ಜಾಲತಾಣಗಳಿಂದ ಮಕ್ಕಳ ದೂರವಿಡಿ

KannadaprabhaNewsNetwork |  
Published : Nov 15, 2026, 01:15 AM IST
ಮಾಡಬೇಕು | Kannada Prabha

ಸಾರಾಂಶ

Keep children away from websites.

ದಾವಣಗೆರೆ: ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪ್ರೌಢಶಾಲೆಯಲ್ಲಿ ಶನಿವಾರ ಮಕ್ಕಳ ದಿನ ಆಚರಿಸಲಾಯಿತು. ಶಾಲೆಯ ಆಂಗ್ಲ ಮಾಧ್ಯಮ ಭಾಷಾ ಶಿಕ್ಷಕ ಕೆ.ಎಚ್.ಮಂಜುನಾಥ ಮಾತನಾಡಿ, ಮಕ್ಕಳಿಗೆ ಸೂಕ್ತ ಪೌಷ್ಠಿಕಾಂಶಯುಕ್ತ ಆಹಾರ, ಸೂಕ್ತ ಶಿಕ್ಷಣ ನೀಡುವ ಸಲುವಾಗಿ ಸರ್ಕಾರಗಳು ಶ್ರಮಿಸುತ್ತಿವೆ ಎಂದರು.

ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗಿ, ಅಮೂಲ್ಯ ಸಮಯ, ಶಿಕ್ಷಣ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ವಿರಾಮ ವೇಳೆಯಲ್ಲಿ ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಶಾಲಾ ಆಡಳಿತಾಧಿಕಾರಿ ಶ್ಯಾಮಲಾ, ಪ್ರಾಚಾರ್ಯ ಯುವರಾಜ್ ಕಾಂಬ್ಳೆ, ಮುಖ್ಯೋಪಾಧ್ಯಾಯಿನಿ ದಿಟ ಮೆನನ್, ಬಿ.ಎಂ.ಬಸವರಾಜಯ್ಯ, ಕಿರಿಯ ಪ್ರಾಥಮಿಕ ಶಾಲಾ ಶೈಕ್ಷಣಿಕ ಮಾರ್ಗದರ್ಶಕರಾದ ಅಪೇಕ್ಷಾ, ಶಿಕ್ಷಕರಾದ ರುದ್ರಾಚಾರ್, ಅನುಪಮ, ಮಕ್ಕಳು, ಪೋಷಕರು ಭಾಗವಹಿಸಿದ್ದರು.- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಹಂತದ ಸೇತುವೆ ಕಾಮಗಾರಿ ವೀಕ್ಷಣೆ
ದಡಿಘಟ್ಟದಲ್ಲಿ ಸಿಡಿಲುಕಲ್ಲು ಜಾತ್ರಾ ಮಹೋತ್ಸವ