ರಾಜ್ಯದಲ್ಲೇ ಅತಿ ಹೆಚ್ಚು ಠೇವಣಿ ಹೊಂದಿರುವ ಕೆಡಿಸಿಸಿ ಬ್ಯಾಂಕು: ಸಚಿವ ಮಂಕಾಳ ವೈದ್ಯ

KannadaprabhaNewsNetwork |  
Published : Feb 02, 2025, 11:49 PM IST
ಭಟ್ಕಳದ ಕೆಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಕೆನರಾ ಡಿಸಿಸಿ ಬ್ಯಾಂಕಿನಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಎಲ್.ಡಿ. ಶಿರೂರು ಮತ್ತು ಎಂ.ಎ. ಶೇಖ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಗೌರವಿಸಿದರು. | Kannada Prabha

ಸಾರಾಂಶ

ಕೆನರಾ ಡಿಸಿಸಿ ಬ್ಯಾಂಕಿಗೆ ರಾಜ್ಯದಲ್ಲಿ ಉತ್ತಮ ಹೆಸರು ಇದ್ದು, ರಾಜ್ಯದ ಡಿಸಿಸಿ ಬ್ಯಾಂಕುಗಳ ಪೈಕಿ ಅತಿ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕು ಇದಾಗಿದೆ.

ಭಟ್ಕಳ: ಕೆನರಾ ಡಿಸಿಸಿ ಬ್ಯಾಂಕಿನಲ್ಲಿ ಕಳೆದ 38 ವರ್ಷಗಳಿಂದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಲ್ಲದೇ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತಿ ಹೊಂದಿದ ಎಲ್.ಡಿ. ಶಿರೂರು ಮತ್ತು ಎಂ.ಎ. ಶೇಖ ಅವರನ್ನು ಕೆನರಾ ಡಿಸಿಸಿ ಬ್ಯಾಂಕಿನ ಭಟ್ಕಳ ತಾಲೂಕಿನ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

ನಿವೃತ್ತರಾದ ಇಬ್ಬರೂ ಅಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್‌. ವೈದ್ಯ ಅವರು, ಕೆನರಾ ಡಿಸಿಸಿ ಬ್ಯಾಂಕಿಗೆ ರಾಜ್ಯದಲ್ಲಿ ಉತ್ತಮ ಹೆಸರು ಇದ್ದು, ರಾಜ್ಯದ ಡಿಸಿಸಿ ಬ್ಯಾಂಕುಗಳ ಪೈಕಿ ಅತಿ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕು ಇದಾಗಿದೆ. 74 ಶಾಖೆಗಳನ್ನು ಹೊಂದಿರುವ ಬ್ಯಾಂಕು ಸುಭದ್ರವಾಗಿದ್ದು, ಅತ್ಯುತ್ತಮ ವ್ಯವಹಾರ ಮಾಡಿ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದರು.

ಜಾಲಿ ಸೊಸೈಟಿಯ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶಾಂತಾರಾಮ ನಾಯ್ಕ, ಪ್ರಗತಿಪರ ಕೃಷಿಕ ಕೇದಾರ ಕೊಲ್ಲೆ ಅವರು ಇಬ್ಬರು ಅಧಿಕಾರಿಗಳ ಉತ್ತಮ ಕಾರ್ಯನಿರ್ವಹಣೆ ಬಗ್ಗೆ ಮಾತನಾಡಿದರು. ಜಾಲಿ ಸೊಸೈಟಿ ಅಧ್ಯಕ್ಷ ಮಂಜಪ್ಪ ನಾಯ್ಕ ಮುಂತಾದವರಿದ್ದರು. ಕೆನರಾ ಡಿಸಿಸಿ ಬ್ಯಾಂಕಿನ ಭಟ್ಕಳ ಶಾಖೆಯ ವ್ಯವಸ್ಥಾಪಕ ಆರ್.ವಿ. ನಾಯ್ಕ ಸ್ವಾಗತಿಸಿದರು. ನಾಗರಾಜ ಹೆಗಡೆ ಸಾಲ್ಕೋಡ ಕಾರ್ಯಕ್ರಮ ನಿರೂಪಿಸಿದರು. ಭಟ್ಕಳ ಬಝಾರ ಶಾಖೆಯ ವ್ಯವಸ್ಥಾಪಕಿ ಶ್ವೇತಾ ದೈಮನೆ ವಂದಿಸಿದರು. ಹೊಸಳ್ಳಿ ಶಾಲೆಯಲ್ಲಿ ಕಲಿಕಾ ಹಬ್ಬ

ಯಲ್ಲಾಪುರ: ತಾಲೂಕಿನ ಕಿರವತ್ತಿ -1 ಕ್ಲಸ್ಟರಿನ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ ಮತ್ತು ಸಾಂಸ್ಕೃತಿಕ ಕಲರವ ನಡೆಯಿತು.ಸಭಾ ಕಾರ್ಯಕ್ರಮವನ್ನು ದೈಹಿಕ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಪ್ರಶಾಂತ್ ಜಿ.ಎನ್. ಮಾತನಾಡಿ, ಇಂದಿನ ಕಾರ್ಯಕ್ರಮ ಶಿಕ್ಷಕರ ಮತ್ತು ಮಕ್ಕಳ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಜಿಗಳೂರ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಶ್ರಮಿಸಿದ ಪ್ರತಿಯೊಬ್ಬರ ಕಾರ್ಯವೂ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಬೆಳಗಿನ ಅವಧಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಯಾರಿಸಿದ ಕಲಿಕಾ ಬೋಧನೋಪಕರಣಗಳ ಪ್ರದರ್ಶನ, ರಂಗೋಲಿ ಪ್ರದರ್ಶನ, ಲೇಝಿಮ್, ಹೂಪ್ಸ್ ಪ್ರದರ್ಶನ ನಡೆದವು.ಹಾಂಗ್ಯೋ ಐಸ್‌ಕ್ರೀಮ್‌ನ ಪಾಟೀಲ್ ಮತ್ತು ದೊಡ್ಲ ಹಾಲು ಡೈರಿಯ ಪ್ರಕಾಶ ಮತ್ತು ಜಗದೀಶ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷೆ ಸಂಗೀತಾ ಕೊಕರೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಸದಸ್ಯರಾದ ಬಮ್ಮು ಪಟಕಾರೆ, ಮಾಜಿ ಸದಸ್ಯ ಬಾಬು ಜಾನಕರ, ಸಿಆರ್‌ಪಿ ನಾಗರಾಜ ಗಂಗಾವಳಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಕಾಂಬಳೆ, ಯಲವಳ್ಳಿ ಶಾಲೆಯ ಮುಖ್ಯ ಶಿಕ್ಷಕ ಉದಯ ದೇವಕರ್, ಖಾರೇವಾಡ ಶಾಲೆಯ ಮುಖ್ಯ ಶಿಕ್ಷಕ ಮಾದರ್, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ನಾಯಕ, ನಾಗಪ್ಪ ಮರಾಠೆ, ದಾಂಡೇಲಿವಾಡ ಶಾಲೆಯ ಸಂತೋಷ ಮಾಸ್ತಿ ಮನೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿ ಗದ್ದೆಮನೆ ಸ್ವಾಗತಿಸಿದರು. ಸಹ ಶಿಕ್ಷಕಿ ಸುಪ್ರಿಯಾ ಮಾಸೂರ ಕಾರ್ಯಕ್ರಮ ನಿರ್ವಹಿಸಿದರು. ಆನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ