ಭೂಮಿ ಆರೋಗ್ಯ ಕಾಪಾಡುವುದು ಬಹಳ ಅವಶ್ಯ: ಚನ್ನಮಲ್ಲ ಸ್ವಾಮೀಜಿ

KannadaprabhaNewsNetwork |  
Published : Feb 01, 2024, 02:02 AM IST
ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಪ್ರಗತಿಪರ ರೈತ ಮಡಿವಾಳಪ್ಪ ಗಂಗಾ ಅವರ ತೋಟದಲ್ಲಿ ಬಾಳೆ ಬೆಳೆ ಕ್ಷೇತ್ರೋತ್ಸನ ನಡೆಯಿತು.  | Kannada Prabha

ಸಾರಾಂಶ

ಭೂಮಿಯ ಆರೋಗ್ಯ ಕಾಪಾಡುವುದು ಬಹಳ ಅವಶ್ಯವಾಗಿದ್ದು ಭೂಮಿಗೆ ಬರುವ ರೋಗಗಳ ತಡೆಗೆ ಬೇಕಾದ ಔಷಧೋಪಚಾರವನ್ನು ರೈತರು ಮಾಡಬೇಕು.

ಕನ್ನಡಪ್ರಭ ವಾರ್ತೆ ಚವಡಾಪುರ

ನಮ್ಮ ದೇಹಕ್ಕೆ ಅನಾರೋಗ್ಯವಾದಾಗ ವೈದ್ಯರ ಬಳಿ ಓಡಿ ಹೋಗುತ್ತೇವೆ. ರೋಗಕ್ಕೆ ಬೇಕಾದ ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಹಾಗೆಯೇ ಭೂಮಿಯ ಆರೋಗ್ಯ ಕಾಪಾಡುವುದು ಬಹಳ ಅವಶ್ಯವಾಗಿದ್ದು ಭೂಮಿಗೆ ಬರುವ ರೋಗಗಳ ತಡೆಗೆ ಬೇಕಾದ ಔಷಧೋಪಚಾರವನ್ನು ರೈತರು ಮಾಡಬೇಕೆಂದು ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.

ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಪ್ರಗತಿಪರ ರೈತ ಮಡಿವಾಳಪ್ಪ ಗಂಗಾ ಅವರ ತೋಟದಲ್ಲಿ ಯುನೈಟೆಡ್ ಕ್ರಾಪ್‌ ಕೇರ್ ಕಂಪನಿ ವತಿಯಿಂದ ನಡೆದ ಬಾಳೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು ನಮ್ಮ ಭೂಮಿಗೆ ಬಗೆ ಬಗೆಯ ಕ್ರೀಮಿನಾಶಕ, ಔಷಧಗಳನ್ನು ಸಿಂಪಡಿಸಿ ಮಣ್ಣಿನ ಆರೋಗ್ಯವನ್ನು ಹದಗೆಡಿಸಿದ್ದೇವೆ. ಹೀಗಾಗಿ ಆದಷ್ಟು ನಮ್ಮ ರೈತರು ಸಾವಯವ ಔಷಧಗಳನ್ನು ಹೆಚ್ಚು ಬಳಕೆ ಮಾಡಬೇಕು. ಯುನೈಟೆಡ್ ಕ್ರಾಪ್‌ ಕೇರ್ ಕಂಪನಿಯವರು ಸಾವಯವ ಔಷಧಿಗಳನ್ನು ಪರಿಚಯಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅವುಗಳನ್ನು ರೈತರು ಬಳಸಿ ಉತ್ತಮ ಇಳುವರಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಯುನೈಟೆಡ್ ಕ್ರಾಪ್ ಕೇರ್ ಕಂಪನಿಯ ರಿಜನಲ್ ಮ್ಯಾನೇಜರ್ ರಾಜಕುಮಾರ ಎಂ.ಕೆ, ಏರಿಯಾ ಮ್ಯಾನೇಜರ್ ಬಸಪ್ಪ ಬಂಡಿ ಮಾತನಾಡಿ ನಮ್ಮ ಕಂಪನಿಯ ಉತ್ಪನ್ನಗಳು ರೈತಸ್ನೇಹಿಯಾಗುವುದರ ಜೊತೆಗೆ ಮಣ್ಣಿನ ಆರೋಗ್ಯ ಕಾಪಾಡುವಂತವು ಆಗಿವೆ. ಕಂಪನಿಯ ಟೀಕಾ ಎನ್ನುವ ಔಷಧ ಸರ್ವ ಬೆಳೆಗಳಿಗೂ ಉಪಯುಕ್ತವಾಗಿದ್ದು ಇದರಿಂದ ಬೀಜೋಪಚಾರ ಮಾಡಬಹುದು, ಇದರಿಂದ ಮಣ್ಣಿನ ಆರೋಗ್ಯ ಉತ್ತಮಗೊಳ್ಳುತ್ತದೆ. ಇಳುವರಿ ಉತ್ತಮವಾಗಿ ಬರುತ್ತದೆ. ಅಲ್ಲದೆ ನಮ್ಮ ಕಂಪನಿಯ ಔಷಧಿಗಳಿಂದ ಯಾವುದೇ ತರಹದ ಬೆಳೆಗಳಿಗೂ ದುಷ್ಪರಿಣಾಮ ಬೀರುವುದಿಲ್ಲ. ನಮ್ಮ ಉತ್ಪನ್ನಗಳನ್ನು ಬಳಸಿ ಲಾಭ ಮಾಡಿಕೊಂಡ ರೈತರ ಸಾಕ್ಷಾತ ನಿದರ್ಶನ ಪಡೆದುಕೊಂಡು ರೈತರು ನಮ್ಮ ಉತ್ಪನ್ನಗಳ ಖಾತರಿ ಪಡೆದುಕೊಳ್ಳಬಹುದಾಗಿದೆ ಎಂದ ಅವರು ನಮ್ಮ ಕಂಪನಿಯ ಔಷಧಿಗಳು, ಉತ್ಪನ್ನಗಳು ಎಲ್ಲಾ ಕಡೆ ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ದೊರಕುತ್ತವೆ ಎಂದರು.

ಪ್ರಗತಿಪರ ರೈತ ಮಡಿವಾಳಪ್ಪ ಗಂಗಾ ಮಾತನಾಡಿ ಯುನೈಟೆಡ್ ಕ್ರಾಪ್ ಕೇರ್ ಕಂಪನಿಯ ಉತ್ಪನ್ನಗಳನ್ನ ನಾನು 2 ವರ್ಷಗಳಿಂದ ಬಳಸುತ್ತಿದ್ದೇನೆ. ಉತ್ತಮ ಇಳುವರಿ ಬರುವುದರ ಜೊತೆಗೆ ಮಣ್ಣಿನ ಆರೋಗ್ಯ ಉತ್ತಮವಾಗಿಡಲು ಸಹಾಯವಾಗುತ್ತದೆ, ಹೀಗಾಗಿ ರೈತರು ಈ ಕಂಪನಿಯ ಔಷಧಿಗಳನ್ನು ವಿಶ್ವಾಸವಿಟ್ಟು ಬಳಕೆ ಮಾಡಿ ಲಾಭ ಮಾಡಿಕೊಳ್ಳಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಚಯ್ಯ ಸ್ವಾಮಿ, ಶರಣಬಸಪ್ಪ ಅತನೂರೆ, ರಾಜಶೇಖರ ಜಮಾಣಿ, ಸಂಜು ಪಾಟೀಲ್, ಶ್ರೀಮಂತ ಜಾಧವ, ಸೈಯದ ಪಟೇಲ್, ಮಹಾದೇವ ಉಡಗಿ, ಶ್ರೀಶೈಲ್ ಗೋಳೆ, ಸಿದ್ದಣ್ಣ ಚಲಗೇರಿ, ಲಕ್ಷ್ಮೀಪುತ್ರ ಮಾತಾರಿ, ಮರೇಪ್ಪ ಸಿಂಗೆ, ನಾಗೇಶ ಭತ್ತಾ, ಮಂಜುನಾಥ ಆನೂರ, ಜಗನ್ನಾಥ ಪಾಟೀಲ, ಪ್ರಕಾಶ ಖೈರಾಟ, ಬಸವಂತ್ರಾಯ ಸಾಲೆಗಾಂವ, ಗಿರೀಶ ಉಡಗಿ, ಶರಣು ಪರೀಟ ಸೇರಿದಂತೆ ಬಡದಾಳ, ಬಳೂರ್ಗಿ, ಅರ್ಜುಣಗಿ, ರೇವೂರ(ಬಿ), ಚಿಂಚೋಳಿ ಗ್ರಾಮಗಳ ರೈತರು ಇದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ