ಯಲ್ಲಾಪುರ: ನಾಡಪ್ರಭು ಕೆಂಪೇಗೌಡ ಬೆಂಗಳೂರಿನ ಸೃಷ್ಟಿಕರ್ತ, ಅವರ ದೂರದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರು ಇಂದು ಎಷ್ಟೇ ಬೆಳೆದರೂ ಬೆಳೆಯಲು ಅವಕಾಶವಿದೆ. ಅಂತಹ ಅವರ ಯೋಚನೆ ಇತ್ತು. ಅವರ ವಾಸ್ತುಶಿಲ್ಪ, ನೀರಿನ ನಿರ್ವಹಣೆ ಅದ್ಭುತವಾಗಿತ್ತು ಎಂದು ತಹಸೀಲ್ದಾರ್ ಅಶೋಕ ಭಟ್ಟ ತಿಳಿಸಿದರು.
ಮಳೆ ನೀರನ್ನು ಇಂಗಲು ಸಾವಿರಾರು ಕೆರೆಗಳನ್ನು ಕಟ್ಟಿದರು. ರಾಜಧಾನಿಯಾಗಿದ್ದ ಮೈಸೂರನ್ನು ಬಿಟ್ಟು ಜನರು ಬೆಂಗಳೂರಿನ ಕಡೆ ದೃಷ್ಟಿ ಹಾಯಿಸುವಂತೆ ಮಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸರ್ಕಾರಿ ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಡುವಂತಾಗಬೇಕು ಎಂದರು.
ವಿಶ್ವದರ್ಶನ ಪಿಯು ಕಾಲೇಜು ಪ್ರಾಂಶುಪಾಲ ಡಾ. ಡಿ.ಕೆ. ಗಾಂವ್ಕರ್ ಉಪನ್ಯಾಸ ನೀಡಿ, ದೃಷ್ಟಿ ಬದಲಾಯಿಸಿದರೆ ಆಗ ದೃಶ್ಯ ಬದಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚೆಗೆ ಭಾರತವನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಅಂತೆಯೇ ಬೆಂಗಳೂರಿನ ಸ್ಥಾಪನೆಯ ಸಮಯದಲ್ಲಿ ದೂರದೃಷ್ಟಿಯ ಹಿನ್ನೆಲೆಯಲ್ಲಿ ಇಂದಿನ ಬೆಂಗಳೂರು ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು.ಜಯಂತಿ ಅಂಗವಾಗಿ ನಡೆದ ವಿವಿದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀರಕ್ಷಾ ವೆರ್ಣೇಕರ್ ಕೆಂಪೇಗೌಡರ ಕುರಿತು ಮಾತನಾಡಿದರು.
ಸಂಗೀತಾ ಸಂಗಡಿಗರ ಪ್ರಾರ್ಥನೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಸ್ವಾಗತಿಸಿದರು. ಶಿಕ್ಷಕರಾದ ಜ್ಯೋತಿ ನಾಯ್ಕ ನಿರ್ವಹಿಸಿದರು. ನಾರಾಯಣ ನಾಯಕ ವಂದಿಸಿದರು.ನಾಡಪ್ರಭು ಕೆಂಪೇಗೌಡರ ಸಾಧನೆ ಮಾದರಿ
ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಆರ್‌ಸಿ ಹರ್ಷಿತಾ ಗಾಂವಕರ, ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಹಮ್ಮಣ್ಣ ನಾಯಕ ವೇದಿಕೆಯಲ್ಲಿದ್ದರು. ಬೆಳಸೆ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯ ಶಿಕ್ಷಕಿ ಜಯಶ್ರೀ ನಾಯಕ ನೇತೃತ್ವದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಹಿರಿಯ ಉಪನ್ಯಾಸಕ ಮಂಜುನಾಥ ಇಟಗಿ, ಉಪನ್ಯಾಸಕಿ ರೇಷ್ಮಾ ನಾಯಕ, ಉಪನ್ಯಾಸಕ ಮಾರುತಿ ಹರಿಕಂತ್ರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.