ರಾಮನಗರ: ಕಾಯಕ ನಿಷ್ಠೆ ಹನ್ನೆರಡನೇ ಶತಮಾನದ ಶರಣರ ವೈಚಾರಿಕ ಪ್ರಪಂಚದ ವಿಶಿಷ್ಟ ಕಾಣಿಕೆ. ಅವರು ಕಂಡುಕೊಂಡಿರುವ ಆದರ್ಶ ಮತ್ತು ಅರ್ಥವ್ಯಾಪ್ತಿ ಇಡೀ ವಿಶ್ವವನ್ನೇ ಒಳಗೊಂಡಂತಹುದು. ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ಕೆಲಸವನ್ನು ಮಾಡುತ್ತಲೇ ಇರಬೇಕು ಎಂದು ರಂಗ ನಿರ್ದೇಶಕ ಡಾ. ಎಂ.ಬೈರೇಗೌಡ ಹೇಳಿದರು.
ಶರಣರು ಎಲ್ಲರಿಗೂ ಉದ್ಧಾರದ ಮಾರ್ಗಗಳನ್ನು ತೋರಿಸಬಲ್ಲ ಪೂರ್ಣದೃಷ್ಟಿಯ ಆದರ್ಶ ಸಮಾಜದ ಚಿತ್ರವನ್ನು ಕಂಡವರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಅದನ್ನು ನಿರ್ವಹಿಸುವ ಮನೋಧರ್ಮದಲ್ಲಿದೆ. ಎಲ್ಲ ರೀತಿಯ ಉದ್ಯೋಗಗಳಿಂದ ಸಮಾಜ ಸ್ವಯಂಪೂರ್ಣವಾಗಬೇಕು. ಸಮೃದ್ಧವಾಗಬೇಕು ಎಂದರು.
ವ್ಯಕ್ತಿ ಎಲ್ಲಿಯೇ ಇರಲಿ ಬಡವ ಬಲ್ಲಿಗನೆಂಬ ಬೇಧವಿಲ್ಲದೆ, ಸ್ತ್ರೀ ಪುರುಷರೆಂಬ ತಾರತಮ್ಯವಿಲ್ಲದೆ ಎಲ್ಲರೂ ಜೀನವದ ಗುರಿಯನ್ನು ತಮ್ಮದೇ ಮಾರ್ಗದಲ್ಲಿ ಸಾಧಿಸುವ ಸಮಾಜ ಸರ್ವ ಸಮಾನತೆಯನ್ನು ಸಾಧಿಸುತ್ತದೆ ಎಂಬುದನ್ನು ಶರಣರು ತಮ್ಮ ಕಾಯಕನಿಷ್ಠೆಯನ್ನು ಮೆರೆಯುತ್ತಲೇ ಇಡೀ ವಿಶ್ವಕ್ಕೆ ಸಾರಿದರು ಮತ್ತು ಅದನ್ನು ಸಾಧಿಸಿ ತೋರಿಸಿದರು ಎಂದು ಹೇಳಿದರು.ಕಾಯಕ ಎಂಬುದು ಕಾಯಾ ವಾಚಾ ಮನಸಾ ದೇಹವನ್ನು ದಂಡಿಸಿದಾಗ ದೊರೆಯುವ ಆನಂದವಾಗಿದೆ. ಯಾವುದೇ ಕಾಯಕ ಮೇಲಲ್ಲ ಯಾವುದೇ ಕಾಯಕ ಕೀಳಲ್ಲ ಎಂಬ ಮನೋದಾರ್ಢ್ಯತೆಯೊಂದಿಗೆ ಕಾಯಕ ನಿಷ್ಠರಾಗಿ ದೇಹವನ್ನು ದಂಡಿಸಿ, ದೇವನನ್ನು ಕಾಣುವ ಈ ಬಗೆಯ ಅನೇಕ ಕಾಯಕ ಸಂಸ್ಕೃತಿಯ ರಾಯಭಾರಿಗಳಂತಿರುವ ಶಿವಶರಣರನ್ನು ಹನ್ನೆರಡನೇ ಶತಮಾನದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗಾಣಕಲ್ ನಟರಾಜ್, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ದೀಪಕ್ ಕುಮಾರ್ ಮಾತನಾಡಿದರು.
11ಕೆಆರ್ ಎಂಎನ್ 1.ಜೆಪಿಜಿ