ಕನ್ನಡಪ್ರಭ ವಾರ್ತೆ ತಲಕಾಡು
ತಹಸೀಲ್ದಾರ್ ಸೇತುವೆ ಬಳಿ ಆಗಮಿಸಿಪ್ರಮುಖ ಪ್ರವಾಹದ ವಾಸ್ತವ ಸ್ಥಿತಿ ಪರಿಶೀಲಿಸಿದರು. ಭಾನುವಾರ ರಜಾ ದಿನವಾದ್ದರಿಂದ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ತಲಕಾಡಿಗೆ ಆಗಮಿಸಿದ್ದರು. ಹೆಮ್ಮಿಗೆ ಸೇತುವೆಬಂದ್ ಸೇರಿದಂತೆ ನದಿಪಾತ್ರದ ಪ್ರವಾಸಿ ತಾಣಗಳ ಬಳಿ ತೆರಳದಂತೆ ನಿರ್ಬಂಧಿಸಿದ್ದರಿಂದ ನಿರಾಸೆಯಿಂದ ಹಿಂದಿರುಗಿದರು.
ಸೇತುವೆ ಮೇಲೆ ಜನಪ್ರವಾಹಹೆಮ್ಮಿಗೆ ಸೇತುವೆ ಮೇಲಿನಸಂಚಾರ ಸ್ಥಗಿತಗೊಂಡಿದ್ದರಿಂದ ಸಮೀಪದ ಕಾವೇರಿಪುರ ನೂತನಸೇತುವೆ ಮೇಲೆ ವಾಹನ ಸಂಚಾರ ದಟ್ಟಣೆ ಇತ್ತು. ಅಲ್ಲದೆ ಸೇತುವೆ ಮೇಲಿಂದ ಪ್ರವಾಹದ ಸೊಬಗು, ಸೆಲ್ಪಿ ಕ್ಲಿಕ್ಕಿಸಿಕೊಳ್ಳಲುಸಮೀಪದ ಕೊಳ್ಳೇಗಾಲ ಪಟ್ಟಣದಿಂದ ಪ್ರವಾಸಿಗರ ದಂಡೇ ಆಗಮಿಸಿತ್ತು.
ಶಿವನಸಮುದ್ರ ಸೇತುವೆ ಜಾಮ್
ಶಿವನಸಮುದ್ರ ಸೇತುವೆ ಮೇಲೆ ಭಾನುವಾರ ಮಧ್ಯಾಹ್ನದ ನಂತರ ಪ್ರವಾಸಿ ವಾಹನಗಳ ದಟ್ಟಣೆಯಿಂದ ಗಂಟೆಗಳ ಕಾಲ ಸೇತುವೆ ಮೇಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಲ್ಲಿನ ಸೇತುವೆಯಿಂದ ಸತ್ತೇಗಾಲ ಗ್ರಾಮದವರೆಗೂ ಎರಡರಿಂದ ಮೂರು ಕಿಮೀ ದೂರದವರೆಗೂ ಸೇತುವೆ ದಾಟಲು ವಾಹನಗಳು ಹರ ಸಾಹಸ ಪಟ್ಟವು.