ಕಾಯಕ ಉದ್ಯೋಗವಲ್ಲ ದೈವಿಕ ಸೇವೆ: ಇಂಡಿ

KannadaprabhaNewsNetwork |  
Published : Feb 11, 2026, 02:45 AM IST
ಪೋಟೊಕನಕಗಿರಿಯ ತಹಶೀಲ್ ಕಚೇರಿಯಲ್ಲಿ ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು.   | Kannada Prabha

ಸಾರಾಂಶ

ಶರಣರು ನಿಸ್ವಾರ್ಥ ಮನೋಭಾವದಿಂದ,ಸಾಮಾಜಿಕ ಜವಾಬ್ದಾರಿಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದರು.

ಕನಕಗಿರಿ: ಕಾಯಕ ಎಂದರೆ ಕೇವಲ ಉದ್ಯೋಗವಲ್ಲ, ಅದು ದೈವಿಕ ಸೇವೆ ಎಂಬುದಾಗಿ ಸಾರಿದ ಕಾಯಕ ಶರಣರ ತತ್ವದಂತೆ ನಾವೆಲ್ಲರೂ ಬದುಕಬೇಕು ಎಂದು ಶಿರಸ್ತೇದಾರ ಇಂಡಿ ಹೇಳಿದರು.

ಅವರು ಇಲ್ಲಿನ ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂಗಳವಾರ ಮಾತನಾಡಿದರು.

ಕಾಯಕವೇ ಕೈಲಾಸ ಎಂಬ ತತ್ವದಡಿ,ಶರಣರು ನಿಸ್ವಾರ್ಥ ಮನೋಭಾವದಿಂದ,ಸಾಮಾಜಿಕ ಜವಾಬ್ದಾರಿಯೊಂದಿಗೆ ಪ್ರತಿಯೊಬ್ಬರೂ ತಮ್ಮ ಕೆಲಸ ಮಾಡಬೇಕೆಂದು ಪ್ರತಿಪಾದಿಸಿದರು. ಬಸವಣ್ಣನವರು ಕಾಯಕ ಅತ್ಯುನ್ನತ ಸ್ಥಾನಕ್ಕೇರಿಸಿ ಶ್ರಮ ಸಂಸ್ಕೃತಿ ಸಮಾಜದಲ್ಲಿ ಬಿತ್ತಿದ್ದಾರೆ.ಇಂತಹ ಶರಣರ ವಿಚಾರಗಳು ಎಂದಿಗೂ ಪ್ರಸ್ತುತವಾಗಿದ್ದು, ಇವರ ಆದರ್ಶ ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದರು.

ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ರವೀಶ ಹಿರೇಮಠ, ಅಮರೇಶ, ವಿಜಯಕುಮಾರ, ಸಾಧಿಕಾಭಾನು, ಶಿವಕುಮಾರ ಮ್ಯಾಗೇರಿ, ವಾಸುದೇವ, ವೆಂಕೋಬ, ಬಸವರಾಜ ಮೇಟಿ, ಗಣೇಶ, ವಿಜಯಭಾಸ್ಕರ ರೆಡ್ಡಿ, ಪ್ರಗತಿಪರ ಸಂಘಟನೆಯ ಪಾಮಣ್ಣ ಅರಳಿಗನೂರು ಸೇರಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕೆ ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ಡಾ. ಅನ್ನದಾನಿ ಮೇಟಿ
ಮುರ್ಕವಾಡ ಗ್ರಾಮದೇವಿ ಜಾತ್ರೆ: ವೈಭವದ ಹೊನ್ನಾಟ ಸಂಪನ್ನ