ಬೇತಮಂಗಲದಲ್ಲಿ ಕೆಂಪೇಗೌಡ ಜಯಂತಿ

KannadaprabhaNewsNetwork |  
Published : Jul 28, 2025, 12:31 AM IST
27ಕೆಜಿಎಫ್‌1 | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ದೂರದಿಂದ ಬರುವಂತ ಜನರಿಗೆ ಅನುಕೂಲವಾಗಲೆಂದು ಸುಮಾರು ೬೪ ಪೇಟೆಗಳನ್ನ ನಿರ್ಮಾಣ ಮಾಡಿದರು. ಕೆಂಪೇಗೌಡ ಜಯಂತಿಯನ್ನ ಮಾಡುವುದು ಕೇವಲ ಒಕ್ಕಲಿಗರಿಗೆ ಮಾತ್ರ ಹೆಮ್ಮೆಯ ವಿಷಯವಾಗಿ ಉಳಿದಿಲ್ಲ. ನಾಡಿನ ಎಲ್ಲ ಸಮುದಾಯಗಳಿಗೂ ಹೆಮ್ಮೆಯ ವಿಷಯವಾಗಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್ ನೂರಾರು ವರ್ಷಗಳ ಹಿಂದೆ ಕೆಂಪೇಗೌಡರು ಯಾವ ಯಾವ ಸಮುದಾಯಗಳಿಗೆ ಸಹಾಯ ಮಾಡಿದ್ದರೋ ಆ ಎಲ್ಲ ಸಮುದಾಯಗಳು ಇವತ್ತು ಕೆಂಪೇಗೌಡ ಜಯಂತಿಯನ್ನ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ಕೆಜಿಎಫ್ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ಹೇಳಿದರು.ಬೇತಮಂಗಲದಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡರ ೫೧೬ ನೇ ಜಯಂತಿಯಲ್ಲಿ ಮಾತನಾಡಿ, ಧೈರ್ಯ ಇರುವ ವ್ಯಕ್ತಿ ತನ್ನ ಜನರಿಗಾಗಿ ಏನು ಬೇಕಾದರೂ ಮಾಡಬಲ್ಲ ಎಂಬುದಕ್ಕೆ ಕೆಂಪೇಗೌಡರೇ ಜೀವಂತ ಸಾಕ್ಷಿ ಎಂದರು.

ವೃತ್ತಿಗೆ ತಕ್ಕಂತೆ ಪೇಟೆ ನಿರ್ಮಾಣ

ಬೆಂಗಳೂರಿನಲ್ಲಿ ವ್ಯಾಪಾರ ವ್ಯವಹಾರಗಳಿಗೆ ದೂರದಿಂದ ಬರುವಂತ ಜನರಿಗೆ ಅನುಕೂಲವಾಗಲೆಂದು ಸುಮಾರು ೬೪ ಪೇಟೆಗಳನ್ನ ನಿರ್ಮಾಣ ಮಾಡಿದರು. ಕೆಂಪೇಗೌಡ ಜಯಂತಿಯನ್ನ ಮಾಡುವುದು ಕೇವಲ ಒಕ್ಕಲಿಗರಿಗೆ ಮಾತ್ರ ಹೆಮ್ಮೆಯ ವಿಷಯವಾಗಿ ಉಳಿದಿಲ್ಲ. ನಾಡಿನ ಎಲ್ಲ ಸಮುದಾಯಗಳಿಗೂ ಹೆಮ್ಮೆಯ ವಿಷಯವಾಗಿದೆ.ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಅಲ್ಲದೇ ಅವರೊಬ್ಬ ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ವiಹಾನ್ ಮಾನವತಾವಾದಿಯಾಗಿದ್ದರು ಅಭಿವೃದ್ದಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ದಿ, ನೀರಾವರಿ ಸೇರಿದಂತೆ ಅನೇಕ ಕ್ಷೆತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗೋಣವೆಂದರು.

ಉದ್ಯೋಗದಾತರಿಗೆ ಆಶ್ರಯ

ಒಕ್ಕಲಿಗರ ಸಮುದಾಯದ ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ್ ಮಾತನಾಡಿ, ಬೆಂದಕಾಳೂರು ಎಂಬ ನಗರವನ್ನು ಕಟ್ಟುವ ಮೂಲಕ ಬೆಂಗಳೂರು ಎಂಬ ಹೆಸರಿನ ನಗರವಿಂದು ಜಗತ್ಪೃಸಿದ್ದ ನಗರವಾಗಿ ಬೆಳೆಯಲು ಕಾರಣರಾದವರು ಬೆಂಗಳೂರು ಪ್ರಾಂತ್ಯದ ಅರಸ ಕೆಂಪೇಗೌಡ ಉದ್ಯಾನ ನಗರಿ,ಉದ್ಯೋಗಿಗಳ ಉದ್ಯೋಗದಾತರ ಆಶ್ರಯ ತಾಣವಾಗಿದ್ದು, ಕೆಂಪೇಗೌಡರು ದೂರದೃಷ್ಟಿಯನ್ನು ಹೊಂದಿದ್ದAತಹ ಮಹಾನ್ ವ್ಯಕ್ತಿಯಾಗಿದ್ದರು ಎಂದರು.ಕೆಂಪೇಗೌಡ ಜಯಂತಿ ಅಂಗವಾಗಿ ಬೇತಮಂಗಲ ಗ್ರಾಮಾಂತ್ರರ ಪ್ರದೇಶದಿಂದ ಸಮುದಾಯದ ೧೫ ಕ್ಕೂ ಹೆಚ್ಚು ಕೆಂಪೇಗೌಡರ ಸ್ತಬ್ಧಚಿತ್ರಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಲಾಯಿತು, ಬೇತಮಂಗಲ ಬಸ್ ನಿಲ್ದಾಣದಲ್ಲಿ ಸಂಜೆ ರಸಮಂಜರಿ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?