ಮನೆ ಮೇಲೆ ಪ್ರಕ್ಷಿಗಳಿಗೆ ನೀರು,ಧಾನ್ಯ ಇಡಿ

KannadaprabhaNewsNetwork |  
Published : Mar 30, 2026, 03:30 AM IST
29ಐಎನ್‌ಡಿ9,ಇಂಡಿ ನಗರದ ವಿವಿಧ ವಾರ್ಡಗಳಲ್ಲಿರುವ ಮರಗಳಿಗೆ ಪಕ್ಷಿಗಳಿಗೆ ನೀರು ಕುಡಿಯಲು  ಶ್ರೀ ಯಶವಂತರಾಯಗೌಡ ವಿ ಪಾಟೀಲ ಪೌಂಡೇಶನ್‌ ವತಿಯಿಂದ ನೀರಿನ ತೊಟ್ಟಿ ಅಳವಡಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಪ್ರಕೃತಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ಪ್ರಾಣಿ, ಪಕ್ಷಿ, ಮನುಷ್ಯ ಬದುಕು ಸಾಗಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಪ್ರಕೃತಿಯನ್ನು ಪ್ರೀತಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರು, ಕಾಳು ಒದಗಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ದ ಅಧ್ಯಕ್ಷ ವಿಠಲಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪ್ರಕೃತಿ ಸಮತೋಲನ ಕಾಯ್ದುಕೊಂಡಾಗ ಮಾತ್ರ ಪ್ರಾಣಿ, ಪಕ್ಷಿ, ಮನುಷ್ಯ ಬದುಕು ಸಾಗಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರು ಪ್ರಕೃತಿಯನ್ನು ಪ್ರೀತಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರು, ಕಾಳು ಒದಗಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ಯಶವಂತರಾಯಗೌಡ ಪಾಟೀಲ ಫೌಂಡೇಶನ್‌ದ ಅಧ್ಯಕ್ಷ ವಿಠಲಗೌಡ ಪಾಟೀಲ ಹೇಳಿದರು.

ಅವರು ನಗರದ ವಾರ್ಡ್ 19 ರಲ್ಲಿ ಯಶವಂತರಾಯಗೌಡ ವಿ ಪಾಟೀಲ ಫೌಂಡೇಶನ್ ಹಮ್ಮಿಕೊಂಡ ಹಕ್ಕಿಗೊಂದು ಹನಿ ನೀರು ಅಭಿಯಾನ -2026 ಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾವಳಸಂಗ, ಬಬಲಾದ, ಜೇವೂರ ಹಾಗೂ ಇಂಡಿ ಸೇರಿದಂತೆ ಹಲವು ಕಡೆಗಳಲ್ಲಿ ಅರಣ್ಯ ಇಲಾಖೆ ಗಿಡ ಮರಗಳನ್ನು ಬೆಳೆಸುವುದರ ಜೊತೆ ಅರಣ್ಯ ಬೆಳವಣಿಗೆಗೆ ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದರು.

ಕೇವಲ ಅರಣ್ಯ ಇಲಾಖೆ ಗಿಡ, ಮರ ಬೆಳೆಸುವುದು, ಪ್ರಕೃತಿ ರಕ್ಷಣೆ ಮಾಡುವ ಕೆಲಸವಲ್ಲ. ಪ್ರತಿಯೊಬ್ಬರು ಪ್ರಕೃತಿಯನ್ನು ರಕ್ಷಿಸಬೇಕು. ಪ್ರತಿ ಮನೆಯ ಮುಂದೊಂದು ಗಿಡ ನೆಡುವ ಕೆಲಸ ಮಾಡಬೇಕು. ಬೇಸಿಗೆ ಇರುವುದರಿಂದ ನಮ್ಮಂತೆ ಪ್ರಾಣಿ, ಪಕ್ಷಿಗಳಿಗೂ ನೀರು ಅವಶ್ಯಕ. ಹೀಗಾಗಿ ಮನೆಯ ಮೇಲೆ, ಮರಗಳಲ್ಲಿ ನೀರಿನ ತೊಟ್ಟಿ ಇಟ್ಟು ಪಕ್ಷಿಗಳಿಗೆ ನೀರಿನ ದಾಹ ತೀರಿಸಿಕೊಳ್ಳಲು ಸಹಾಯ ಮಾಡಬೇಕು ಎಂದು ಹೇಳಿದರು.

ಬೇಸಿಗೆಯ ತೀವ್ರ ಬೀಸಿಲಿನ ತಾಪಕ್ಕೆ ಪ್ರಾಣಿ, ಪಕ್ಷಿಗಳು ಕುಡಿಯಲು ನೀರಿನಿಂದ ತೊಂದರೆ ಅನುಭವಿಸುತ್ತಿದ್ದು, ಅವುಗಳ ಬಾಯಾರಿಕೆ ನೀಗಿಸಲು ಯಶವಂತರಾಯಗೌಡ ವಿ ಪಾಟೀಲ ಫೌಂಡೇಶನ್‌ದಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ ನೀರಿನ ತೊಟ್ಟಿಗಳು ಮರಗಳಿಗೆ ಕಟ್ಟಿ ನೀರು ಇಡುವ ಕೆಲಸ ಮಾಡುತ್ತಿದ್ದು, ಇದಕ್ಕೆಲ್ಲಾ ನಮ್ಮ ಫೌಂಡೇಶನ್‌ ಸದಸ್ಯರು, ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಅರಣ್ಯ ಇಲಾಖೆಯ ಆರ್‌.ಎಫ್‌.ಓ ಎಸ್.ಜಿ.ಸಂಗಾಲಕ, ಮಂಜುನಾಥ ಧೂಳೆ ,ಧನರಾಜ ಮುಜಗೊಂಡ ಮಾತನಾಡಿದರು.

ಪುರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ, ನೀಲಕಂಠಗೌಡ ಪಾಟೀಲ, ಸುಧೀರ ಕರಕಟ್ಟಿ, ಸತೀಶ ಹತ್ತಿ, ಅವಿನಾಶ ಬಗಲಿ, ಸತೀಶ ಕುಂಬಾರ, ಸಣ್ಣಪ್ಪ ತಳವಾರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು