ್ಟವೆನಿಸಿದ ಫ್ಯಾಷನ್ ಬಟ್ಟೆಗಳ ಖರೀದಿಗೂ ಯುವತಿಯರು ಸಮಯವನ್ನು ಮೀಸಲಿಟ್ಟಿದ್ದರು. ಸಂಜೆಯ ತಣ್ಣನೆಯ ವಾತಾವರಣದೊಳಗೆ ಬೋಂಡಾ, ಬಜ್ಜಿ, ಪಾವ್‌ಬಜ್ಜಿ, ಪಾನಿಪೂರಿ, ಗಿರ್‌ಮಿಟ್, ವಿವಿಧ ಕಂಪನಿಗಳ ಪುಳಿಯೋಗರೆ, ಮಸಾಲೆ ಉತ್ಪನ್ನಗಳು, ನಿಂಬುಸೋಡಾ, ಚಾಕೋಲೇಟ್, ವಿವಿಧ ಮಾದರಿಯ ಹಲ್ವಾಗಳು, ಪಾಪಡ್‌ಗಳ ರುಚಿಯನ್ನು ಸವಿಯುತ್ತಲೇ ಸಂತಸಪಟ್ಟರು.ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ, ಮಹಿಳೆಯರಿಗೆ ಅಡುಗೆ ಮಹಾರಾಣಿ, ಓಪನ್ ಸ್‌ಟೇಜ್, ರಂಗೋಲಿ ಸ್ಪರ್ಧೆ, ಮಿನಿಟ್ ಟು ವಿನ್ ಇಟ್ ಗೇಮ್ಸಸ್, ಕಿಡ್ಸ್, ಫ್ಯಾಮಿಲಿ ಫ್ಯಾಷನ್ ಷೋ ಸ್ಪರ್ಧೆಗಳು ಎಲ್ಲರ ಗಮನಸೆಳೆದವು. ಡ್ಯೂಯಲ್ ವಾಯ್ಸ್ ಸಿಂಗರ್ ಮಂಜುಹಾನ್‌ರವರಿಂದ ಸಂಗೀತ ಸಂಜೆ, ದಚ್ಚು ದಿವು ಇನ್ಸ್‌ಸ್ಟಾಗ್ರಾಮ್ ಸೆನ್ಸೆಷನ್, ಮಂಡ್ಯ ಪ್‌ರತಿಭೆಗಳಿಂದ ಮೂಡಿಬಂದ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಮಾಡಿತು..
ಕನ್ನಡಪ್ರಭ ವಾರ್ತೆ, ಮಂಡ್ಯ
ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದೊಂದಿಗೆ ಆಯೋಜಿಸಿದ್ದ ಮಂಡ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಲ್ವಡಿ ಅವರ ಸಾಧನೆಗಳಲ್ಲಿ ಶೇ.೫ರಷ್ಟು ಸಾಧನೆಗಳನ್ನು ಮಾಡುವುದಕ್ಕೆ ಸರ್ಕಾರಗಳಿಂದ ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ. ರಾಜಕಾರಣ ಹೊಲಸೆದ್ದು ಹಾಳಾಗಿಹೋಗಿದೆ. ಜನರು ರಾಜಕಾರಣಿಗಳ ಬಗ್ಗೆ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ ಎಂದು ಬೇಸರದಿಂದ ನುಡಿದರು.
ನಾಲ್ವಡಿ ಅವರ ಕಾಲದಲ್ಲಿ ಸಣ್ಣ ಪ್ರಮಾಣದ ಬಜೆಟ್ ಇಟ್ಟುಕೊಂಡು ವಿಶ್ವವೇ ನಿಬ್ಬೆರಗಾಗುವ ಅಸಾಧಾರಣ ಕೊಡುಗೆಗಳನ್ನು ನೀಡಿದರು. ಇವತ್ತ ಲಕ್ಷ ಲಕ್ಷ ಕೋಟಿಗಳ ಬಜೆಟ್ ಮಂಡನೆಯಾಗುತ್ತಿದ್ದರೂ ಶೇ.೩೦ರಷ್ಟು ಅಭಿವೃದ್ಧಿಯೂ ಆಗುತ್ತಿಲ್ಲ. ರಾಜ್ಯದಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ಕಂಡಂತಹ ಮಹೋನ್ನತ ಕೊಡುಗೆಗಳನ್ನು ಬಿಟ್ಟರೆ ಮಹತ್ವದ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಅಂಬರೀಶ್ ರಾಮನಗರದಲ್ಲಿ ಸ್ಪರ್ಧಿಸಿದ್ದಾಗ ಮತ್ತು ಮಂಡ್ಯದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದಾಗ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವರು ಎರಡನೇ ಬಾರಿ ಗೆದ್ದಾಗ ನಾನು ಚಿತ್ರದುರ್ಗದಿಂದ ಸಂಸತ್ ಪ್ರವೇಶಿಸಿದ್ದೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಲಿಲ್ಲವೆಂದು ಹೇಳಿದರು.
ಕಾವೇರಿ ಉತ್ಸವದ ಅಧ್ಯಕ್ಷತೆಯನ್ನು ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ಡಾ.ಟಿ.ತಿಮ್ಮೇಗೌಡ ವಹಿಸಿದ್ದರು. ನಟ ಆದಿತ್ಯ ಶಶಿಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್, ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ, ತಗ್ಗಹಳ್ಳಿ ವೆಂಕಟೇಶ್, ಎಚ್.ಎನ್.ಯೋಗೇಶ್ ಇತರರಿದ್ದರು.