ಗಿರಿಧಾಮಕ್ಕೆ ಸರ್ವಋತು ರಸ್ತೆ ನಿರ್ಮಾಣ । ಪ್ರವಾಸಿಗರಿಗೆ ನಿತ್ಯ ವಾಹನ ಸಂಚಾರ ಇತ್ಯಾದಿ ಮೂಲ ಸೌಲಭ್ಯಗಳು ಅಗತ್ಯ
ಬಡವರ ಊಟಿ ಎಂದೇ ಪ್ರಖ್ಯಾತಿ ಗಳಿಸಿರುವ ಶ್ರೀಸಾಮಾನ್ಯರ ನೆಚ್ಚಿನ ಪ್ರವಾಸಿ ತಾಣ ತರೀಕೆರೆ ತಾಲೂಕಿನ ಪ್ರಕೃತಿದತ್ತ ಸುಂದರ ಗಿರಿಧಾಮ ಕೆಮ್ಮಣ್ಣುಗುಂಡಿಯನ್ನು ಪ್ರಸ್ತುತ ಕಾಲಕ್ಕನುಗುಣವಾಗಿ ಸಂಪೂರ್ಣ ಅಭಿವೃದ್ಧಿ ಪಡಿಸುವ ಅಗತ್ಯವಿದೆ.
ಕೆಮ್ಮಣ್ಣುಗುಂಡಿ ನೈಸರ್ಗಿಕ ಸೌಂದರ್ಯದ ಕಣಜ ಈ ಪ್ರದೇಶದಲ್ಲಿ ಪ್ರಕೃತಿದತ್ತ ಗುಡ್ಡ ಬೆಟ್ಟಗಳು-ಗಿರಿಶ್ರೇಣಿಗಳು, ಅಮೂಲ್ಯವಾದ ಔಷಧ ಸಸ್ಯ ಸಂಪತ್ತು, ವರ್ಷಪೂರ್ತಿ ಆಯಾ ಕಾಲಕ್ಕೆ ಹೊಂದಿಕೊಂಡಂತೆ ಇರುವ ವಾತಾವರಣ, ಅಪರೂಪವೆನಿಸುವ ಮತ್ತು ವೈವಿದ್ಯಮಯವಾದ ತರಹೆ ವಾರಿನ ಹೂದೋಟಗಳು, ಕೆಮ್ಮಣಗುಂಡಿ ಸುತ್ತಮುತ್ತ ಇರುವ ಕಣ್ಮನ ತಣಿಸುವ ಜಲಧಾರೆಗಳು, ಜಲಪಾತಗಳು, ಸಣ್ಣಪುಟ್ಟ ತೊರೆಗಳು, ಆಕಾಶ ದೆತ್ತರಕ್ಕೆ ಬೆಳೆದು ನಿಂತ ವೃಕ್ಷರಾಶಿ ಇವುಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ.ಸೂರ್ಯಾಸ್ಥಮಾನಃ
ಕೆಮ್ಮಣ್ಣುಗುಂಡಿಯಲ್ಲಿ ಮೋಡಗಳಂತೆ ಭಾಸವಾಗುವ ಪ್ರಕೃತಿದತ್ತ ಗಿರಿಶ್ರೇಣಿಗಳನ್ನು ಅವರಿಸಿದ ನೀಲಿ ಆಕಾಶದ ಸುಂದರ ಛಾವಣಿ ಕ್ಷಣಕಾಲ ಪ್ರವಾಸಿಗರನ್ನು ನಿಬ್ಬೆರಗಾಗಿಸುತ್ತದೆ. ಪ್ರಕೃತಿಯ ಸೊಬಗನ್ನೆಲ್ಲ ಹೊತ್ತು ನೀಂತ ಈ ಬಹು ಆಕರ್ಷಿತ ಪ್ರವಾಸಿ ತಾಣಕ್ಕೆ ಈ ಹಿಂದೆ ವರ್ಷಪೂರ್ತಿ ನಿತ್ಯ ಪ್ರವಾಸಿಗರು ಬಂದು ಹೋಗುವ ಪರಿಪಾಠ ಇತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಶ್ರೀಸಾಮಾನ್ಯರು, ನಾಡಿನ ಗಣ್ಯಾತಿ ಗಣ್ಯರು, ಚಲನಚಿತ್ರ ನಟರು, ಚಾರಣಪ್ರಿಯರು, ಪರಿಸರ ಪ್ರೇಮಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ ಭೇಟಿ ನೀಡಿ ಪ್ರವಾಸಿ ಧಾಮದಲ್ಲಿ ತಂಗಿ ಗಿರಿಧಾಮದ ಪ್ರಕೃತಿದತ್ತ ದೃಶ್ಯಗಳನ್ನು ಮನಸಾರೆ ಸಂತೋಷ ಪಟ್ಟು ಸವಿಯುತ್ತಿದ್ದರು.
ಈ ಗಿರಿಧಾಮಕ್ಕೆ ಪ್ರವಾಸಿಗರು ಬಂದು ಹೋಗಲು ಚಿಕ್ಕಮಗಳೂರು, ತರೀಕೆರೆ, ಕಡೂರು, ಬೀರೂರು, ಲಿಂಗದಹಳ್ಳಿ ಇತ್ಯಾದಿ ಕಡೆಗಳಿಂದ ಸರ್ಕಾರಿ ವಾಹನಗಳ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡಬೇಕಿದೆ.ಜತೆಗೆ ಕೆಮ್ಮಣಗುಂಡಿ ಗಿರಿಧಾಮಕ್ಕೆ ನಾಮಫಲಕಗಳ ದಿಕ್ಸೂಚಿ, ಕೆಮ್ಮಣಗುಂಡಿ ಗಿರಿಧಾಮದ ಅನೇಕ ಆಕರ್ಷಣೀಯ ಸ್ಥಳಗಳ ಚಿತ್ರಣ ಹೊಂದಿರುವ ಫಲಕಗಳನ್ನು ಮುಖ್ಯವಾದ ಆಯಕಟ್ಟಿನ ಸ್ಥಳಗಳಲ್ಲಿ ಇಲಾಖೆ ಪ್ರದರ್ಶಿಸಬೇಕು.
ಕೆಮ್ಮಣ್ಣುಗುಂಡಿ ಗಿರಿಧಾಮ 1473 ಮೀ. ಸಮುದ್ರ ಮಟ್ಟದಿಂದ ಎತ್ತರದಲ್ಲಿದ್ದು ಹವಾಗುಣದಲ್ಲಿ ಮಳೆ ವಾರ್ಷಿಕವಾಗಿ 100 ಅಂಗುಲ ಕ್ಕಿಂತ ಹೆಚ್ಚಾಗಿ ಸುರಿಯುವುದರ ಜೊತೆಗೆ ಚಳಿಗಾಲದಲ್ಲಿ ಉಷ್ಣಾಂಶ 08 ಸೆಲ್ಸಿಯಸ್ ನಿಂದ ಬೇಸಿಗೆ ಕಾಲದಲ್ಲಿ 28 ಸೆಲ್ಸಿಯಸ್ ಮೀರದಂತೆ ತಂಪಾದ ಸಹನೀಯ ವಾತಾವರಣ ಹೊಂದಿರುತ್ತದೆ. ದಕ್ಷಿಣ ಭಾರತದಲ್ಲಿಯೇ ರಮಣೀಯ ಕ್ಷೇತ್ರವಾದ ಕೆಮ್ಮಣ್ಣುಗುಂಡಿ ಕರ್ನಾಟಕದ ಹೆಮ್ಮೆ.24ಕೆಟಿಆರ್.ಕೆ.10ಃ