ಕಾಯಕ, ದಾಸೋಹ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ: ಡಾ.ಮಲ್ಲಿಕಾರ್ಜುನಪ್ಪ

KannadaprabhaNewsNetwork |  
Published : Sep 02, 2024, 02:03 AM ISTUpdated : Sep 02, 2024, 02:04 AM IST
ಕ್ಯಾಪ್ಷನಃ30ಕೆಡಿವಿಜಿ34ಃದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಜೆ.ಕೆ.ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿದರು. | Kannada Prabha

ಸಾರಾಂಶ

12ನೇ ಶತಮಾನದ ಬಸವಾದಿ ಶರಣರು ಕಟ್ಟಿದ ಕಾಯಕ ಪ್ರಸಾದ ದಾಸೋಹ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಎ.ಆರ್.ಜಿ. ಕಾಲೇಜಿನ ನಿವೃತ್ತ ಉಪನ್ಯಾಸಕ ಶರಣ ಡಾ. ಜೆ.ಕೆ. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟಿದ್ದಾರೆ.

- ಶಸಾಪ ಸಂಸ್ಥಾಪಕರ ದಿನಾಚರಣೆ-ದತ್ತಿ ಉಪನ್ಯಾಸ ಕಾರ್ಯಕ್ರಮ- - - ದಾವಣಗೆರೆ: 12ನೇ ಶತಮಾನದ ಬಸವಾದಿ ಶರಣರು ಕಟ್ಟಿದ ಕಾಯಕ ಪ್ರಸಾದ ದಾಸೋಹ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಎ.ಆರ್.ಜಿ. ಕಾಲೇಜಿನ ನಿವೃತ್ತ ಉಪನ್ಯಾಸಕ ಶರಣ ಡಾ. ಜೆ.ಕೆ. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.

ನಗರದ ಡಿಆರ್‌ಎಂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಶರಣರ ಜೀವನ ದೃಷ್ಠಿ " ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಕಾಯಕ ತತ್ವದಿಂದ ಕಾಯ ವಾಚ ಆರೋಗ್ಯವಾಗಿರುತ್ತದೆ. ಪ್ರಸಾದ ತತ್ವದಿಂದ ಮನುಷ್ಯ ತೃಪ್ತಿಯಾಗಿರುತ್ತಾನೆ ಮತ್ತು ದಾಸೋಹ ಭಾವದಿಂದ ಸಮಾಜದಲ್ಲಿ ಸ್ವಾರ್ಥ ಕಡಿಮೆಯಾಗಿ ಸಮಾಜದ ಆರೋಗ್ಯ ಸುಧಾರಿಸುತ್ತದೆ. ಈ ಮೌಲ್ಯಗಳನ್ನು 21ನೇ ಶತಮಾನದ ನಾವುಗಳು ಅಳವಡಿಸಿಕೊಂಡಲ್ಲಿ ಈ ಶತಮಾನದ ಪಿಡುಗುಗಳಾದ ಬಡತನ ಭ್ರಷ್ಟಾಚಾರ ಮಹಿಳಾ ದೌರ್ಜನ್ಯ ಮುಂತಾದವುಗಳಿಗೆ ಮುಕ್ತಿ ಕಾಣಿಸಬಹುದು ಎಂದರು.

ಗಾಯತ್ರಿ ವಸ್ತ್ರದ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಜೆ.ಶಿವಪ್ಪ, ಶಸಾಪ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು, ಇತರರು ಭಾಗವಹಿಸಿದ್ದರು.

ದತ್ತಿ ದಾನಿ ಬಸವ ಬಳಗದ ಶರಣ ವಿಭೂತಿ ಬಸವಾನಂದರು ಮಕ್ಕಳಿಗೆ ಹಿತವಚನ ನೀಡಿದರು. ಬಿ.ಟಿ.ಪ್ರಕಾಶ್ ಪ್ರಾರ್ಥಿಸಿದರು. ಡಾ. ಪಿ.ಜಿ. ರುದ್ರೇಶ್ ಸ್ವಾಗತ ಕೋರಿದರು. ಭರ್ಮಪ್ಪ ಮೈಸೂರು ಕಾರ್ಯಕ್ರಮ ನಿರೂಪಿಸಿ, ಆರ್.ಸಿದ್ದೇಶಪ್ಪ ವಂದಿಸಿದರು.

- - - -30ಕೆಡಿವಿಜಿ34ಃ:

ದಾವಣಗೆರೆಯ ಡಿಆರ್‌ಎಂ ಕಾಲೇಜಿನಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಡಾ. ಜೆ.ಕೆ. ಮಲ್ಲಿಕಾರ್ಜುನಪ್ಪ ಉಪನ್ಯಾಸ ನೀಡಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?