ಕನ್ನಡಪ್ರಭ ವಾರ್ತೆ ತುರುವೇಕೆರೆ
ಲೂಕಿನ ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ತಾವರೇಕೆರೆ ಕೆಂಪೇಗೌಡ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷರಾಗಿದ್ದ ಎಲ್.ಎ. ಗಂಗಾಧರಯ್ಯ ಅವರು ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ತಾವರೇಕೆರೆ ಕ್ಷೇತ್ರದ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯ ಕೆಂಪೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಾಗಿ ಕೆಂಪೇಗೌಡರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ವೇಳೆ ನೂತನ ಅಧ್ಯಕ್ಷರಾದ ತಾವರೇಕೆರೆ ಕೆಂಪೇಗೌಡರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ತಾವರೇಕೆರೆ ಕೆಂಪೇಗೌಡರನ್ನು, ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಮ್ಮ, ಸದಸ್ಯರಾದ ರೇಣುಕಪ್ಪ, ಅಲ್ಲಪ್ಪ, ಗಂಗಾಧರಯ್ಯ, ಕೃಷ್ಣಪ್ಪ, ಕೋಮಲ, ಮಂಜುಳಮ್ಮ, ವನಮಾಲಾ ಮುಖಂಡರಾದ ತಾವರೇಕೆರೆ ಬೋರೇಗೌಡ, ಕಣತೂರು ಪ್ರಸನ್ನ, ತಾಲೂಕು ಜೆಡಿಎಸ್ ನ ಸಂಘಟನಾ ಕಾರ್ಯದರ್ಶಿ ಹರಿದಾಸನಹಳ್ಳಿ ಶಶಿಧರ್, ರುದ್ರೇಶ್, ಮಹಾಲಿಂಗಪ್ಪ, ವಿಶ್ವನಾಥ್ ಸೇರಿದಂತೆ ಹಲವಾರು ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷ ತಾವರೇಕೆರೆ ಕೆಂಪೇಗೌಡರು ಮಾತನಾಡಿ, ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿವೆ. ಹಲವಾರು ಮಂದಿ ವಸತಿ ರಹಿತರಾಗಿದ್ದಾರೆ. ಅವರಿಗೆ ಮನೆ ಕೊಡಿಸುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು. ತಮ್ಮನ್ನು ಅಧ್ಯಕ್ಷ ಗಾದಿಗೆ ಕೂರಿಸಲು ಸಹಕರಿಸಿದ ಶಾಸಕರಾದ ಎಂ.ಟಿ. ಕೃಷ್ಣಪ್ಪ ಹಾಗೂ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿಯ ಎಲ್ಲಾ ಸದಸ್ಯರಿಗೆ ಹಾಗೂ ಲೋಕಮ್ಮನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಜನತೆಗೆ ಕೃತಜ್ಞತೆಯನ್ನು ಸಲ್ಲಿಸುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಪಿಡಿಒ ಬಿ.ಕೆ. ಲಿಂಗರಾಜೇಗೌಡ, ಬಿಲ್ ಕಲೆಕ್ಟರ್ ಷಡಕ್ಷರಿ, ಕಂಪ್ಯೂಟರ್ ಆಪರೇಟರ್ ನಳಿನಾ ಉಪಸ್ಥಿತರಿದ್ದರು. ಲೋಕಮ್ಮನಹಳ್ಳಿ ಪಂಚಾಯಿತಿಯಲ್ಲಿ ೧೭ ಸದಸ್ಯರು ಇದ್ದು ಇಂದಿನ ಚುನಾವಣೆ ಸಂಧರ್ಭದಲ್ಲಿ ೯ ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.